IND vs WI: ಕೊಹ್ಲಿ ಖಾತೆಗೆ 43ನೇ ಶತಕ; ಟೀಂ ಇಂಡಿಯಾದಿಂದ ಸ್ವಾತಂತ್ರ್ಯಕ್ಕೆ ಸರಣಿ ಗೆಲುವಿನ ಸಿಹಿ

6 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಭಾರತ 2-0 ಮುನ್ನಡೆಯಿಂದ ಏಕದಿನ ಸರಣಿಯನ್ನೂ ವಶ ಪಡಿಸಿಕೊಂಡಿದೆ. ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ವಿರಾಟ್ ಕೊಹ್ಲಿ ಬಾಜಿಕೊಂಡರು.

Vinay Bhat | news18
Updated:August 15, 2019, 8:17 AM IST
IND vs WI: ಕೊಹ್ಲಿ ಖಾತೆಗೆ 43ನೇ ಶತಕ; ಟೀಂ ಇಂಡಿಯಾದಿಂದ ಸ್ವಾತಂತ್ರ್ಯಕ್ಕೆ ಸರಣಿ ಗೆಲುವಿನ ಸಿಹಿ
ಟೀಂ ಇಂಡಿಯಾ
Vinay Bhat | news18
Updated: August 15, 2019, 8:17 AM IST
ಬೆಂಗಳೂರು (ಆ. 15): ಕ್ವೀನ್ಸ್​ ಪಾರ್ಕ್​​ ಓವಲ್ ಮೈದಾನದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ ಶತಕ ಹಾಗೂ ಶ್ರೇಯಸ್ ಐಯರ್ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಮಳೆ ಬಾಧಿತ ಪಂದ್ಯದಲ್ಲಿ ಡಕ್ವರ್ತ್​ ಲುಯೀಸ್ ನಿಯಮದ ಅನ್ವಯ 6 ವಿಕೆಟ್​ಗಳಿಂದ ಗೆದ್ದು ಬೀಗಿದ್ದು ಸರಣಿ ವಶ ಪಡಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ವೆಸ್ಟ್​ ಇಂಡೀಸ್ ಸ್ಫೋಟಕ ಆರಂಭ ಪಡೆದುಕೊಂಡಿತು. ವಿದಾಯದ ಪಂದ್ಯವನ್ನಾಡಿದ ಕ್ರಿಸ್ ಗೇಲ್ ಕೇವಲ 41 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ 72 ರನ್ ಬಾರಿಸಿದರೆ, ಎವಿನ್ ಲೆವಿಸ್ 29 ಎಸೆತಗಳಲ್ಲಿ 43 ರನ್ ಗಳಿಸಿದರು. ಈ ಮೂಲಕ ಮೊದಲ ವಿಕೆಟ್​ಗೆ ಓಪನರ್​ಗಳು ಬರೋಬ್ಬರು 115 ರನ್​​ಗಳ ಜೊತೆಯಾಟ ಆಡಿದರು.

ಈ ಮಧ್ಯೆ ಮಳೆ ಸುರಿದ ಪರಿಣಾಮ ಓವರ್ ಖಡಿತಗೊಳಿಸಿ 35 ಓವರ್​​ಗೆ ಪಂದ್ಯವನ್ನು ನಿಗದಿ ಪಡಿಸಲಾಯಿತು. ವಿಂಡೀಸ್ ಆರಂಭದಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದ್ದು ಬಿಟ್ಟರೆ, ಬಳಿಕ ಬಂದ ಆಟಗಾರರು ಇದೇ ರನ್​ಗತಿಯಲ್ಲಿ ಬ್ಯಾಟ್ ಬೀಸಲು ವಿಫಲರಾದರು. ಪರಿಣಾಮ ವೆಸ್ಟ್​ ಇಂಡೀಸ್ ನಿಗದಿತ 35 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 240 ರನ್ ಕಲೆಹಾಕಿತು. ಭಾರತ ಪರ ಖಲೀಲ್ ಅಹ್ಮದ್ 3 ವಿಕೆಟ್ ಕಿತ್ತರೆ, ಶಮಿ 2, ಚಹಾಲ್ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು.

ಡಿಆರ್​ಎಸ್​​​ ನಿಯಮದ ಪ್ರಕಾರ ಭಾರತಕ್ಕೆ 35 ಓವರ್​ಗೆ 250 ರನ್​ಗಳ ಗುರಿ ನೀಡಲಾಯಿತು. ಈ ಗುರಿ ಬೆನ್ನಟ್ಟಿದ ಭಾರತ ಮತ್ತೆ ಕಳೆದ ಆರಂಭ ಪಡೆದುಕೊಂಡಿತು. ರೋಹಿತ್ ಶರ್ಮಾ 10 ರನ್ ಗಳಿಸಿ ರನೌಟ್​ಗೆ ಬಲಿಯಾದರು. 2ನೇ ವಿಕೆಟ್​ಗೆ ಧವನ್ ಜೊತೆಯಾದ ವಿರಾಟ್ ಕೊಹ್ಲಿ ಅರ್ಧಶತಕದ ಜೊತೆಯಾಟ ಆಡಿದರಷ್ಟೆ. ಧವನ್ 36 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಬಂದ ಬೆನ್ನಲ್ಲೆ ರಿಷಭ್ ಪಂತ್ ಶೂನ್ಯಕ್ಕೆ ನಿರ್ಗಮಿಸಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿತು.

ಆದರೆ, ಈ ಸಂದರ್ಭ ಭಾರತಕ್ಕೆ ಆಸರೆಯಾಗಿದ್ದು ನಾಯಕನ ಜೊತೆ ಯುವ ಭರವಸೆಯ ಆಟಗಾರ ಶ್ರೇಯಸ್ ಐಯರ್. ಎಲ್ಲೂ ವಿಕೆಟ್ ಕೈ ಚೆಲ್ಲದಂತೆ ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ ಅತ್ಯುತ್ತಮವಾಗಿ ಇನ್ನಿಂಗ್ಸ್​ ಕಟ್ಟಿದರು. 120 ರನ್​ಗಳ ಜೊತೆಯಾಟ ಆಡಿದ ಈ ಜೋಡಿ ಭಾರತದ ಗೆಲುವನ್ನ ಖಚಿತ ಪಡಿಸಿದರು. ಅಮೋಘ ಆಟ ಪ್ರದರ್ಶಿಸಿದ ಐಯರ್ ಕೇವಲ 41 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್​ನೊಂದಿಗೆ 65 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ ತಮ್ಮ ಶತಕದ ಖಾತೆಯನ್ನು 43ಕ್ಕೆ ಏರಿಸಿದರು.

 



ಕೊನೆಯಲ್ಲಿ ಕೇದರ್ ಜಾಧವ್(19) ಜೊತೆಗೂಡಿ ಕೊಹ್ಲಿ ವಿನ್ನಿಂಗ್ ಶಾಟ್ ಹೊಡೆಯುವ ಮೂಲಕ ಭಾರತ 32.3 ಓವರ್​​ನಲ್ಲೇ 4 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿ ಗೆಲುವು ಕಂಡಿತು. ಕೊಹ್ಲಿ 99 ಎಸೆತಗಳಲ್ಲಿ 14 ಬೌಂಡರಿಯೊಂದಿಗೆ ಅಜೇಯ 114 ರನ್ ಬಾರಿಸಿದರು.

6 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಭಾರತ 2-0 ಮುನ್ನಡೆಯಿಂದ ಏಕದಿನ ಸರಣಿಯನ್ನೂ ವಶ ಪಡಿಸಿಕೊಂಡಿದೆ. ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ವಿರಾಟ್ ಕೊಹ್ಲಿ ಬಾಜಿಕೊಂಡರು.
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...