India Vs West Indies: ಕೊಹ್ಲಿ-ಪಂತ್​ ಅರ್ಧಶತಕ; ವೆಸ್ಟ್​ ಇಂಡೀಸ್​ ವಿರುದ್ಧ ಭಾರತಕ್ಕೆ ಗೆಲುವು

ಜಾಗರೂಕ ಆಟ ಆರಂಭಿಸಿದ ವಿರಾಟ್​ ಕೊಹ್ಲಿ (59), ರಿಷಬ್​ ಪಂತ್​ (65) ರನ್​ ಗಳಿಸಿ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸಿತು. 

Vinay Bhat | news18
Updated:August 7, 2019, 7:36 AM IST
India Vs West Indies: ಕೊಹ್ಲಿ-ಪಂತ್​ ಅರ್ಧಶತಕ; ವೆಸ್ಟ್​ ಇಂಡೀಸ್​ ವಿರುದ್ಧ ಭಾರತಕ್ಕೆ ಗೆಲುವು
ಸರಣಿ ಗೆದ್ದ ಸಂಭ್ರಮದಲ್ಲಿ ಟೀಂ ಇಂಡಿಯಾ
Vinay Bhat | news18
Updated: August 7, 2019, 7:36 AM IST
ಬೆಂಗಳೂರು (ಆ. 06): ಗಯಾನದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಸರಣಿ ಕ್ಲೀನ್​ ಸ್ವೀಪ್​ ಮಾಡಿದೆ.

ದೀಪಕ್ ಚಹಾರ್​ರ ಅತ್ಯುತ್ತಮ ಬೌಲಿಂಗ್ ದಾಳಿಯ ನೆರವಿನಿಂದ ವಿಂಡೀಸ್ 20 ಓವರ್​ಗೆ 146 ರನ್ ಕಲೆಹಾಕಿತ್ತು. 147 ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ ಉಂಟಾಯಿತು. ಶಿಖರ್​ ಧವನ್​ (3), ಕನ್ನಡಿಗ ಕೆಎಲ್​ ರಾಹುಲ್​ (20) ಔಟ್​ ಆದರು.

ನಂತರ ಜಾಗರೂಕ ಆಟ ಆರಂಭಿಸಿದ ವಿರಾಟ್​ ಕೊಹ್ಲಿ (59), ರಿಷಬ್​ ಪಂತ್​ (65) ರನ್​ ಗಳಿಸಿ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸಿತು.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಬ್ಯಾಟಿಂಗ್​ಗೆ ಇಳಿದ ವೆಸ್ಟ್​ ಇಂಡೀಸ್ ಆರಂಭದಲ್ಲೇ ದೀಪಕ್ ಚಹಾರ್ ಸ್ವಿಂಗ್ ಮೋಡಿಗೆ ಸುನೀಲ್ ನರೈನ್(2), ಎವಿನ್ ಲೆವಿಸ್(10) ಹಾಗೂ ಶಿಮ್ರೋನಬ್ ಹೆಟ್ಮೇರ್(1) ಪೆವಿಲಿಯನ್ ಸೇರಿಕೊಂಡರು.

ಬಳಿಕ 4ನೇ ವಿಕೆಟ್​ಗೆ ಜೊತೆಯಾದ ಕೀರೊನ್ ಪೊಲ್ಲಾರ್ಡ್​ ಹಾಗೂ ನಿಕೋಲಸ್ ಪೂರನ್ ತಂಡವನ್ನು ಆಪತ್ತಿನಿಂದ ಪಾರು ಮಾಡಿದರು. 66 ರನ್​ಗಳ ಕಾಣಿಕೆ ನೀಡಿದ ಈ ಜೋಡಿ ಪೈಕಿ ಪೂರನ್ 17 ರನ್ ಗಳಿಸಿ ಔಟ್ ಆದರು.

ಈ ಮಧ್ಯೆ ಪೊಲ್ಲಾರ್ಡ್​ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಬಳಿಕ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದ ಪೊಲ್ಲಾರ್ಡ್​ 45 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್​ನೊಂದಿಗೆ 58 ರನ್ ಗಳಿಸಿ ನಿರ್ಗಮಿಸಿದರು. ಬಂದ ಬೆನ್ನಲ್ಲೆ ಬ್ರಾಥ್​ವೈಟ್​ರನ್ನು ಔಟ್ ಮಾಡುವ ಮೂಲಕ ರಾಹುಲ್ ಚಹಾರ್ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೊಚ್ಚಲ ವಿಕೆಟ್ ಕಿತ್ತರು.

ಕೊನೆ ಹಂತದಲ್ಲಿ ರೋಮನ್ ಪಾವಲ್(32*) ಕೊಂಚ ರನ್ ಕಲೆಹಾಕಿ ತಂಡದ ಮೊತ್ತವನ್ನು ಏರಿಸಿದರು. ಪರಿಣಾಮ ವಿಂಡೀಸ್ 20 ಓವರ್​ಗೆ 6 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕಿತು. ಭಾರತ ಪರ ದೀಪಕ್ ಚಹಾರ್ 3 ವಿಕೆಟ್ ಕಿತ್ತು ಮಿಂಚಿದರೆ, ನವ್​ದೀಪ್ ಸೈನಿ 2 ಹಾಗೂ ರಾಹುಲ್ ಚಹಾರ್ 1 ವಿಕೆಟ್ ಪಡೆದರು.
Loading...

ಇಂದಿನ ಪಂದ್ಯಕ್ಕೆ ಭಾರತದಲ್ಲಿ ಪ್ರಮುಖ ಮೂರು ಬದಲಾವಣೆ ಮಾಡಲಾಗಿದೆ. ರೋಹಿತ್ ಶರ್ಮಾ, ಜಡೇಜಾ ಹಾಗೂ ಖಲೀಲ್​ಗೆ ವಿಶ್ರಾಂತಿ ನೀಡಿ ರಾಹುಲ್ ಚಹಾರ್, ಕೆ ಎಲ್ ರಾಹುಲ್ ಹಾಗೂ ದೀಪಕ್ ಚಹಾರ್​ಗೆ ಅವಕಾಶ ನೀಡಲಾಗಿದೆ. ಈ ಮೂಲಕ ರಾಹುಲ್ ಚಹಾರ್ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಪಂದ್ಯಕ್ಕೆ ಪದರಾರ್ಪಣೆ ಮಾಡಿದ್ದಾರೆ.

ಆರಂಭದಲ್ಲಿ ಪಂದ್ಯಕ್ಕೆ ವರುಣ ಅಡ್ಡಿ ಪಡಿಸಿದ ಕಾರಣ ಟಾಸ್  ಪ್ರಕ್ರಿಯೆ ತಡಮಾಡಲಾಯಿತು. ಯಾವುದೇ ಓವರ್ ಖಡಿತವಿಲ್ಲದೆ ಸಂಪೂರ್ಣ 20 ಓವರ್​ಗಳ ಪಂದ್ಯ ನಡೆಯಲಿದೆ.

ಭಾರತ ತಂಡ: ಕೆ ಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಕ್ರುನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹಾರ್, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ನವ್​ದೀಪ್ ಸೈನಿ.

ವೆಸ್ಟ್​ ಇಂಡೀಸ್ ತಂಡಸುನೀಲ್ ನರೈನ್, ಎವಿನ್ ಲೆವಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರೊನ್ ಪೊಲ್ಲಾರ್ಡ್​, ಶಿಮ್ರೋನ್ ಹೆಟ್ಮೇರ್, ರೋಮನ್ ಪಾವೆಲ್, ಕಾರ್ಲಸ್ ಬ್ರಾಥ್​ವೈಟ್ (ನಾಯಕ), ಕೀಮೊ ಪೌಲ್, ಫಾಬಿನ್ ಅಲೆನ್, ಶೆಲ್ಡನ್ ಕಾಟ್ರೆಲ್, ಒಶಾನೆ ಥೋಮಸ್.
First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...