India Vs West Indies: ಪಂದ್ಯಕ್ಕೆ ಮಳೆ ಅಡ್ಡಿ, ಡಿಎಲ್​ಎಸ್​ ನಿಯಮ ಅನ್ವಯ; ಭಾರತಕ್ಕೆ 22 ರನ್​ಗಳ ಜಯ

ಈಗಾಗಲೇ ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಇನ್ನೊಂದು ಪಂದ್ಯ ಗೆದ್ದರೆ ಸರಣಿ ವಶ ಪಡಿಸಿಕೊಳ್ಳಲಿದೆ.

ಭಾರತ ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶ್ರೇಯಸ್ ಅಯ್ಯರ್, ಕೇದರ್ ಜಾಧವ್, ಶಿಖರ್ ಧವನ್, ಕೆ.ಎಲ್ ರಾಹುಲ್, ರಿಷಭ್ ಪಂತ್, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಶಿವಂ ದುಬೇ, ಯಜುವೇಂದ್ರ ಚಹಲ್, ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ.

ಭಾರತ ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶ್ರೇಯಸ್ ಅಯ್ಯರ್, ಕೇದರ್ ಜಾಧವ್, ಶಿಖರ್ ಧವನ್, ಕೆ.ಎಲ್ ರಾಹುಲ್, ರಿಷಭ್ ಪಂತ್, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಶಿವಂ ದುಬೇ, ಯಜುವೇಂದ್ರ ಚಹಲ್, ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ.

  • News18
  • Last Updated :
  • Share this:
ಬೆಂಗಳೂರು (ಆ. 04): ಫ್ಲೋರಿಡಾದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ 2ನೇ ಟಿ-20 ಪಂದ್ಯಕ್ಕೆ ಮಳೆ ಅಡ್ಡಿ ಆದ ಹಿನ್ನೆಲೆಯಲ್ಲಿ ಡಕ್​ವರ್ತ್​ ಲೂಯಿಸ್ ನಿಯಮ ಅನ್ವಯ ಮಾಡಲಾಗಿದ್ದು,​ ಭಾರತಕ್ಕೆ 22 ರನ್​ಗಳ ಜಯ ದೊರೆತಿದೆ. ಈ ಮೂಲಕ ಟಿ20 ಸರಣಿಯನ್ನು ಟೀಂ ಇಂಡಿಯಾ ವಶಪಡಿಸಿಕೊಂಡಿತು.

169 ರನ್​ಗಳ ಟಾರ್ಗೆಟ್ ಬೆನ್ನಟ್ಟಿರುವ ಕೆರಿಬಿಯನ್ನರಿಗೆ ವರುಣ ಅಡ್ಡಿ ಪಡಿಸಿದ್ದ. 15.3 ಓವರ್ ಆಗುವ ಹೊತ್ತಿಗೆ ಮಳೆ ಶುರುವಾಗಿತ್ತು.  ವೆಸ್ಟ್​ ಇಂಡೀಸ್ 98 ರನ್​ಗೆ 4 ವಿಕೆಟ್ ಕಳೆದುಕೊಂಡಿತ್ತು. ಇನ್ನು 27 ಬಾಲ್ ಬಾಕಿಯಿದ್ದು ವಿಂಡೀಸ್ ಗೆಲುವಿಗೆ 70 ರನ್​ಗಳ ಅವಶ್ಯಕತೆಯಿತ್ತು. ನಂತರ ಮಳೆ ನಿಲ್ಲದ ಕಾರಣ ಡಿಎಲ್ಎಸ್​ ನಿಯಮ ಅನ್ವಯ ಮಾಡಲಾಯಿತು. ಈ ಮೂಲಕ ಭಾರತಕ್ಕೆ 22 ರನ್​ಗಳ ಜಯ ದೊರೆಯಿತು.

ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಭುವನೇಶ್ವರ್ ಬೌಲಿಂಗ್​ನಲ್ಲಿ ಎವಿನ್ ಲೆವಿಸ್ ಸೊನ್ನೆ ಸುತ್ತಿದರೆ, ಸುನೀಲ್ ನರೈನ್​(4)ರನ್ನು ಸುಂದರ್ ಪೆವಿಲಿಯನ್​ಗೆ ಅಟ್ಟಿದರು.

ಬಳಿಕ ಒಂದಾದ ನಿಕೋಲಸ್ ಪೂರನ್ ಹಾಗೂ ರೋಮನ್ ಪಾವೆಲ್ ಉತ್ತಮ ಜೊತೆಯಾಟ ಆಡಿ ತಂಡಕ್ಕೆ ಆಸರೆಯಾಗಿ ನಿಂತರು. ಪಾವೆಲ್ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್​ನೊಂದಿಗೆ 54 ರನ್ ಬಾರಿಸಿದರೆ, ಪೂರನ್ 19 ರನ್ ಗಳಿಸಿದರು. ಈ ಮೂಲಕ 76 ರನ್​ಗಳ ಕಾಣಿಕೆ ನೀಡಿದ ಈ ಜೋಡಿ ತಂಡಕ್ಕೆ ಮತ್ತೆ ಗೆಲುವಿನ ರುಚಿ ನೀಡಿದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಇದರಂತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆಟ ಪ್ರದರ್ಶಿಸಿದರು. ರೋಹಿತ್ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರೆ, ಧವನ್ ಸಾತ್ ನೀಡುತ್ತಿದ್ದಾರೆ. 67 ರನ್​ಗಳ ಕಾಣಿಕೆಯೊಂದಿಗೆ ಇವರ ಜೊತೆಯಾಟ ಅಂತ್ಯ ಕಂಡಿತು. ಧವನ್ 23 ರನ್ ಬಾರಿಸಿರುವಾಗ ಪೌಲ್ ಬೌಲಿಂಗ್​ನಲ್ಲಿ ಬೌಲ್ಡ್​ ಆದರು.

ಬಳಿಕ 2ನೇ ವಿಕೆಟ್​ಗೆ ರೋಹಿತ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಅತ್ಯುತ್ತಮ ಇನ್ನಿಂಗ್ಸ್​ ಕಟ್ಟಿದರು. ಈ ಮಧ್ಯೆ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ಮಿಂಚಿದರು. ಫಿಫ್ಟಿ ಬೆನ್ನಲ್ಲೆ ಬಿರುಸಿನ ಆಟಕ್ಕೆ ಮುಂದಾದ ರೋಹಿತ್ ಅಂತಿಮವಾಗಿ 51 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸ್​ ಬಾರಿಸಿ  67 ರನ್ ಚಚ್ಚಿ ಔಟ್ ಆದರು.

ರೋಹಿತ್ ಔಟ್ ಆದ ಬೆನ್ನಲ್ಲೆ ರಿಷಭ್ ಪಂತ್(4) ಹಾಗೂ 28 ರನ್ ಗಳಿಸಿದ್ದ ಕೊಹ್ಲಿ ಕೂಡ ಪೆವಿಲಿಯನ್ ಹಾದಿ ಹಿಡಿದರು. ಮನೀಶ್ ಪಾಂಡೆ ಮತ್ತೊಮ್ಮೆ ವೈಫಲ್ಯ ಅನುಭವಿಸಿ 6 ರನ್​ಗೆ ಸುಸ್ತಾದರು. ಕೊನೆಯಲ್ಲಿ ಕ್ರುನಾಲ್ ಪಾಂಡ್ಯ ಒಂದಿಷ್ಟು ರನ್ ಕಲೆಹಾಕಿದ ತಂಡದ ಮೊತ್ತವನ್ನು ಏರಿಸಲು ಸಹಾಯ ಮಾಡಿದರು.

ಅಂತಿಮವಾಗಿ ಭಾರತ 20 ಓವರ್​ಗೆ 5 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು. ಕ್ರುನಾಲ್ ಪಾಂಡ್ಯ 13 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು. ವಿಂಡೀಸ್ ಪರ ಥೋಮಸ್ ಹಾಗೂ ಕಟ್ರೆಲ್ ತಲಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಇಂದಿನ ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಕ್ರುನಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ನವ್​ದೀಪ್ ಸೈನಿ.

ವೆಸ್ಟ್ಇಂಡೀಸ್ ತಂಡಸುನೀಲ್ ನರೈನ್, ಎವಿನ್ ಲೆವಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರೊನ್ ಪೊಲ್ಲಾರ್ಡ್​, ಶಿಮ್ರೋನ್ ಹೆಟ್ಮೇರ್, ರೋಮನ್ ಪಾವೆಲ್, ಕಾರ್ಲಸ್ ಬ್ರಾಥ್​ವೈಟ್ (ನಾಯಕ), ಕೀಮೊ ಪೌಲ್, ಖರಿ ಪಿರ್ರೆ, ಶೆಲ್ಡನ್ ಕಾಟ್ರೆಲ್, ಒಶಾನೆ ಥೋಮಸ್.
First published: