Ind vs WI: ಕೊಹ್ಲಿ ಪಡೆಯ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ವಿಂಡೀಸ್; ಭಾರತದ ಸೆಮೀಸ್ ಹಾದಿ ಸುಗಮ

India vs West Indies Live Score, ICC Cricket World Cup 2019: ಕೊಹ್ಲಿ ಪಡೆ 9 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ವಿಂಡೀಸ್ ಪಡೆ 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಸಂಭ್ರಮಿಸುತ್ತಿರುವ ಭಾರತೀಯ ಆಟಗಾರರು

ಸಂಭ್ರಮಿಸುತ್ತಿರುವ ಭಾರತೀಯ ಆಟಗಾರರು

  • News18
  • Last Updated :
  • Share this:
ಬೆಂಗಳೂರು (ಜೂ. 27): ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ 126 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ಬೌಲಿಂಗ್​ ದಾಳಿಗೆ ತತ್ತರಿಸಿದ ಕೆರಿಬಿಯನ್ ಪಡೆ ಕೇವಲ 143 ರನ್​ಗೆ ಆಲೌಟ್ ಆಗಿದ್ದು, ಹೀನಾಯ ಸೋಲು ಕಾಣುವ ಜೊತೆಗೆ ವಿಶ್ವಕಪ್​ನಿಂದ ಹೊರಬಿದ್ದಿದೆ. ಈ ಗೆಲುವಿನೊಂದಿಗೆ ಭಾರತದ ಸೆಮಿ ಫೈನಲ್ ಹಾದಿ ಮತ್ತಷ್ಟು ಸುಗಮವಾಗಿದೆ.

ನಾಯಕ ವಿರಾಟ್ ಕೊಹ್ಲಿ 72 ರನ್ ಹಾಗೂ ಧೋನಿಯ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ ವಿಂಡೀಸ್​ಗೆ ಗೆಲ್ಲಲು 269 ರನ್​ಗಳ ಟಾರ್ಗೆಟ್ ನೀಡಿತ್ತು.

ಈ ಗುರಿ ಬೆನ್ನಟ್ಟಿದ ಕೆರಿಬಿಯನ್ ಬ್ಯಾಟ್ಸ್​ಮನ್​ಗಳು ಭಾರತೀಯ ಬೌಲಿಂಗ್ ಬಿರುಗಾಳಿಗೆ ತರಗೆಲೆಯಂತೆ ಉರುಳಿದರು. ಆರಂಭದಲ್ಲೇ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಕ್ರಿಸ್ ಗೇಲ್ ಕೇವಲ 6 ರನ್​ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ಶಾಯ್ ಹೋಪ್ ಕೂಡ ಕೇವಲ 10 ರನ್​ಗೆ ಔಟ್ ಆದರೆ, ಚೊಚ್ಚಲ ವಿಶ್ವಕಪ್ ಆಡಿದ ಸುನೀಲ್ ಅಂಬ್ರಿಸ್ ಆಟ 31 ರನ್​ಗೆ ಅಂತ್ಯವಾಯಿತು.

ಹೆಚ್ಚುಹೊತ್ತು ನಿಲ್ಲದೆ ನಿಕೋಲಸ್ ಪೂರನ್ ಕೂಡ 28 ರನ್​ ಗಳಿಸಿರುವಾಗ ಕುಲ್ದೀಪ್ ಸ್ಪಿನ್ ಬಲೆಗೆ ಬಿದ್ದರು. ನಾಯಕ ಜೇಸನ್ ಹೋಲ್ಡರ್​(6)ರನ್ನು ಚಹಾಲ್ ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಬ್ರಾಥ್​ವೈಟ್(1) ಧೋನಿ ಹಿಡಿದ ಅದ್ಭುತ ಕ್ಯಾಚ್​ಗೆ ನಿರ್ಗಮಿಸಿದ ಬೇಕಾಗಿ ಬಂತು.

'ಯುವರಾಜ್​​ಗೆ ಕೊನೆಯ ಐಪಿಎಲ್​​' ವಿಚಾರ ತಿಳಿದಿದ್ದರೂ ಅವಕಾಶ ನೀಡದ ಮುಂಬೈ ಇಂಡಿಯನ್ಸ್?

ಅಂತಿಮವಾಗಿ ವೆಸ್ಟ್​ ಇಂಡೀಸ್ 34.2 ಓವರ್​​ನಲ್ಲಿ 143 ರನ್​ಗೆ ಸರ್ವಪತನ ಕಂಡಿತು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತು ಮಿಂಚಿದರೆ, ಜಸ್​ಪ್ರೀತ್ ಬುಮ್ರಾ ಹಾಗೂ ಚಹಾಲ್ ತಲಾ 2 ಮತ್ತು ಹಾರ್ದಿಕ್, ಕುಲ್ದೀಪ್ 1 ವಿಕೆಟ್ ಪಡೆದರು.

125 ರನ್​ಗಳ ಗೆಲುವಿನೊಂದಿಗೆ ಭಾರತ ಪಾಯಿಂಟ್​ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಅಲ್ಲದೆ ತನ್ನ ಸೆಮೀಸ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದೆ. ಇತ್ತ ವಿಂಡೀಸ್ 5ನೇ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಇದಕ್ಕೂ ಮುನ್ನ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಓಪನರ್​ಗಳಾಗಿ ಕಣಕ್ಕಿಳದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ಆದರೆ, ರೋಹಿತ್ 23 ಎಸೆತಗಳಲ್ಲಿ 18 ರನ್ ಬಾರಿಸಿ ಕೀಮರ್ ರೋಚ್ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

India vs West Indies: ವಿವಾದಾತ್ಮಕ ತೀರ್ಪು: ರೋಹಿತ್ ಔಟ್-ನಾಟೌಟ್, ವಿಡಿಯೋ ನೋಡಿ ನೀವೇ ನಿರ್ಧರಿಸಿ

ಈ ಹಂತದಲ್ಲಿ ಜೊತೆಗೂಡಿದ ಕೊಹ್ಲಿ ಹಾಗೂ ರಾಹುಲ್ ಕಲಾತ್ಮಕವಾಗಿ ಇನಿಂಗ್ಸ್ ಕಟ್ಟುವ ಜವಾಬ್ದಾರಿವಹಿಸಿಕೊಂಡರು. ಉತ್ತಮವಾಗಿಯೇ ಬ್ಯಾಟ್​ ಬೀಸುತ್ತಿದ್ದ ಕನ್ನಡಿಗ ಕೆ.ಎಲ್ ರಾಹುಲ್ ತಂಡದ ಮೊತ್ತ 98 ಇದ್ದಾಗ ಜೇಸನ್ ಹೋಲ್ಡರ್​ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್​ ಆಗಿ ನಿರ್ಗಮಿಸಿದರು. 64 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 48 ರನ್​ ಬಾರಿಸಿದ ರಾಹುಲ್ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ರಾಹುಲ್ ಔಟ್ ಆದ ಬೆನ್ನಲ್ಲೆ ಕ್ರೀಸ್​ಗೆ ಬಂದ ವಿಜಯ್ ಶಂಕರ್ ಮತ್ತೊಮ್ಮ ವಿಫಲರಾದರು. ನಿತ್ತು ಆಡುವಲ್ಲಿ ಎಡವಿದ ಶಂಕರ್ ಕೇವಲ 14 ರನ್​​ಗೆ ಬ್ಯಾಟ್ ಕೆಳಗಿಟ್ಟರೆ, ಕೇದರ್ ಜಾಧವ್ ಆಟ 7 ರನ್​ಗೆ ಅಂತ್ಯವಾಯಿತು.

ಈ ಮಧ್ಯೆ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರು. ಅಲ್ಲದೆ 37 ರನ್ ಗಳಿಸಿರುವಾಗ ವಿಶ್ವದಾಖಲೆ ನಿರ್ಮಿಸಿದರು. ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ (ಮೂರು ಮಾಧರಿಯ ಕ್ರಿಕೆಟ್) ಅತ್ಯಂತ ವೇಗವಾಗಿ ಕಡಿಮೆ ಇನ್ನಿಂಗ್ಸ್​ನಲ್ಲಿ ಒಟ್ಟು 20 ಸಾವಿರ ರನ್ ಕಲೆಹಾಕಿ ಸಚಿನ್ ಹಾಗೂ ಲಾರ ದಾಖಲೆಯನ್ನು ಪುಡಿ ಮಾಡಿದ್ದಾರೆ.

ಆದರೆ ತಂಡದ ಮೊತ್ತ 200 ದಾಟುವ ಮುನ್ನವೇ ಕೊಹ್ಲಿ ಪೆವಿಲಿಯನ್ ಹಾದಿ ಹಿಡಿದ್ದು ಭಾರತ ಇಕ್ಕಟ್ಟಿಗೆ ಸಿಲುಕಿದೆ. 82 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 72 ರನ್ ಬಾರಿಸಿ ಕೊಹ್ಲಿ ಔಟ್ ಆದರು.

ಬಳಿಕ ಎಂ ಎಸ್ ಧೋನಿ ಜೊತೆಯಾದ ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸಿ ತಂಡದ ರನ್ ಗತಿಯನ್ನು ಏರಿಸುವ ಜವಾಬ್ದಾರಿ ಹೊತ್ತರು. ಅದರಂತೆ ಅಂತಿಮ ಹಂತದಲ್ಲಿ ಉತ್ತಮ ರನ್ ಕಲೆಹಾಕಿದ ಪರಿಣಾಮ ಭಾರತ 50 ಓವರ್​ಗೆ 7 ವಿಕೆಟ್ ಕಳೆದುಕೊಂಡು 268 ರನ್ ಕಲೆಹಾಕಿತು. ಧೋನಿ 61 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸ್​​ನೊಂದಿಗೆ ಅಜೇಯ 56 ರನ್ ಬಾರಿಸಿದರೆ, ಹಾರ್ದಿಕ್ 38 ಎಸೆತಗಳಲ್ಲಿ 46 ರನ್ ಕಲೆಹಾಕಿದರು. ವೆಸ್ಟ್​ ಇಂಡೀಸ್ ಪರ ಕೇಮರ್ ರೋಚ್ 3 ವಿಕೆಟ್ ಕಿತ್ತರೆ, ಜೇಸನ್ ಹೋಲ್ಡರ್ 2, ಶೆಲ್ಡನ್ ಕಟ್ರೆಲ್ 1 ವಿಕೆಟ್ ಪಡೆದರು.

 
First published: