ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಧವನ್ ಔಟ್; ಮಯಾಂಕ್​ಗೆ ಸ್ಥಾನ!

ಮಯಾಂಕ್ ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಬ್ಯಾಟ್ ಬೀಸುತ್ತಿದ್ದು, ತಮಿಳುನಾಡು ವಿರುದ್ಧ ಪಂದ್ಯವನ್ನಾಡುತ್ತಿದ್ದಾರೆ.

news18-kannada
Updated:December 11, 2019, 2:25 PM IST
ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಧವನ್ ಔಟ್; ಮಯಾಂಕ್​ಗೆ ಸ್ಥಾನ!
ಮಯಾಂಕ್ ಅಗರ್ವಾಲ್
  • Share this:
ಬೆಂಗಳೂರು (ಡಿ. 11): ಮೊಣಕಾಲು ನೋವಿನಿಂದಾಗಿ ಇಂಜುರಿಗೆ ತುತ್ತಾದ ಶಿಖರ್ ಧವನ್ ವೆಸ್ಟ್​ ಇಂಡೀಸ್ ವಿರುದ್ಧದ ಟಿ-20 ಸರಣಿಗೆ ಅಲಭ್ಯರಾಗಿದ್ದರು. ಸದ್ಯ ಇವರು ಗುಣಮುಖರಾಗದ ಹಿನ್ನಲೆ ಏಕದಿನ ಸರಣಿಯಿಂದಲೂ ಕೈಬಿಡಲಾಗಿದೆ.

ಧವನ್ ಬದಲು ಮೂರು ಪಂದ್ಯಗಳ ಏಕದಿನ ಸರಣಿಗೆ ಕರ್ನಾಟಕದ ಮಯಾಂಕ್ ಅಗರ್ವಾಲ್​ ಅವರನ್ನು ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾ ಪರ ಟೆಸ್ಟ್​ ಕ್ರಿಕೆಟ್​ನ ಖಾಯಂ ಓಪನರ್ ಆಗಿರುವ ಅಗರ್ವಾಲ್​ಗೆ ಏಕದಿನ ಕ್ರಿಕೆಟ್​ನಲ್ಲೂ ಅವಕಾಶ ನೀಡಬೇಕು ಎಂಬ ಕೂಗು ಬಹು ದಿನಗಳಿಂದ ಕೇಳಿಬರುತ್ತಿತ್ತು. ಅದರಂತೆ ಸದ್ಯ ಮಯಾಂಕ್​ ಏಕದಿನ ಕ್ರಿಕೆಟ್​​ಗೂ ಕಾಲಿಟ್ಟಿದ್ದಾರೆ.

India vs West Indies: ಟಿ20 ಕದನ ಕುತೂಹಲ: ಇಂದು ಭಾರತ-ವಿಂಡೀಸ್ ನಡುವೆ ಫೈನಲ್ ಫೈಟ್

ಆದರೆ, ಮಯಾಂಕ್ ವಿಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುತ್ತಾರ ಎಂಬುವುದೇ ಕುತೂಹಲ. ಯಾಕೆಂದರೆ ರೋಹಿತ್ ಶರ್ಮಾ ಜೊತೆ ಮತ್ತೊಬ್ಬ ಕನ್ನಡಿಗ ಕೆ ಎಲ್ ರಾಹುಲ್ ಆರಂಭಿಕನಾಗಿ ಇನ್ನಿಂಗ್ಸ್​ ಆರಂಭಿಸುವ ಸಾಧ್ಯತೆ ಹೆಚ್ಚಿದೆ.

ಮಯಾಂಕ್ ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಬ್ಯಾಟ್ ಬೀಸುತ್ತಿದ್ದು, ತಮಿಳುನಾಡು ವಿರುದ್ಧ ಪಂದ್ಯವನ್ನಾಡುತ್ತಿದ್ದಾರೆ.

ಡಿ. 15 ರಂದು ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಡಿ. 18 ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ 2ನೇ ಏಕದಿನ ಹಾಗೂ ಡಿ. 22 ರಂದು ಕತಕ್​ನಲ್ಲಿ ಮೂರನೇ ಪಂದ್ಯ ಆಯೋಜಿಸಲಾಗಿದೆ. ಈ ಎಲ್ಲ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.

Dhoni: ಕ್ರಿಕೆಟ್​​ನಿಂದ ದೂರ ಸರಿದು ಕಿರುತೆರೆಯತ್ತ ತೆರಳಿದ್ದಾರೆ ಧೋನಿ!ಏಕದಿನ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶ್ರೇಯಸ್‌ ಐಯ್ಯರ್‌, ಕೇದರ್‌ ಜಾಧವ್‌, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌, ಮನೀಶ್‌ ಪಾಂಡೆ, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಲ್‌, ದೀಪಕ್‌ ಚಹರ್‌, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಮಯಾಂಕ್ ಅಗರ್ವಾಲ್.

ಏಕದಿನ ತಂಡ: ಸುನಿಲ್ ಅಂಬ್ರಿಸ್, ಶಾಯ್ ಹೋಪ್, ಖೇರಿ ಪಿರ್ರೆ, ರಾಸ್ಟನ್ ಚೇಸ್, ಅಲ್ಜರಿ ಜೋಸೆಫ್, ಕೀರೊನ್ ಪೊಲಾರ್ಡ್​ (ನಾಯಕ), ಶೆಲ್ಡನ್ ಕಾಟ್ರೆಲ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ಎವಿನ್ ಲೆವಿಸ್, ರೊಮಾರಿಯೊ ಶೆಫೆರ್ಡ್​, ಜೇಸನ್ ಹೋಲ್ಡರ್, ಕೀಮೊ ಪೌಲ್, ಹೇಡನ್ ವಾಲ್ಶ್​​.

First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ