ಕೊಹ್ಲಿ-ರೋಹಿತ್ ನಡುವೆ ಕಿತ್ತಾಟ? ಈ ಪ್ರಶ್ನೆಗೆ ಉತ್ತರವಾಗಿ ಹೊರಬಿತ್ತು ಡ್ರೆಸ್ಸಿಂಗ್ ರೂಂ ವಿಡಿಯೋ

India vs West Indies: ಈ ವಿಡಿಯೋದಲ್ಲಿ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ಹಾಗೂ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೆಡ್ಸ್​ ಅಪ್ ಚಾಲೆಂಜ್ (Heads Up Challenge) ಆಟವಾಡಿದ್ದಾರೆ.

zahir | news18-kannada
Updated:August 9, 2019, 6:32 PM IST
ಕೊಹ್ಲಿ-ರೋಹಿತ್ ನಡುವೆ ಕಿತ್ತಾಟ? ಈ ಪ್ರಶ್ನೆಗೆ ಉತ್ತರವಾಗಿ ಹೊರಬಿತ್ತು ಡ್ರೆಸ್ಸಿಂಗ್ ರೂಂ ವಿಡಿಯೋ
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ
  • Share this:
ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವಿನ ಭಿನ್ನಾಭಿಪ್ರಾಯಗಳ ತಲೆದೂರಿವೆ ಎಂಬ ಸುದ್ದಿಗಳು ಹರಿದಾಡಿದ್ದವು. ಟೀಂ ಇಂಡಿಯಾದ ಇಬ್ಬರು ಆಟಗಾರರ ನಡುವೆ ಮನಸ್ತಾಪ ಮೂಡಿದ್ದು, ಹೀಗಾಗಿ ತಂಡದ ಡ್ರೆಸಿಂಗ್ ರೂಮ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಇದೀಗ ವೆಸ್ಟ್​ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಡ್ರೆಸಿಂಗ್ ರೂಂ ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ಹಾಗೂ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೆಡ್ಸ್​ ಅಪ್ ಚಾಲೆಂಜ್ (Heads Up Challenge) ಆಟವಾಡಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಹೆಸರನ್ನು ರೋಹಿತ್​ ಶರ್ಮಾ ತೋರಿಸಿದ್ದು, ಅದರಂತೆ ಟೀಂ ಇಂಡಿಯಾ ನಾಯಕನ ರೀತಿಯಲ್ಲಿ ಜಡೇಜಾ ಅಭಿನಯಿಸಿದ್ದರು.

ಗೇಮ್ ಚಾಲೆಂಜ್​ನಂತೆ ಅಭಿನಯ ಕಲೆಯ ಮೂಲಕ ಪಟ್ಟಿಯಲ್ಲಿದ್ದ ಆಟಗಾರನ ಹೆಸರು ರೋಹಿತ್ ಹೇಳಬೇಕಿತ್ತು. ಈ ವೇಳೆ ತನ್ನ ನಟನಾ ಸಾಮರ್ಥ್ಯವನ್ನು ಜಡ್ಡು ಧಾರೆಗೆಳೆದರು. ಮೊದಲು ಜಸ್​ಪ್ರೀತ್ ಹೆಸರನ್ನು ಸೂಚಿಸಿದಾಗ ಸೆಕೆಂಡ್​ಗಳ ಅಂತರದಲ್ಲಿ ರೋಹಿತ್ ಉತ್ತರ ಹೇಳಿದ್ದರು.

ಇನ್ನು ಎರಡನೇ ಕಾರ್ಡ್​ನಲ್ಲಿ ಕೊಹ್ಲಿಯ ಹೆಸರು ಸೂಚಿಸಲಾಗಿತ್ತು. ಅದರಂತೆ ಜಡೇಜಾ ಟೀಂ ಇಂಡಿಯಾ ನಾಯಕನ ಹಾವಭಾವವನ್ನು ತೋರಿಸಿದ್ದಾರೆ. ಜಡೇಜಾ ನಟನೆಯನ್ನು ಥಟ್ಟನೇ ಅರ್ಥ ಮಾಡಿಕೊಳ್ಳಲು ಎಡವಿದ ರೋಹಿತ್ ಶರ್ಮಾ ಕೊನೆಗೂ ಕೊಹ್ಲಿ ಹೆಸರನ್ನು ಹೇಳಿದ್ದಾರೆ. ಇದೇ ವೇಳೆ ತಂಡದ ಆಟಗಾರರ ಆಟವನ್ನು ದೂರದಲ್ಲೇ ಕೂತು ವಿರಾಟ್ ಕೊಹ್ಲಿ ನೋಡುತ್ತಾ ನಗುತ್ತಿದ್ದರು. 
Loading...

View this post on Instagram
 

WATCH @rohitsharma45 take the Heads Up Challenge with @royalnavghan 😅 This one's a laugh riot😂🤣


A post shared by Team India (@indiancricketteam) on


ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಈ ಹಿಂದೆ ಹಬ್ಬಿದ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲವೆಂಬ ಸುದ್ದಿಗಳು ಕೇವಲ ವದಂತಿಗಳು ಎಂಬುದಕ್ಕೆ ಈ ವಿಡಿಯೋ ತುಣುಕು ಸಾಕ್ಷಿ ಎನ್ನಲಾಗುತ್ತಿದೆ.
First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...