ಮಿಂಚಿದ ರಹಾನೆ-ಬುಮ್ರಾ; ವಿಂಡೀಸ್ ವಿರುದ್ಧ ಭಾರತಕ್ಕೆ 318 ರನ್​ಗಳ ಭರ್ಜರಿ ಗೆಲುವು

India vs West Indies: 318 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಲ್ಲದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 60 ಅಂಕದೊಂದಿಗೆ ಶುಭಾರಂಭ ಮಾಡಿದೆ.

ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ಆಟಗಾರರು

  • Share this:
ಬೆಂಗಳೂರು (ಆ. 26): ಆಂಟಿಗಾದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಬೌಲರ್​​ಗಳ ಅದ್ಭುತ ಪ್ರದರ್ಶನ ಹಾಗೂ ರಹಾನೆಯ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಕೊಹ್ಲಿ ಪಡೆ 318 ರನ್​ಗಳ ಜಯ ಸಾಧಿಸಿ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನಲ್ಲಿ ಶುಭಾರಂಭ ಮಾಡಿದೆ.

ಮೂರನೇ ದಿನದಾಟದ ಅಂತ್ಯಕ್ಕೆ 2ನೇ ಇನ್ನಿಂಗ್ಸ್​ನಲ್ಲಿ ಭಾರತ 3 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು. ಜೊತೆಗೆ 260 ರನ್​ಗಳ ಮುನ್ನಡೆಯಲ್ಲಿತ್ತು. ನಾಲ್ಕನೇ ದಿನದಾಟದ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಪೈಕಿ ಕೊಹ್ಲಿ(51) ಬೇಗನೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಹನುಮಾ ವಿಹಾರಿ ಜೊತೆಯಾದ ಅತ್ಯುತ್ತಮ ಆಟ ಪ್ರದರ್ಶಿಸಿದರು. 135 ರನ್​ಗಳ ಕಾಣಿಕೆ ನೀಡಿದ ಈ ಜೋಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಅಲ್ಲದೆ ಅಜಿಂಕ್ಯ ರಹಾನೆ ಆಕರ್ಷಕ ಶತಕ ಸಿಡಿಸಿ ಮಿಂಚಿದರು. 242 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ ರಹಾನೆ 102 ರನ್​ ಗಳಿಸಿದರು.  ಬಂದ ಬೆನ್ನಲ್ಲೆ ಪಂತ್ 7 ರನ್​ಗೆ ಔಟ್ ಆದರು. ಇದೇವೇಳೆ ವಿಹಾರಿ ಶತಕದ ಅಂಚಿನಲ್ಲಿ ಎಡವಿ 93 ರನ್​ಗೆ ಔಟ್ ಆದ ಹೊತ್ತಿಗೆ ಭಾರತ ಡಿಕ್ಲೇರ್ ಮಾಡಿಕೊಂಡಿತು. 112.3 ಓವರ್​​ನಲ್ಲಿ ಭಾರತ 7 ವಿಕೆಟ್ ಕಳೆದುಕೊಂಡು 343 ರನ್​ ಕಲೆಹಾಕುವ ಮೂಲಕ ವಿಂಡೀಸ್​ಗೆ ಗೆಲ್ಲಲು 419 ರನ್​ಗಳ ಟಾರ್ಗೆಟ್ ನೀಡಿತು. ವಿಂಡೀಸ್ ಪರ ರಾಸ್ಟನ್ ಚೇಸ್ 4 ವಿಕೆಟ್ ಪಡೆದರು.

ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಶಿಪ್‌: ಕಿರೀಟದೊಂದಿಗೆ ಹೊಸ ಇತಿಹಾಸ ನಿರ್ಮಿಸಿದ ಪಿವಿ ಸಿಂಧೂ

ಈ ಬೃಹತ್ ಗುರಿ ಬೆನ್ನಟ್ಟಿದ ವಿಂಡೀಸ್ ಇಶಾಂತ್-ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. 50 ರನ್​ಗೆ 8 ವಿಕೆಟ್ ಕಳೆದುಕೊಂಡ ಕೆರಿಬಿಯನ್ನರು 100 ರನ್​ಗೆ ಆಲೌಟ್ ಆದರು. ಕೇಮರ್ ರೋಚ್ 38 ರನ್ ಗಳಿಸಿದ್ದೆ ದೊಡ್ಡ ಮೊತ್ತವಾಗಿತ್ತು. ಭಾರತ ಪರ ಬುಮ್ರಾ 5 ವಿಕೆಟ್ ಕಿತ್ತರೆ. ಇಶಾಂತ್ 3 ಹಾಗೂ ಶಮಿ 2 ವಿಕೆಟ್ ಪಡೆದರು.

 318 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಲ್ಲದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 60 ಅಂಕದೊಂದಿಗೆ ಶುಭಾರಂಭ ಮಾಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ ಅಜಿಂಕ್ಯ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನ್ನಿಂಗ್ಸ್​: 297/10

(ಅಜಿಂಕ್ಯ ರಹಾನೆ 81, ರವೀಂದ್ರ ಜಡೇಜಾ 58, ಕೇಮರ್ ರೋಚ್ 66/4)

ವೆಸ್ಟ್​ ಇಂಡೀಸ್ ಮೊದಲ ಇನ್ನಿಂಗ್ಸ್​: 222/10

(ರಾಸ್ಟನ್ ಚೇಸ್ 48, ಜೇಸನ್ ಹೋಲ್ಡರ್ 39, ಇಶಾಂತ್ ಶರ್ಮಾ 43/5)

ಭಾರತ ಎರಡನೇ ಇನ್ನಿಂಗ್ಸ್​​: 343/7

(ಅಜಿಂಕ್ಯ ರಹಾನೆ 102, ಹನುಮಾ ವಿಹಾರಿ 93, ರಾಸ್ಟನ್ ಚೇಸ್ 132/4)

ವೆಸ್ಟ್​ ಇಂಡೀಸ್ ಎರಡನೇ ಇನ್ನಿಂಗ್ಸ್​: 100/10

(ಕೇಮರ್ ರೋಚ್ 38, ಜಸ್​ಪ್ರೀತ್ ಬುಮ್ರಾ 7/5)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published: