ತಿರುವನಂತಪುರ (ಡಿ. 08): ಇಲ್ಲಿನ ಗ್ರೀನ್ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಭಾರತೀಯ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಂಡೀಸ್ ಬ್ಯಾಟ್ಸ್ಮನ್ಗಳು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಭಾರತ ಶಿವಂ ದುಬೆ ಆಕರ್ಷಕ ಅರ್ಧಶತಕ ಹಾಗೂ ರಿಷಭ್ ಪಂತ್ ಸಮಯೋಚಿತ ಆಟದ ನೆರವಿನಿಂದ ವಿಂಡೀಸ್ಗೆ ಗೆಲ್ಲಲು 171 ರನ್ಗಳ ಟಾರ್ಗೆಟ್ ನೀಡಿತ್ತು.
ಈ ಗುರಿ ಬೆನ್ನಟ್ಟಿರುವ ವೆಸ್ಟ್ ಇಂಡೀಸ್ ಬೊಂಬಾಟ್ ಆಟ ಪ್ರದರ್ಶಿಸಿತು. ಓಪನರ್ಗಳಾದ ಲೆಂಡ್ ಸಿಮಾನ್ಸ್ ಹಾಗೂ ಎವಿನ್ ಲೆವಿಸ್ ಬಿರುಸಿನ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಈ ಜೋಡಿ ಬರೋಬ್ಬರಿ 73 ರನ್ಗಳ ಕಾಣಿಕೆ ನೀಡಿದರು.
IND vs WI: ಟಿ-20 ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ ಕಿಂಗ್ ಕೊಹ್ಲಿ!
ಆದರೆ, ಸುಂದರ್ರ ಅವರ ಕೊನೆಯ ಓವರ್ನಲ್ಲಿ 40 ರನ್ ಗಳಿಸಿದ್ದ ಲೆವಿಸ್ ಸ್ಟಂಪ್ಔಟ್ಗೆ ಬಲಿಯಾದರು. ಶಿಮ್ರೋನ್ ಹೆಟ್ಮೇರ್ 14 ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸಿ 23 ರನ್ಗೆ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
ಈ ನಡುವೆ ಲೆಂಡ್ ಸಿಮಾನ್ಸ್ ಸ್ಫೋಟಕ ಆಟ ಕೊಹ್ಲಿ ಪಡೆಯನ್ನು ಸೋಲಿನ ಸುಳಿಗೆ ಸಿಲುಕಿಸಿತು. ಭಾರತೀಯ ಬೌಲರ್ಗಳ ಬೆವರಿಳಿಸಿದ ಸಿಮಾನ್ಸ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ನಿಕೋಲಸ್ ಪೂರನ್ ಜೊತೆಗೂಡಿ ಸಿಮಾನ್ಸ್ ತಂಡಕ್ಕೆ ಸುಲಭ ಜಯ ತಂದಿಟ್ಟರು.
ಆತ ತಂಡದಲ್ಲಿ ಯಾಕಿಲ್ಲ? ಕೇಳಿದ್ದಕ್ಕೆ, ನನ್ನ ತಂಗಿಯೊಂದಿಗೆ ಬೆಡ್ನಲ್ಲಿ ಮಲಗಿದ್ದ ಎಂದ ಡುಪ್ಲೆಸಿಸ್!
ಅಂತಿಮವಾಗಿ ವೆಸ್ಟ್ ಇಂಡೀಸ್ 18.3 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿದ ಗೆಲುವು ಸಾಧಿಸಿತು. ಸಿಮಾನ್ಸ್ 45 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 67 ರನ್ ಗಳಿಸಿದರೆ, ಪೂರನ್ ಅಜೇಯ 38 ರನ್ ಬಾರಿಸಿದರು. ಭಾರತ ಪರ ಸುಂದರ್ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು.
8 ವಿಕೆಟ್ಗಳ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ 1-1 ಅಂತರದಿಂದ ಸರಣಿ ಸಮಬಲ ಸಾಧಿಸಿದೆ. ಅಂತಿಮ ಪಂದ್ಯ ಡಿ. 11 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸಿಮಾನ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರೊನ್ ಪೊಲಾರ್ಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ಶುರು ಮಾಡಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಕೆ ಎಲ್ ರಾಹುಲ್ 11 ರನ್ಗೆ ಸುಸ್ತಾಗಿ ಪೆವಿಲಿಯನ್ ಸೇರಿಕೊಂಡರು.
ಈ ಸಂದರ್ಭ ರೋಹಿತ್ ಶರ್ಮಾ ಹಾಗೂ ಶಿವಂ ದುಬೆ ಜೊತೆಯಾಗಿ ಬ್ಯಾಟ್ ಬೀಸಿದರು. ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಆದರೆ, ಈ ಹೊತ್ತಿಗೆ ರೋಹಿತ್(15) ಔಟ್ ಆಗಿ ಆಘಾತ ನೀಡಿದರು.
IND vs WI: ಅದ್ದೂರಿ ಸ್ವಾಗತ ಕೋರಿದ್ದೇ ಬಂತು; ತವರಿನಲ್ಲೂ ಸ್ಯಾಮ್ಸನ್ಗೆ ಸಿಗದ ಅವಕಾಶ
ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆಯಾದ ಶಿವಂ ದುಬೆ ಸ್ಫೋಟಕ ಆಟ ಪ್ರದರ್ಶಿಸಿದರು. ಅದರಲ್ಲು ದುಬೆ ಅವರು ಪೊಲಾರ್ಡ್ರ ಒಂದು ಓವರ್ನಲ್ಲಿ 23 ರನ್ ಚಚ್ಚಿದರು. ಕೇವಲ 27 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಿಡಿಸಿ ದುಬೆ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು. ಹಾಫ್ ಸೆಂಚುರಿ ಬೆನ್ನಲ್ಲೆ ದುಬೆ ಅವರು 54 ರನ್ಗೆ ಔಟ್ ಆದರು.
ಇತ್ತ ವಿರಾಟ್ ಕೊಹ್ಲಿ ಆಟ 19 ರನ್ಗೆ ಅಂತ್ಯವಾದರೆ, ಶ್ರೇಯಸ್ ಐಯರ್ 10 ರನ್ ಗಳಿಸಿ ನಿರ್ಗಮಿಸಿದರು. ಕೊನೆಯಲ್ಲಿ ರಿಷಭ್ ಪಂತ್ ಬ್ಯಾಟ್ ಬೀಸಿ ತಂಡದ ಮೊತ್ತವನ್ನು ಏರಿಸಿದರು. ಪಂತ್ 22 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 33 ರನ್ ಬಾರಿಸಿದರು.
ಭಾರತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು. ವಿಂಡೀಸ್ ಪರ ಹೇಡನ್ ವಾಲ್ಶ್ ಹಾಗೂ ಕೆಸ್ರಿಕ್ ವಿಲಿಯಮ್ಸ್ ತಲಾ 2 ವಿಕೆಟ್ ಕಿತ್ತರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ