Rohit Sharma: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಒಡೆದ ರೋಹಿತ್; ಕೊಹ್ಲಿ-ಗೇಲ್ ದಾಖಲೆ ಉಡೀಸ್

Rohit Sharma: ರೋಹಿತ್ 106 ಸಿಕ್ಸರ್ ಸಿಡಿಸುವ ಮೂಲಕ ಅತಿ ಹೆಚ್ಚು ಸಿಕ್ಸ್​ ಬಾರಿಸಿದ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಅಂಟಿಸಿಕೊಂಡಿದ್ದಾರೆ.

Vinay Bhat | news18
Updated:August 4, 2019, 10:23 PM IST
Rohit Sharma: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಒಡೆದ ರೋಹಿತ್; ಕೊಹ್ಲಿ-ಗೇಲ್ ದಾಖಲೆ ಉಡೀಸ್
ರೋಹಿತ್ ಶರ್ಮಾ
  • News18
  • Last Updated: August 4, 2019, 10:23 PM IST
  • Share this:
ಬೆಂಗಳೂರು (ಆ. 04): ಫ್ಲೋರಿಡಾದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತ ರೋಹಿತ್ ಶರ್ಮಾರ ಅರ್ಧಶತಕದ ನೆರವಿನಿಂದ 168 ರನ್ ಕಲೆಹಾಕಿದೆ. ಈ ಮಧ್ಯೆ ಹಿಟ್​ಮ್ಯಾನ್ ರೋಹಿತ್ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​​ನಲ್ಲಿ ಎರಡು  ಹೊಸ ದಾಖಲೆ ನಿರ್ಮಿಸಿದ್ದಾರೆ.

ಇಂದಿನ ಎರಡನೇ ಟಿ-20 ಪಂದ್ಯದಲ್ಲಿ ರೋಹಿತ್ 2ನೇ ಸಿಕ್ಸರ್​ ಸಿಡಿಸುತ್ತಿದ್ದಂತೆ ಟಿ-20 ಕ್ರಿಕೆಟ್​ನಲ್ಲಿ ಕ್ರಿಸ್​ ಗೇಲ್​ ದಾಖಲೆಯನ್ನು ಮುರಿದರು.

ಗೇಲ್ 58 ಪಂದ್ಯಗಳಲ್ಲಿ ಒಟ್ಟು 105 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದರೆ ಇದೀಗ ರೋಹಿತ್ 106 ಸಿಕ್ಸರ್ ಸಿಡಿಸುವ ಮೂಲಕ ಅತಿ ಹೆಚ್ಚು ಸಿಕ್ಸ್​ ಬಾರಿಸಿದ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಅಂಟಿಸಿಕೊಂಡಿದ್ದಾರೆ.

 India Vs West Indies Live Score: 168 ಟಾರ್ಗೆಟ್; ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡ ವಿಂಡೀಸ್

ಇದಿಷ್ಟೆ ಅಲ್ಲದೆ ವಿರಾಟ್ ಕೊಹ್ಲಿ ಅವರ ದಾಖಲೆಯನ್ನೂ ಮುರಿಯುವಲ್ಲಿ ರೋಹಿತ್ ಯಶಸ್ವಿಯಾಗಿದ್ದಾರೆ. ರೋಹಿತ್ 51 ಎಸೆತಗಳಲ್ಲಿ 67 ರನ್ ಚಚ್ಚಿ ಔಟ್ ಆದರು.

ಇದು ರೋಹಿತ್ ಬ್ಯಾಟ್ಸ್​ನಿಂದ ಬಂದ 21ನೇ ಅರ್ಧಶತಕವಾಗಿದೆ. ಈ ಮೂಲಕ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದವರ ಪೈಕಿ ಮೊದಲ ಸ್ಥಾನದಲ್ಲಿ ರೋಹಿತ್ (21 ಅರ್ಧಶತಕ) ಇದ್ದರೆ, 2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (20 ಅರ್ಧಶತಕ), 3ನೇ ಕ್ರಮಾಂಕದಲ್ಲಿ ಮಾರ್ಟಿನ್ ಗಪ್ಟಿಲ್ (16 ಅರ್ಧಶತಕ) ಇದ್ದಾರೆ.

First published:August 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading