6 ಅಡಿ ಎತ್ತರ ಮತ್ತು 140 ಕೆ.ಜಿ. ತೂಕ: ಟೀಂ ಇಂಡಿಯಾ ವಿರುದ್ಧ ಕಣಕ್ಕೆ ಇಳಿಯಳಿದ್ದಾರೆ ದೈತ್ಯ ಕ್ರಿಕೆಟಿಗ

Rahkeem Cornwall: ಯುವ ಕ್ರಿಕೆಟಿಗನ ಮೇಲೆ ವೆಸ್ಟ್​ ಇಂಡೀಸ್ ಕ್ರಿಕೆಟ್ ಆಡಳಿತ ಮಂಡಳಿ ಹೆಚ್ಚಿನ ಕಾಳಜಿವಹಿಸುತ್ತಿದೆ. ದೇಶಿ ಕ್ರಿಕೆಟ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದರೂ ದೈತ್ಯ ದೇಹದಿಂದಾಗಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವಕಾಶ ಪಡೆಯಲು ಸಾಧ್ಯವಾಗಿರಲಿಲ್ಲ.

zahir | news18-kannada
Updated:August 10, 2019, 7:33 PM IST
6 ಅಡಿ ಎತ್ತರ ಮತ್ತು 140 ಕೆ.ಜಿ. ತೂಕ: ಟೀಂ ಇಂಡಿಯಾ ವಿರುದ್ಧ ಕಣಕ್ಕೆ ಇಳಿಯಳಿದ್ದಾರೆ ದೈತ್ಯ ಕ್ರಿಕೆಟಿಗ
ರಹಕೀಮ್ ಕಾರ್ನ್​ವಾಲ್
  • Share this:
ಟೀಂ ಇಂಡಿಯಾ ವಿರುದ್ಧದ 2 ಟೆಸ್ಟ್​ ಸರಣಿಗಾಗಿ ವೆಸ್ಟ್​ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಸ್ಥಾನ ಪಡೆಯಲು ಕ್ರಿಸ್ ಗೇಲ್ ವಿಫಲರಾಗಿ ಸುದ್ದಿಯಾದರೆ, ಎಲ್ಲರನ್ನು ಅಚ್ಚರಿ ಪಡಿಸುವಂತಹ ದೈತ್ಯ ಕ್ರಿಕೆಟಿಗನೊಬ್ಬ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ರಹಕೀಮ್ ಕಾರ್ನ್​ವಾಲ್ ಎಂಬ ಯುವ ಆಲ್​ರೌಂಡರ್​ಗೆ ವಿಂಡೀಸ್ ಆಯ್ಕೆ ಮಂಡಳಿ ಮಣೆ ಹಾಕಿದ್ದು, ಭಾರತದ ವಿರುದ್ಧ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವಾಡುವ ಇರಾದೆಯಲ್ಲಿದ್ದಾರೆ ದೈತ್ಯ ಕ್ರಿಕೆಟಿಗ. ಈಗಾಗಲೇ ದೇಶಿ ಕ್ರಿಕೆಟ್​ನಲ್ಲಿ ಸಂಚಲನ ಸೃಷ್ಟಿಸಿರುವ ರಹಕೀಮ್ ಎಲ್ಲರ ಗಮನ ಸೆಳೆಯುತ್ತಿರುವುದು ತಮ್ಮ ದೇಹದಾರ್ಢ್ಯದಿಂದ ಎಂಬುದು ಇಲ್ಲಿ ವಿಶೇಷ.

6 ಅಡಿ ಎತ್ತರ ಮತ್ತು 140 ಕೆ.ಜಿ. ತೂಕ:
2017 ರಲ್ಲಿ ಭಾರತ ವಿರುದ್ಧದ ಅಭ್ಯಾಸ ಪಂದ್ಯವೊಂದರಲ್ಲಿ 26 ವರ್ಷದ ರಹಕೀಮ್ ಬೆಳಕಿಗೆ ಬಂದಿದ್ದರು. ಅಂಟಿಗುವಾ ಮೂಲದ ಈ ಆಟಗಾರ ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂಬುದು ಅಂದು ಯಾರೂ ಕೂಡ ಊಹಿಸಿರಲಿಲ್ಲ. ಕಾರಣ ಆತನ ಎತ್ತರ ಮತ್ತು ದೇಹ ತೂಕ. ವಿಶ್ವ ಕ್ರಿಕೆಟ್ ಫಿಟ್​ನೆಸ್​ನತ್ತ ಮುಖ ಮಾಡುತ್ತಿದ್ದರೆ ರಹಕೀಮ್ ಮಾತ್ರ 140 ಕೆ.ಜಿ ತೂಕದೊಂದಿಗೆ ಕ್ರಿಕೆಟ್ ಮೈದಾನದಲ್ಲಿ ತಮ್ಮ ಸ್ಪಿನ್ ಜಾದು ಮಾಡುತ್ತಿದ್ದಾರೆ. ಇದರೊಂದಿಗೆ ತಂಡಕ್ಕೆ ಆಪತ್ಭಾಂಧವನಾಗಿ ಬ್ಯಾಟ್​ ಮೂಲಕ ಕೂಡ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. ಈ ಹೀಗಾಗಿ ರಹ್​ಕೀಮ್ ಇದೀಗ ಭಾರತದಂತಹ ಬಲಿಷ್ಠ ತಂಡದ ವಿರುದ್ಧವೇ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡಿದ್ದಾರೆ.

ರಹಕೀಮ್ ಕಾರ್ನ್​ವಾಲ್


ಕಾರ್ನ್​ವಾಲ್ ಬಗ್ಗೆ ಕಾಳಜಿ:
ಯುವ ಕ್ರಿಕೆಟಿಗನ ಮೇಲೆ ವೆಸ್ಟ್​ ಇಂಡೀಸ್ ಕ್ರಿಕೆಟ್ ಆಡಳಿತ ಮಂಡಳಿ ಹೆಚ್ಚಿನ ಕಾಳಜಿವಹಿಸುತ್ತಿದೆ. ದೇಶಿ ಕ್ರಿಕೆಟ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದರೂ ದೈತ್ಯ ದೇಹದಿಂದಾಗಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವಕಾಶ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಹಿಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಕರ್ಟ್ನಿ ಬ್ರೌನ್ ಕಾರ್ನ್​ವಾಲ್ ದೇಹ ತೂಕವನ್ನು ಇಳಿಸಲು ಮುತುವರ್ಜಿವಹಿಸಿದ್ದರು. ಅದಕ್ಕಾಗಿ ಯುವ ಆಟಗಾರನಿಗೆ ಫಿಟ್​ನೆಸ್ ಮಂತ್ರಗಳಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ರಹಕೀಮ್ ಕಾರ್ನ್​ವಾಲ್

Loading...

ರಹಕೀಮ್ ಆಲ್​ರೌಂಡರ್ ಆಟ:
ರಹಕೀಮ್ ಕಾರ್ನ್​ವಾಲ್ ಆಟಕ್ಕೆ ಫಿಟ್​ನೆಸ್ ಎಂಬುದು ಯಾವತ್ತೂ ಸಮಸ್ಯೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 24.43 ರ ಸರಾಸರಿಯಲ್ಲಿ 2224 ರನ್ ಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ 23.60 ರ ಸರಾಸರಿಯಲ್ಲಿ 260 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಇನ್ನು 2017 ರಲ್ಲಿ ಅವರು ಭಾರತ ತಂಡ ವಿಂಡೀಸ್ ಪ್ರವಾಸ ಕೈಗೊಂಡಿದ್ದಾಗ ಟೀಂ ಇಂಡಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದರು. ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ ಮತ್ತು ವಿರಾಟ್ ಕೊಹ್ಲಿ ಸಹ ಈ ಪಂದ್ಯದಲ್ಲಿ ರಹಕೀಮ್ ಸ್ಪಿನ್ ಮೋಡಿಗೆ ರನ್​ಗಾಗಿ ಪರದಾಡಿದ್ದರು. ಸದ್ಯ ಟೀಂ ಇಂಡಿಯಾ ಟೆಸ್ಟ್​ನ ನಂಬರ್ ಒನ್ ತಂಡವಾಗಿದ್ದು, ಇಂತಹ ಬಲಿಷ್ಠ ತಂಡದ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡುವುದೇ ಈಗ ರಹಕೀಮ್ ಕಾರ್ನ್​ವಾಲ್ ಮುಂದಿರುವ ಅಗ್ನಿ ಪರೀಕ್ಷೆ.

ರಹಕೀಮ್ ಕಾರ್ನ್​ವಾಲ್


ವೆಸ್ಟ್ ಇಂಡೀಸ್ ಟೆಸ್ಟ್ ತಂಡ:

ಜೇಸನ್ ಹೋಲ್ಡರ್(ನಾಯಕ), ಕ್ರೇಗ್ ಬ್ರಾಥ್​ವೇಟ್, ಡೆರೆನ್ ಬ್ರಾವೊ, ಶಮರಹ್ ಬ್ರೂಕ್ಸ್, ಜಾನ್ ಕ್ಯಾಂಪ್​ಬೆಲ್, ರೋಸ್ಟನ್ ಚೇಸ್, ರಹಕೀಮ್ ಕಾರ್ನ್​ವಾಲ್, ಶೇನ್ ಡೌರಿಚ್, ಶನ್ನೋನ್ ಗ್ಯಾಬ್ರಿಯಲ್, ಶಿಮ್ರಾನ್ ಹೆಟ್ಮೇರ್, ಶಾಯ್ ಹೋಪ್, ಕಿಮೋ ಪೌಲ್, ಕೇಮರ್ ರೋಚ್.

First published:August 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...