IND vs WI: ಧೋನಿಯ ಮತ್ತೊಂದು ಮಹತ್ವದ ದಾಖಲೆ ಮುರಿದ ಪಂತ್

ಪಂತ್ 50 ಡಿಸ್ಮಿಸಲ್‌ಗಳನ್ನು ಮಾಡಿದ ವಿಕೆಟ್ ಕೀಪರ್‌ಗಳ ಸಾಲಿನಲ್ಲಿ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಆ್ಯಡಂ ಗಿಲ್‌ಕ್ರಿಸ್ಟ್ ಜೊತೆಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

Vinay Bhat | news18-kannada
Updated:September 2, 2019, 2:03 PM IST
IND vs WI: ಧೋನಿಯ ಮತ್ತೊಂದು ಮಹತ್ವದ ದಾಖಲೆ ಮುರಿದ ಪಂತ್
ರಿಷಭ್ ಪಂತ್ ಹಾಗೂ ಎಂ ಎಸ್ ಧೋನಿ
Vinay Bhat | news18-kannada
Updated: September 2, 2019, 2:03 PM IST
ಬೆಂಗಳೂರು (ಸೆ. 02):ಜಮೈಕಾದಲ್ಲಿ ನಡೆಯುತ್ತಿರುವ ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಭಾರತ ಗೆಲುವಿನತ್ತ ದಾಪುಗಾಲಿಡುತ್ತಿದೆ. ಗೆಲ್ಲಲು 468 ರನ್ಗಳ ಟಾರ್ಗೆಟ್ ಬೆನ್ನಟ್ಟಿರುವ ಕೆರಿಬಿಯನ್ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 45 ರನ್ ಕಲೆಹಾಕಿದೆ. ವಿಂಡೀಸ್ ಗೆಲುವಿಗೆ ಇನ್ನೂ 423 ರನ್ಗಳ ಅವಶ್ಯಕತೆಯಿದೆ.

ಈ ಮಧ್ಯೆ ವಿಕೆಟ್ ಕೀಪರ್ ರಿಷಭ್ ಪಂತ್ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಬ್ಯಾಟಿಂಗ್​ನಲ್ಲಿ ಪದೇಪದೇ ವೈಫಲ್ಯ ಕಂಡರು ವಿಕೆಟ್ ಕೀಪರ್ ಆಗಿ ಯಶಸ್ಸು ಕಾಣುತ್ತಿರುವ ಪಂತ್, ಎಂ ಎಸ್ ಧೋನಿ ದಾಖಲೆಯನ್ನು ಮುರಿದಿದ್ದಾರೆ.

ವಿಕೆಟ್ ಕೀಪಿಂಗ್ ಸ್ಥಾನದಲ್ಲಿ ನಿಂತು ಪಂತ್ ಕೇವಲ 11 ಟೆಸ್ಟ್​ ಪಂದ್ಯಗಳಲ್ಲಿ ಅತ್ಯಂತ ವೇಗವಾಗಿ ಐವತ್ತು ಬಲಿ ಪಡೆದ ಸಾಧನೆ ಮಾಡಿದ್ದಾರೆ. ಧೋನಿ 15 ಟೆಸ್ಟ್ ಪಂದ್ಯಗಳಲ್ಲಿ 50 ಡಿಸ್ಮಿಸಲ್‌ಗಳನ್ನು ಮಾಡಿದ್ದರು.

6 ರನ್ ಗಳಿಸಲು ಕೆಎಲ್ ರಾಹುಲ್ ತೆಗೆದುಕೊಂಡ ಬಾಲ್ ಅಷ್ಟಿಷ್ಟಲ್ಲ; ಟ್ರೋಲ್ ಆದ ಕನ್ನಡಿಗ

ಅಷ್ಟೇ ಅಲ್ಲದೆ ಪಂತ್ 11 ಪಂದ್ಯದಲ್ಲಿ 50 ಬಲಿ ಪಡೆದು ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಸದ್ಯ ಪಂತ್ 50 ಡಿಸ್ಮಿಸಲ್‌ಗಳನ್ನು ಮಾಡಿದ ವಿಕೆಟ್ ಕೀಪರ್‌ಗಳ ಸಾಲಿನಲ್ಲಿ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಆ್ಯಡಂ ಗಿಲ್‌ಕ್ರಿಸ್ಟ್ ಜೊತೆಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

First published:September 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...