India vs West Indies Live Score: 208 ಟಾರ್ಗೆಟ್: ಕೊಹ್ಲಿ ಆರ್ಭಟ; ಗೆಲುವಿತ್ತ ಭಾರತ

41 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಬಾರಿಸಿ ಹೆಟ್ಮೇರ್ 56 ರನ್ ಗಳಿಸಿದರೆ, ಪೊಲಾರ್ಡ್​ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿ 37 ರನ್ ಬಾರಿಸಿದರು. ವೆಸ್ಟ್​ ಇಂಡೀಸ್ 20 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿದೆ.

ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ

  • Share this:
ಹೈದರಾಬಾದ್ (ಡಿ. 06): ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ಬೃಹತ್ ಮೊತ್ತ ಪೇರಿಸಿದೆ. ಶಿಮ್ರೋನ್ ಹೆಟ್ಮೇರ್ ಹಾಗೂ ನಾಯಕ ಕೀರೊನ್ ಪೊಲಾರ್ಡ್​ ಸ್ಪೋಟಕ ಆಟದ ನೆರವಿನಿಂದ ಬಾರತಕ್ಕೆ ಗೆಲ್ಲಲು 208 ರನ್​ಗಳ ಟಾರ್ಗೆಟ್ ನೀಡಿದೆ.

ಸದ್ಯ ಈ ಗುರಿ ಬೆನ್ನಟ್ಟಿರುವ ಭಾರತ 2 ವಿಕೆಟ್ ಕಳೆದು ಕೊಂಡಿದೆಯಾದರು ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ(8) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್​ಗೆ ಜೊತೆಯಾದ ಕೆ ಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದರು.

ಭಾರತದ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದ ಈ ಜೋಡಿ ತಂಡಕ್ಕೆ ಆಸರೆಯಾಗಿ ನಿಂತಿತು. ಅದರಲ್ಲು ಬಿರುಸಿನ ಆಟ ಪ್ರದರ್ಶಿಸಿದ ರಾಹುಲ್ ಅರ್ಧಶತಕ ಸಿಡಿಸಿ ಮಿಂಚಿದರು.

40 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್​ ಸಿಡಿಸಿದ ರಾಹುಲ್ 62 ರನ್ ಚಚ್ಚಿ ಔಟ್ ಆದರು. ಬಳಿಕ ಅಬ್ಬರಿಸಲು ಶುರುಮಾಡಿದ ಕೊಹ್ಲಿ ಹಾಫ್ ಸೆಂಚುರಿ ಬಾರಿಸಿ ಬ್ಯಾಟ್ ಬೀಸುತ್ತಿದ್ದಾರೆ.

ಸಿಕ್ಸ್ ಸಿಡಿಸಲೋಗಿ ಹಿಟ್​ಮ್ಯಾನ್ ಕೇವಲ 8 ರನ್​ಗೆ ಔಟ್ ಆದರು. ಸದ್ಯ ಕೆ ಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸುತ್ತಿದ್ದಾರೆ.

ಇದಕ್ಕೂ ಮುನ್ನ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಬ್ಯಾಟಿಂಗ್​ಗೆ ಇಳಿದ ಕೆರಿಬಿಯನ್ನರಿಗೆ ದೀಪಕ್ ಚಹಾರ್ ಆರಂಭದಲ್ಲೇ ಶಾಕ್ ನೀಡಿದರು. 2ನೇ ಓವರ್​ನ 2ನೇ ಎಸೆತದಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಲೆಂಡ್ ಸಿಮಾನ್ಸ್(2) ಪೆವಿಲಿಯನ್ ಸೇರಿಕೊಂಡರು.

ಆದರೆ, 2ನೇ ವಿಕೆಟ್​ಗೆ ಬ್ರಾಂಡನ್ ಕಿಂಗ್ ಜೊತೆಯಾದ ಎವಿನ್ ಲೆವಿಸ್ ಸ್ಫೋಟಕ ಆಟ ಪ್ರದರ್ಶಿಸಿದರು. ಲೆವಿಸ್ 3 ಬೌಂಡರಿ, 4 ಸಿಕ್ಸರ್ ಸಿಡಿಸಿ ಕೇವಲ 17 ಎಸೆತಗಳಲ್ಲಿ 40 ರನ್ ಚಚ್ಚಿ ಔಟ್ ಆದರು.

ಈ ಸಂದರ್ಭ ಕಿಂಗ್ ಹಾಗೂ ಶಿಮ್ರೋನ್ ಹೆಟ್ಮೇರ್ ಬೌಂಡರಿ- ಸಿಕ್ಸರ್​ಗಳ ಮಳೆ ಸುರಿಸಿದರು. ಅದರಲ್ಲು ಭಾರತೀಯ ಬೌಲರ್​ಗಳ ಬೆವರಿಳಿಸಿದ ಹೆಟ್ಮೇರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 10 ಓವರ್​ಗೂ ಮುನ್ನವೆ ತಂಡದ ಮೊತ್ತ 100ರ ಗಡಿ ದಾಟಿಸಿದರು. ಈ ನಡುವೆ ಕಿಂಗ್ 31 ರನ್ ಗಳಿಸಿ ಔಟ್ ಆದರು.

ಇದು ಅಂತರಾಷ್ಟ್ರೀಯ ಕ್ರಿಕೆಟ್, ಸ್ಕೂಲ್ ಪಂದ್ಯವಲ್ಲ; ಸ್ಯಾಮ್ಸನ್ ಹೊರಗಿಟ್ಟಿದ್ದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು!

ನಂತರ ನಾಯಕ ಕೀರೊನ್ ಪೊಲಾರ್ಡ್​​ ಜೊತೆಯಾದ ಹೆಟ್ಮೇರ್ 71 ರನ್​ಗಳ ಅಮೋಘ ಆಟ ಪ್ರದರ್ಶಿಸಿದರು. ಹೆಟ್ಮೇರ್ ಅರ್ಧಶತಕ ಸಿಡಿಸಿ ಮಿಂಚಿದರು. 41 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಬಾರಿಸಿ ಹೆಟ್ಮೇರ್ 56 ರನ್ ಗಳಿಸಿದರೆ, ಪೊಲಾರ್ಡ್​ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿ 37 ರನ್ ಬಾರಿಸಿದರು.

ಅಂತಿಮವಾಗಿ ವೆಸ್ಟ್​ ಇಂಡೀಸ್ 20 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತು. ಭಾರತ ಪರ ಯಜುವೇಂದ್ರ ಚಹಾಲ್ 2 ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಭಾರತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ. ಆದರೆ, ಸಂಜು ಸ್ಯಾಮ್ಸನ್​ ಮತ್ತೆ ಆಡುವ ಬಳಗದಿಂದ ಹೊರಗುಳಿದಿದ್ದು, ಬೆಂಚ್ ಕಾಯಬೇಕಿದೆ. ರೋಹಿತ್ ಶರ್ಮಾ ಜೊತೆ ಕೆ ಎಲ್ ರಾಹುಲ್ ಇನ್ನಿಂಗ್ಸ್​ ಆರಂಭಿಸಿದರೆ, ಶ್ರೇಯಸ್ ಐಯರ್ ಜೊತೆ ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್ ರಾಹುಲ್‌, ಶ್ರೇಯಸ್ ಐಯರ್, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್‌, ದೀಪಕ್‌ ಚಹಾರ್‌, ಭುವನೇಶ್ವರ್‌ ಕುಮಾರ್‌.

13ನೇ ಆವೃತ್ತಿ ಐಪಿಎಲ್​ನಿಂದ ಹೊರಬಂದ ಮತ್ತೊಬ್ಬ ಅಂತರಾಷ್ಟ್ರೀಯ ಸ್ಟಾರ್ ಆಟಗಾರ!

ಇತ್ತ ಕೀರೊನ್ ಪೊಲಾರ್ಡ್​ ನೇತೃತ್ವದ ವೆಸ್ಟ್​ ಇಂಡೀಸ್ ತಂಡ ಕೂಡ 11 ಬಲಿಷ್ಠ ಆಟಗಾರರನ್ನು ಇಂದಿನ ಪಂದ್ಯಕ್ಕೆ ಆಯ್ಕೆ ಮಾಡಿದೆ. ಎವಿನ್ ಲೆವಿಸ್, ಶಿಮ್ರೋನ್ ಹೆಟ್ಮೇರ್​ರಂತಹ ಪ್ರಮುಖ ಆಟಗಾರರನ್ನು ಕಣಕ್ಕಿಳಿಸಿದೆ.

ವೆಸ್ಟ್​ ಇಂಡೀಸ್ ತಂಡ: ಕೀರೊನ್ ಪೊಲಾರ್ಡ್​ (ನಾಯಕ), ಲೆಂಡ್ ಸಿಮಾನ್ಸ್, ಎವಿನ್ ಲೆವಿಸ್, ಬ್ರಾಂಡನ್ ಕಿಂಗ್, ದಿನೇಶ್ ರಾಮ್ದಿನ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್,  ಹೇಡನ್ ವಾಲ್ಶ್​, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್, ಖೇರಿ ಪಿರ್ರೆ.

 



ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: