IND vs WI: ಟೀಂ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಸ್ಯಾಮ್ಸನ್​ಗಿಲ್ಲ ಚಾನ್ಸ್​; ಮತ್ಯಾರಿಗೆ?

ಎರಡೂ ಪಂದ್ಯಗಳಲ್ಲಿ ಭಾರತ ವೈಫಲ್ಯ ಅನುಭಿಸಿದ್ದು ಪ್ರಮುಖವಾಗಿ ಬೌಲಿಂಗ್​ನಲ್ಲಿ. ವಿಂಡೀಸ್ ಬ್ಯಾಟ್ಸ್​ಮನ್​ಗಳ ಅಬ್ಬರಕ್ಕೆ ಬ್ರೇಕ್ ಹಾಕುವಲ್ಲಿ ಭಾರತೀಯ ಬೌಲರ್​ಗಳು ಸಂಪೂರ್ಣ ವಿಫಲರಾಗಿದ್ದರು.

Vinay Bhat | news18-kannada
Updated:December 11, 2019, 4:06 PM IST
IND vs WI: ಟೀಂ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಸ್ಯಾಮ್ಸನ್​ಗಿಲ್ಲ ಚಾನ್ಸ್​; ಮತ್ಯಾರಿಗೆ?
ಟೀಂ ಇಂಡಿಯಾ
  • Share this:
ಮುಂಬೈ (ಡಿ. 11): ಭಾರತ ಹಾಗೂ ವೆಸ್ಟ್​ ಇಂಡೀಸ್ ನಡುವೆ ಇಂದು ಅಂತಿಮ ಟಿ-20 ಕದನ ನಡೆಯಲಿದೆ. ಈಗಾಗಲೇ ಸರಣಿ ಸಮಬಲಗೊಂಡಿರುವ ಕಾರಣ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಮೊದಲ ಪಂದ್ಯದಲ್ಲಿ ವಿಂಡೀಸ್ ನೀಡಿದ್ದ 208 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ 6 ವಿಕೆಟ್​ಗಳಿಂದ ಗೆದ್ದು ಬೀಗಿತ್ತು. ಆದರೆ, 2ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಸೋಲುಂಡಿತ್ತು. ಈ ಮೂಲಕ ಚೇಸಿಂಗ್ ಮಾಡಿದರೆ ಭಾರತಕ್ಕೆ ಗೆಲುವು ಖಚಿತ, ಮೊದಲು ಬ್ಯಾಟಿಂಗ್ ನಡೆಸಿದರೆ ಸೋಲು ನಿಶ್ಚಿತ ಎಂಬ ಮಾತು ಮತ್ತಷ್ಟು ಬಲಷ್ಠವಾಯಿತು.

ಇಂದಿನ ಪಂದ್ಯ ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬತಾಗಿರುವ ಕಾರಣ ಕಳೆದ ಪಂದ್ಯದಲ್ಲಿ ಮಾಡಿರುವ ತಪ್ಪನ್ನು ತಿದ್ದಿ ಗೆಲುವಿಗಾಗಿ ರಣತಂತ್ರ ಹೆಣೆದಿದೆ. ಅದರಲ್ಲಿ ಟೀಂ ಇಂಡಿಯಾ ತನ್ನ ದಾಖಲೆಯನ್ನು ಮುಂದುವರೆಸಲು ಗೆಲ್ಲಬೇಕೆಂದು ಪಣತೊಟ್ಟಿದೆ.

Ranji Trophy: ಮಿಂಚಿದ ಗೌತಮ್; ಮೊದಲ ಇನ್ನಿಂಗ್ಸ್​ನಲ್ಲಿ ತಮಿಳುನಾಡು 307ಕ್ಕೆ ಆಲೌಟ್

 ಇದಕ್ಕಾಗಿಯೆ ಕೊಹ್ಲಿ ಪಡೆ ಇಂದಿನ ಪಂದ್ಯಕ್ಕೆ ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಅಂದಾಜಿದೆ. ಆದರೂ, ಬೆಂಚ್ ಕಾಯುತ್ತಿರುವ ಸಂಜು ಸ್ಯಾಮ್ಸನ್​ಗೆ ಇಂದಿನ ಪಂದ್ಯದಲ್ಲೂ ಅವಕಾಶ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಆಡಿದ ಎರಡೂ ಪಂದ್ಯಗಳಲ್ಲಿ ಭಾರತ ವೈಫಲ್ಯ ಅನುಭಿಸಿದ್ದು ಪ್ರಮುಖವಾಗಿ ಬೌಲಿಂಗ್​ನಲ್ಲಿ. ವಿಂಡೀಸ್ ಬ್ಯಾಟ್ಸ್​ಮನ್​ಗಳ ಅಬ್ಬರಕ್ಕೆ ಬ್ರೇಕ್ ಹಾಕುವಲ್ಲಿ ಭಾರತೀಯ ಬೌಲರ್​ಗಳು ಸಂಪೂರ್ಣ ವಿಫಲರಾಗಿದ್ದರು.

ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಧವನ್ ಔಟ್; ಮಯಾಂಕ್​ಗೆ ಸ್ಥಾನ!

ಆ ಪೈಕಿ ಭುವನೇಶ್ವರ್ ಕುಮಾರ್ ದುಬಾರಿ ಬೌಲರ್ ಎನಿಸಿಕೊಂಡರು. ವಿಕೆಟ್ ಕೀಳುವಲ್ಲೂ ವಿಫಲರಾದರು. ಹೀಗಾಗಿ ಭುವಿ ಅವರನ್ನು ಇಂದಿನ ಪಂದ್ಯದಿಂದ ಕೈಬಿಟ್ಟು ಮೊಹಮ್ಮದ್ ಶಮಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಅಂದಾಜಿದೆ.

ಇನ್ನು ಬ್ಯಾಟಿಂಗ್ ವಿಬಾಗದಲ್ಲೂ ಭಾರತ ಒಂದು ಮಹತ್ವದ ಬದಲಾವಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಕಳೆದ ಎರಡು ಪಂದ್ಯಗಳಲ್ಲಿ ಮಿಂಚಲು ವಿಫಲವಾದ ಶ್ರೇಯಸ್ ಐಯರ್ ಜಾಗಕ್ಕೆ ಫಾರ್ಮ್​ನಲ್ಲಿರುವ ಮನೀಶ್ ಪಾಂಡೆಯನ್ನು ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಭಾರತ ಸಂಭಾವ್ಯ ಪಟ್ಟಿ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶಿವಂ ದುಬೆ, ರಿಷಭ್ ಪಂತ್, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಯಜುವೇಂದ್ರ ಚಹಾಲ್, ಮೊಹಮ್ಮದ್ ಶಮಿ.

ಕೊಹ್ಲಿ ದಾಖಲೆಗೆ 6 ರನ್: ವಿರಾಟ್ ಕೊಹ್ಲಿ ಕೇವಲ ಆರು ರನ್ ಗಳಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ತವರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಟಿ- 20 ಪಂದ್ಯಗಳಲ್ಲಿ ಒಂದು ಸಾವಿರ ರನ್ ಗಳಸಿದ ಮೊದಲ ಭಾರತೀಯ ಎಂಬ ಮನ್ನಣೆಗೆ ಪಾತ್ರರಾಗಲಿದ್ಧಾರೆ. ಜೊತೆಗೆ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರನಾಗಿ ಮೂಡಿಬರಲಿದ್ದಾರೆ.

ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ