ವಿಶಾಖಪಟ್ಟಣದಲ್ಲಿ ಸಾಗುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಿದೆ. ಓಪನರ್ಗಳಾದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಅವರ ಅಮೋಘ ಶತಕ ಹಾಗೂ ರಿಷಭ್ ಪಂತ್ -ಶ್ರೇಯಸ್ ಐಯರ್ ಸ್ಫೋಟಕ ಆಟದ ನೆರವಿನಿಂದ ವಿಂಡೀಸ್ಗೆ ಗೆಲ್ಲಲು 388 ರನ್ಗಳ ಟಾರ್ಗೆಟ್ ನೀಡಿದೆ.
ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ವಿಂಡೀಸ್ ಆಟಗಾರರಿಗೆ ತಲೆನೋವಾಗಿ ಪರಿಣಮಿಸಿದ್ದು ಸುಳ್ಳಲ್ಲ. ಮೊದಲ ಓವರ್ನಿಂದಲೇ ಬಿರುಸಿನ ಆಟದ ಮೊರೆಹೋದ ರೋಹಿತ್- ರಾಹುಲ್ 227 ರನ್ಗಳ ಅಮೋಘ ಜೊತೆಯಾಟ ಆಡಿದರು.
India vs West Indies Live: ರೋಹಿತ್-ರಾಹುಲ್ ಶತಕ, ಪಂತ್-ಐಯರ್ ಸ್ಫೋಟಕ ಆಟ; ಭಾರತ: 387/5
ರಾಹುಲ್ 104 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಬಾರಿಸಿ 102 ರನ್ಗೆ ಔಟಾದರೆ, ರೋಹಿತ್ ಶರ್ಮಾ 159 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ನಡುವೆ ಹಿಟ್ಮ್ಯಾನ್ ಸಿಡಿಸಿದ ಒಂದು ಸಿಕ್ಸ್ ಭಾರೀ ವೈರಲ್ ಆಗುತ್ತಿದೆ.
36ನೇ ಓವರ್ನಲ್ಲಿ ಜೇಸನ್ ಹೋಲ್ಡರ್ ಬೌಲಿಂಗ್ನ ಕೊನೆಯ ಎಸೆತದಲ್ಲಿ ರೋಹಿತ್ ವಿಕೆಟ್ ಬಿಟ್ಟು ನಿಂತು ಪಿಚ್ ಮೇಲೆ ಬಿದ್ದು ಸಿಕ್ಸ್ ಚಚ್ಚಿದರು. ತಾನು ಬಾರಿಸಿದ ಸಿಕ್ಸ್ ಕಂಡು ಸ್ವತಃ ರೋಹಿತ್ ಅವರೇ ಒಮ್ಮೆ ಶಾಕ್ ಆದರು.
ಇನ್ನು ಈ ಪಂದ್ಯದಲ್ಲಿ ರೋಹಿತ್ ನೂತನ ದಾಖಲೆ ಬರೆದಿದ್ದಾರೆ. ಒಟ್ಟು 77 ಸಿಕ್ಸರ್ನೊಂದಿಗೆ ಈ ವರ್ಷ ಅತಿ ಹೆಚ್ಚು ಸಿಕ್ಸ್ ಚಚ್ಚಿದ ಬ್ಯಾಟ್ಸ್ಮನ್ ರೋಹಿತ್ ಆಗಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ 150 ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ಖ್ಯಾತಿಗೆ ರೋಹಿತ್ ಪಾತ್ರರಾಗಿದ್ದಾರೆ. ಇವರು ಒಟ್ಟು 8 ಬಾರಿ 150+ ರನ್ ಕಲೆಹಾಕಿದ್ದಾರೆ. 2ನೇ ಸ್ಥಾನದಲ್ಲಿ ಡೇವಿಡ್ ವಾರ್ಮರ್(6 ಬಾರಿ) ಇದ್ದಾರೆ.
ಪಾನಿ ಪೂರಿ ಮಾರುತ್ತಿದ್ದ ಹುಡುಗ ಇಂದು ಟೀಂ ಇಂಡಿಯಾ ಆಟಗಾರ
ಇನ್ನು ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ 227 ರನ್ಗಳ ಅಮೋಘ ಜೊತೆಯಾಟ ಆಡಿ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಅವರ 17 ವರ್ಷದ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿತು. ರೋಹಿತ್- ರಾಹುಲ್ ಶತಕ ಹಾಗೂ ಅಂತಿಮ ಹಂತದಲ್ಲಿ ರಿಷಭ್ ಪಂತ್- ಶ್ರೇಯಸ್ ಐಯರ್ ಸ್ಫೋಟಕ ಆಟದ ನೆರವಿನಿಂದ ಭಾರತ 50 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ