(VIDEO): ಧೋನಿ ಧೋನಿ ಬದಲು ಕೊನೆಗೂ ಸ್ಟೇಡಿಯಂನಲ್ಲಿ ಮೊಳಗಿದ ರಿಷಭ್ ಪಂತ್ ಹೆಸರು!

69 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 71 ರನ್ ಗಳಿಸಿದ ಪಂತ್ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು. ಐಯರ್- ಪಂತ್ ಜೋಡಿ 114 ರನ್​ಗಳ ಅಮೋಘ ಕಾಣಿಕೆ ನೀಡಿದರು.

Vinay Bhat | news18-kannada
Updated:December 15, 2019, 8:12 PM IST
(VIDEO): ಧೋನಿ ಧೋನಿ ಬದಲು ಕೊನೆಗೂ ಸ್ಟೇಡಿಯಂನಲ್ಲಿ ಮೊಳಗಿದ ರಿಷಭ್ ಪಂತ್ ಹೆಸರು!
ರಿಷಭ್ ಪಂತ್
  • Share this:
ಚೆನ್ನೈ (ಡಿ. 15): ಇಲ್ಲಿನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸವಾಲಿನ ಮೊತ್ತ ಕಲೆಹಾಕಿದೆ. ರಿಷಭ್ ಪಂತ್ ಹಾಗೂ ಶ್ರೇಯಸ್ ಐಯರ್ ಅವರ ಸಮಯೋಚಿತ ಆಟದ ನೆರವಿನಿಂದ 50 ಓವರ್​ನಲ್ಲಿ 287 ರನ್ ಬಾರಿಸಿದೆ.

ವಿಂಡೀಸ್​ಗೆ ಸವಾಲಿನ ಟಾರ್ಗೆಟ್ ನೀಡಲು ಕಾರಣ ರಿಷಭ್ ಪಂತ್ ಹಾಗೂ ಶ್ರೇಯಸ್ ಐಯರ್ ಆಟ. 80 ರನ್ ಆಗುವ ಹೊತ್ತಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡಿದ್ದ ಭಾರತಕ್ಕೆ ಇವರಿಬ್ಬರು ಆಸರೆಯಾಗಿ ನಿಂತರು. ಎಚ್ಚರಿಕೆಯ ಆಟವಾಡಿದ ಈ ಜೋಡಿ ತಂಡದ ಮೊತ್ತವನ್ನು ಏರಿಸಲು ಪ್ರಯತ್ನಪಟ್ಟರು.

India vs West Indies Live: 288 ಟಾರ್ಗೆಟ್; ಹೋಪ್-ಹೆಟ್ಮೇರ್ ಭರ್ಜರಿ ಜೊತೆಯಾಟ

 



69 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 71 ರನ್ ಗಳಿಸಿದ ಪಂತ್ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು. ಐಯರ್- ಪಂತ್ ಜೋಡಿ 114 ರನ್​ಗಳ ಅಮೋಘ ಕಾಣಿಕೆ ನೀಡಿದರು. ಈ ಮೂಲಕ ಪಂತ್ ತಮ್ಮ ಬ್ಯಾಟ್​ನಿಂದ ಟೀಕಾಕಾರರಿಗೆ ಸರಿಯಾಗೇ ಉತ್ತರ ನೀಡಿದರು.

ಈ ಹಿಂದೆ ಪಂತ್ ವೈಫಲ್ಯ ಅನುಭವಿಸಿದಾಗ ಸ್ಟೇಡಿಯಂನಲ್ಲಿ ಪ್ರೇಕ್ಷಕರು 'ಧೋನಿ ಧೋನಿ' ಎಂದು ಕೂಗುತ್ತಿದ್ದರು. ಆದರೆ, ಈ ಬಾರಿ ಸ್ಟೇಡಿಯಂನಲ್ಲಿ ಮೊಳಗಿದ್ದು 'ರಿಷಭ್ ಪಂತ್ ರಿಷಭ್ ಪಂತ್' ಹೆಸರು.

ಭಾರತ-ವಿಂಡೀಸ್ ಪಂದ್ಯದಲ್ಲಿ ಸಲ್ಮಾನ್-ಸುದೀಪ್; ಕಿಚ್ಚನ ನೆಚ್ಚಿನ ಕ್ರಿಕೆಟಿಗ ನಮ್ಮ ಹೆಮ್ಮೆಯ ಕನ್ನಡಿಗ!

 



ಕೆಲವು ದಿನಗಳ ಹಿಂದೆ ಕೊಹ್ಲಿ ಕೂಡ ಸುದ್ದಿಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದ್ದರು. ಪಂತ್ ಔಟಾದಾಗ ಅಥವಾ ಕ್ಯಾಚ್ ಕೈಚೆಲ್ಲಿದಾಗ ಪ್ರೇಕ್ಷಕರು ಧೋನಿ ಧೋನಿ ಘೋಷವಾಕ್ಯ ಕೂಗುವುದು ಸರಿಯಲ್ಲ ಎಂದು ಹೇಳಿದ್ದರು.

 





Published by: Vinay Bhat
First published: December 15, 2019, 8:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading