India vs West Indies Live: 316 ಟಾರ್ಗೆಟ್; 85 ರನ್​ಗೆ ಕೊಹ್ಲಿ ಔಟ್; ರೋಚಕ ಘಟ್ಟದತ್ತ ಪಂದ್ಯ!

ಮೊದಲ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ಭರ್ಜರಿ ಗೆಲುವು ಸಾಧಿಸಿದರೆ, ಎರಡನೇ ಏಕದಿನದಲ್ಲಿ ಭಾರತ ಜಯಿಸಿ ಸರಣಿ ಸಮಬಲ ಸಾಧಿಸಿತ್ತು. ಇಂದು ನಡೆಯುತ್ತಿರುವ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದೆ. ಹೀಗಾಗಿ ಹೈವೋಲ್ಟೇಜ್ ಪಂದ್ಯವನ್ನು ನಿರೀಕ್ಷಿಸಲಾಗಿದೆ.

ಜೊತೆಗೆ ಏಕದಿನ ಪಂದ್ಯಗಳಲ್ಲಿ 5 ಸಾವಿರ ಪೂರೈಸಿದ ವಿಶ್ವದ 8ನೇ ನಾಯಕ ಆಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಟಿಂಗ್(8497) ಕ್ಯಾಪ್ಟನ್ ಆಗಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ್ದಾರೆ.

ಜೊತೆಗೆ ಏಕದಿನ ಪಂದ್ಯಗಳಲ್ಲಿ 5 ಸಾವಿರ ಪೂರೈಸಿದ ವಿಶ್ವದ 8ನೇ ನಾಯಕ ಆಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಟಿಂಗ್(8497) ಕ್ಯಾಪ್ಟನ್ ಆಗಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ್ದಾರೆ.

  • Share this:
ಕಟಕ್ (ಡಿ. 22): ಇಲ್ಲಿನ ಬಾರಬತಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ- ವೆಸ್ಟ್​ ಇಂಡೀಸ್ ಮೂರನೇ ಏಕದಿನ ಪಂದ್ಯದಲ್ಲಿ ಕೆರಿಬಿಯನ್ನರು ಉತ್ತಮ ಮೊತ್ತ ಕಲೆಹಾಕಿದ್ದಾರೆ. ಕೀರೊನ್ ಪೊಲಾರ್ಡ್​ ಹಾಗೂ ನಿಕೋಲಸ್ ಪೂರನ್ ಅರ್ಧಶತಕದ ನೆರವಿನಿಂದ ಭಾರತಕ್ಕೆ ಗೆಲ್ಲಲು 316 ರನ್​ಗಳ ಟಾರ್ಗೆಟ್ ನೀಡಿದೆ.

ಈ ಟಾರ್ಗೆಟ್ ಬೆನ್ನಟ್ಟಿರುವ ಭಾರತ 6 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ವಿರಾಟ್ ಕೊಹ್ಲಿ 85 ರನ್ ಗಳಿಸಿ ಔಟ್ ಆಗಿದ್ದು, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಕ್ರೀಸ್​ನಲ್ಲಿದ್ದಾರೆ.

ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಮೊದಲ ವಿಕೆಟ್​ಗೆ ಶತಕದ ಜೊತೆಯಾಟ ಆಡಿದರು. ಆರಂಭದಿಂದಲೆ ಎಚ್ಚರಿಕೆಯ ಆಟವಾಡಿದ ಈ ಜೋಡಿ ಆವೇಶಕ್ಕೆ ಒಳಗಾಗದೆ ವಿಕೆಟ್​ ಕಳೆದುಕೊಳ್ಳದಂತೆ ನೋಡಿಕೊಂಡಿತು. ಇಬ್ಬರೂ ಅರ್ಧಶತಕ ಪೂರೈಸಿದರು. 122 ರನ್​ಗಳ ಅಮೋಘ ಕಾಣಿಕೆ ನೀಡಿದರು. ಚೆನ್ನಾಗಿಯೆ ಆಡುತ್ತಿದ್ದ ರೋಹಿತ್ ಬಿರುಸಿನ ಆಟದ ಮೊರೆಹೋಗಿ 63 ಎಸೆತಗಳಲ್ಲಿ 63 ರನ್ ಗಳಿಸಿ ಔಟ್ ಆದರು.

ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆಯಾದ ರಾಹುಲ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ಇರಲಿಲ್ಲ. 89 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಬಾರಿಸಿ 77 ರನ್ ಗಳಿಸಿ ಔಟ್ ಆದರು. ಶ್ರೇಯಸ್ ಐಯರ್ ಕೂಡ ಬಂದ ಬೆನ್ನಲ್ಲೆ 7 ರನ್​ಗೆ ಸುಸ್ತಾದರು. ಪಂತ್ ಕೂಡ ಕೊಹ್ಲಿಗೆ ಸಾಥ್ ನೀಡದೆ 7 ರನ್​ಗೆ ಸುಸ್ತಾದರೆ ಕೇದರ್ ಜಾಧವ್ ಕೂಡ 9 ರನ್​ಗೆ ನಿರ್ಗಮಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಉಳಿದ ವಿಂಡೀಸ್ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿತು. 57 ರನ್ ಆಗುವ ಹೊತ್ತಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಎವಿನ್ ಲೆವಿಸ್ ಹಾಗೂ ಶಾಯ್ ಹೋಪ್ ಅರ್ಧಶತಕದ ಜೊತೆಯಾಟ ಆಡಿದರಷ್ಟೆ.

ಜಡೇಜಾ ಬೌಲಿಂಗ್​ನಲ್ಲಿ ಲೆವಿಸ್ 21 ರನ್​​ಗೆ ಔಟ್ ಆದರು. ಇದರ ಬೆನ್ನಲ್ಲೆ ಅರ್ಧಶತಕದ ಹೊಸ್ತಿಲಲ್ಲಿದ್ದ ಹೋಪ್ 42 ರನ್​ಗೆ​ ನಿರ್ಗಮಿಸಿದರು. ಬಳಿಕ ಶಿಮ್ರೋನ್ ಹೆಟ್ಮೇರ್ ಹಾಗೂ ರೋಸ್ಟನ್ ಚೇಸ್ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಅದರಂತೆ ಈ ಜೋಡಿ 62 ರನ್​ಗಳ ಜೊತೆಯಾಟ ಆಡಿತು.

ಚೆನ್ನಾಗಿಯೆ ಆಡುತ್ತಿದ್ದ ಹೆಟ್ಮೇರ್ ಅವರು ಸೈನಿ ಎಸೆದ ಬೌನ್ಸರ್​​ಗೆ 37 ರನ್ ಗಳಿಸಿರುವಾಗ ಔಟ್ ಆದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಸೈನಿ ಚೊಚ್ಚಲ ವಿಕೆಟ್ ಪಡೆದರು. ಇದರ ಬೆನ್ನಲ್ಲೆ 38 ರನ್ ಗಳಿಸಿದ್ದ ಚೇಸ್ ಅವರನ್ನೂ ಸೈನಿ ಬೌಲ್ಡ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು.

ಈ ಸಂದರ್ಭ ಒಂದಾದ ನಾಯಕ ಕೀರೊನ್ ಪೊಲಾರ್ಡ್​ ಹಾಗೂ ನಿಕೋಲಸ್ ಪೂರನ್ ಎಚ್ಚರಿತೆಯಿಂದ ಬ್ಯಾಟ್ ಬೀಸಿದರು. ನಿಧಾನಗತಿಯಲ್ಲಿ ತಂಡದ ರನ್ ಗತಿಯನ್ನು ಏರಿಸಿದ ಈ ಜೋಡಿ ಶತಕದ ಜೊತೆಯಟ ಆಡಿತು. ಇಬ್ಬರೂ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಭಾರತೀಯ ಬೌಲರ್​ಗಳನ್ನು ಕಾಡಿದ ಈ ಜೋಡಿ 135 ರನ್​ಗಳ ಕಾಣಿಕೆ ನೀಡಿತು.

ಅಂತಿಮವಾಗಿ ವೆಸ್ಟ್​ ಇಂಡೀಸ್ 50 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 315 ರನ್​ ಕಲೆಹಾಕಿತು. ಪೊಲಾರ್ಡ್​ 51 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಿಡಿಸಿ ಅಜೇಯ 74 ರನ್ ಗಳಿಸಿದರೆ, ಪೂರನ್ ಕೇವಲ 63 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಿಡಿಸಿ 89 ರನ್ ಚಚ್ಚಿದರು. ಭಾರತ ಪರ ನವ್​ದೀಪ್ ಸೈನಿ 2, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದೆ. ನವ್​ದೀಪ್ ಸೈನಿ ಏಕದಿನ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದಾರೆ. ದೀಪಕ್ ಚಹಾರ್​ಗೆ ಇಂಜುರಿಯಾದ ಕಾರಣ ಇವರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು.

 ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶ್ರೇಯಸ್ ಐಯರ್, ರಿಷಭ್ ಪಂತ್, ಕೇದರ್ ಜಾಧವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ನವ್​ದೀಪ್ ಸೈನಿ.

ಇತ್ತ ವೆಸ್ಟ್​ ಇಂಡೀಸ್ ತಂಡ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ.

ವೆಸ್ಟ್ಇಂಡೀಸ್ ತಂಡ: ಕೀರೊನ್ ಪೊಲಾರ್ಡ್​ (ನಾಯಕ), ಶಾಯ್ ಹೋಪ್, ಎವಿನ್ ಲೆವಿಸ್, ಶಿಮ್ರೋನ್ ಹೆಟ್ಮೇರ್, ನಿಕೋಲಸ್ ಪೂರನ್, ರಾಸ್ಟನ್ ಚೇಸ್, ಜೇಸನ್ ಹೋಲ್ಡರ್, ಶೆಲ್ಡನ್ ಕಾಟ್ರೆಲ್, ಕೀಮೊ ಪೌಲ್, ಅಲ್ಜರಿ ಜೋಸೆಫ್, ಖೇರಿ ಪಿರ್ರೆ.

ಈ ವರ್ಷ ಭಾರತ ಆಡುತ್ತಿರುವ ಕೊನೆಯ ಪಂದ್ಯ ಇದಾಗಿದ್ದು, ದಾಖಲೆಯ ಸತತ 10ನೇ ಉಭಯ ಸರಣಿ ಗೆಲುವಿನೊಂದಿಗೆ 2019ನೇ ಸಾಲಿಗೆ ವಿದಾಯ ಹೇಳುವ ಅಂದಾಜಿನಲ್ಲಿದೆ.
Published by:Vinay Bhat
First published: