India vs West Indies: ಕೊಹ್ಲಿ ಆಕರ್ಷಕ ಅರ್ಧಶತಕ: ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ

ಈಗಾಗಲೇ ಟ್ವೆಂಟಿ 20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಟೀಂ ಇಂಡಿಯಾ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನದ ಜಯದ ಖಾತೆ ತೆರೆಯುವ ವಿಶ್ವಾಸದಲ್ಲಿದೆ.

zahir | news18-kannada
Updated:August 11, 2019, 8:43 PM IST
India vs West Indies: ಕೊಹ್ಲಿ ಆಕರ್ಷಕ ಅರ್ಧಶತಕ: ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ
ವಿರಾಟ್ ಕೊಹ್ಲಿ
zahir | news18-kannada
Updated: August 11, 2019, 8:43 PM IST
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವು ಇಲ್ಲಿನ ಪೊರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಮಳೆಯಿಂದ ರದ್ದಾದ ಮೊದಲ ಏಕದಿನ ಪಂದ್ಯಕ್ಕೆ ಆರಿಸಲಾಗಿದ್ದ ತಂಡವೇ ಇಂದು ಕೂಡ ಕಣಕ್ಕಿಳಿದಿದೆ. ಹೀಗಾಗಿ ಕನ್ನಡಿಗರಾದ ರಾಹುಲ್ ಹಾಗೂ ಮನೀಷ್ ಪಾಂಡೆ ಅವಕಾಶ ವಂಚಿತರಾಗಿದ್ದಾರೆ.

ಭಾರೀ ಟೀಕೆಗೆ ಕಾರಣವಾಗುತ್ತಿರುವ ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವ ನಿರೀಕ್ಷೆಯಿದ್ದು, ಈ ಮೂಲಕ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ಯಾಪ್ಟನ್ ಕೊಹ್ಲಿ ಯೋಜನೆ ಹಾಕಿಕೊಂಡಿದ್ದಾರೆ.

ಅತ್ತ ಕೆರಿಬಿಯನ್ನರ ತಂಡದಲ್ಲಿ ಗಾಯಾಳು ಫ್ಯಾಬಿಯನ್ ಅಲೆನ್ ಸ್ಥಾನವನ್ನು ಒಶಾನೆ ಥಾಮಸ್ ತುಂಬಿದ್ದು, ಈ ಮೂಲಕ ಒಂದು ಬದಲಾವಣೆಯೊಂದಿಗೆ ಮೈದಾನಕ್ಕಿಳಿದಿದೆ. ಇನ್ನು ಭಾರತೀಯ ಬೌಲರುಗಳಿಗೆ ಕ್ರಿಸ್ ಗೇಲ್ ಅಗ್ನಿ ಪರೀಕ್ಷೆಯಾಗುವ ಸಾಧ್ಯತೆಯಿದೆ.

ಈಗಾಗಲೇ ಟ್ವೆಂಟಿ 20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಟೀಂ ಇಂಡಿಯಾ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನದ ಜಯದ ಖಾತೆ ತೆರೆಯುವ ವಿಶ್ವಾಸದಲ್ಲಿದೆ. ಇಂದಿನ ಪಂದ್ಯದಲ್ಲಿ ಭಾರತದ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿಯಳಿದಿದ್ದಾರೆ.

ಇತ್ತೀಚಿನ ವರದಿ ಬಂದಾಗ ಟೀಂ ಇಂಡಿಯಾದ ಆರಂಭಿಕ ಆಟಗಾರರಾದ ಶಿಖರ್ ಧವನ್ (2) ಹಾಗೂ ರೋಹಿತ್ ಶರ್ಮಾ (18)  ಔಟ್ ಆಗಿದ್ದಾರೆ. ಇನ್ನು  ನಾಯಕ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದು ಅರ್ಧಶತಕ ಪೂರೈಸಿದ್ದಾರೆ. ಇತ್ತೀಚಿನ ವರದಿ ಬಂದಾಗ ಕ್ರೀಸ್​ನಲ್ಲಿ ಕೊಹ್ಲಿ ಜತೆ ಪಂತ್  ಬ್ಯಾಟ್ ಮಾಡುತ್ತಿದ್ದು, ತಂಡದ ಮೊತ್ತ 22 ಓವರ್​ಗೆ 101/2 .

ಉಭಯ ತಂಡಗಳು:

ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಐಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ನವ್​ದೀಪ್ ಸೈನಿ.

ವೆಸ್ಟ್​ ಇಂಡೀಸ್: ಕ್ರಿಸ್ ಗೇಲ್, ಎವಿನ್ ಲೆವಿಸ್, ಶಾಯ್ ಹೋಪ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ರಾಸ್ಟನ್ ಚೇಸ್, ಜೇಸನ್ ಹೋಲ್ಡರ್ (ನಾಯಕ), ಕಾರ್ಲಸ್ ಬ್ರಾಥ್​ವೈಟ್, ಒಶಾನೆ ಥಾಮಸ್, ಶೆಲ್ಡನ್ ಕಟ್ರೆಲ್, ಕೇಮರ್ ರೋಚ್.

 
First published:August 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...