ಕನ್ನಡದ ಬಿಗ್ಬಾಸ್ ಕಿಚ್ಚ ಸುದೀಪ್ ಹಾಗೂ ಹಿಂದಿ ಬಿಗ್ಬಾಸ್ ಸಲ್ಮಾನ್ ಖಾನ್, ‘ದಬಾಂಗ್-3’ ಚಿತ್ರದಲ್ಲಿ ನಟಿಸಿರುವುದು ಗೊತ್ತೇಯಿದೆ. ಡಿಸೆಂಬರ್ 20 ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ.
'
ದಬಾಂಗ್ 3'... ಹಲವು ವಿಶೇಷತೆಗಳಿಂದ ಕೂಡಿರುವ ಸಿನಿಮಾ. ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್, ಕನ್ನಡದ ಪೈಲ್ವಾನ್ ಕಿಚ್ಚ ಸುದೀಪ್ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಸಿನಿಮಾ. ಇಂಡಿಯನ್ ಮೈಕಲ್ ಜಾಕ್ಸನ್ ಡ್ಯಾನ್ಸ್ ಕಿಂಗ್ ಪ್ರಭುದೇವ ನಿರ್ದೇಶನದ ಆ್ಯಕ್ಷನ್ ಮಸಾಲಾ ಎಂಟರ್ಟೈನರ್.
ಸೂಪರ್ ಹಿಟ್ 'ದಬಾಂಗ್' ಸರಣಿಯ ಮೂರನೇ ಸಿನಿಮಾ ಇದಾಗಿದ್ದು, ಇದೇ ಮೊದಲ ಬಾರಿಗೆ ಕನ್ನಡದಲ್ಲೂ ಡಬ್ ಆಗಿ ರಿಲೀಸ್ ಆಗುತ್ತಿರುವ ಬಾಲಿವುಡ್ ಸಿನಿಮಾ. ಹೀಗೆ ಹಲವು ಕಾರಣಗಳಿಂದಾಗಿ ಮೊದಲಿಂದಲೂ ದಬಾಂಗ್ 3 ಬಗ್ಗೆ ಎಲ್ಲಿಲ್ಲದ ನಿರೀಕ್ಷೆಗಳಿವೆ.
ಕ್ರಿಕೆಟ್ ಪಾಠ ಹೇಳಿಕೊಟ್ಟ ಹೋಟೆಲ್ ಮಾಣಿಗಾಗಿ ಸಚಿನ್ ಹುಡುಕಾಟ: ಮಾಸ್ಟರ್ ಬ್ಲಾಸ್ಟರ್ ಆಸೆ ಈಡೇರಿಸಿದ ನ್ಯೂಸ್ 18
ಚಿತ್ರ ತಂಡ ಸಿನಿಮಾದ ಪ್ರಮೋಶನ್ ಅನ್ನು ಭರ್ಜರಿ ಆಗಿ ನಡೆಸುತ್ತಿದೆ. ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಅವರು ಸ್ಟಾರ್ ಸ್ಪೋರ್ಟ್ಸ್ನ ನೆರೋಲಾಕ್ ಕ್ರಿಕೆಟ್ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬ್ಯಾಟಿಂಗ್-ಬೌಲಿಂಗ್ ಮಾಡದೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕ್ರಿಕೆಟ್ನ ಕ್ರಾಂತಿಕಾರಿಗಳು
ಇರ್ಫಾನ್ ಪಠಾಣ್ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡು ಎಂಜಾಯ್ ಮಾಡಿದ ಸಲ್ಮಾನ್- ಸುದೀಪ್ ಅವರು ತಮ್ಮ ನೆಚ್ಚಿನ ಕ್ರಿಕೆಟಿಗನ ಹೆಸರನ್ನೂ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರ ಫೇವರಿಟ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯಂತೆ. "ನನಗೆ ಕೇದರ್ ಜಾಧವ್ ವೈಯಕ್ತಿಕವಾಗಿ ಗೊತ್ತು. ಆದರೆ, ನನ್ನ ನೆಚ್ಚಿನ ಕ್ರಿಕೆಟರ್ ಎಂಎಸ್ ಧೋನಿ. ಅವರೊಬ್ಬ ದಬಾಂಗ್ ಪ್ಲೇಯರ್" ಎಂದು ಸಲ್ಮಾನ್ ಹೇಳಿದ್ದಾರೆ.
ಇನ್ನು ಇದೇ ಪ್ರಶ್ನೆಯನ್ನು ಸುದೀಪ್ ಅವರಿಗೂ ಕೇಳಲಾಗಿದೆ. "ಆ ದಿನ ಯಾರು ಚೆನ್ನಾಗಿ ಆಟವಾಡುತ್ತಾರೊ ಅವರು ನನ್ನ ಫೇವರಿಟ್ ಆಟಗಾರ" ಎಂದು ಸುದೀಪ್ ಹೇಳಿದ್ದಾರೆ. ಮಾತು ಮುಂದುವರೆಸಿದ ಅವರು, "ನನ್ನ ಆಲ್ಟೈಪ್ ಫೇವರಿಟ್ ಎಂದರೆ ಅನಿಲ್ ಕುಂಬ್ಳೆ ಸರ್. ಜೊತೆಗೆ ರೋಹಿತ್ ಶರ್ಮಾ ಕೂಡ ನನಗಿಷ್ಟ" ಎಂದು ಸುದೀಪ್ ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ