IND vs WI: ಇಶಾಂತ್ ಮಾರಕ ಬೌಲಿಂಗ್ ದಾಳಿ; ಆಲೌಟ್ ಭೀತಿಯಲ್ಲಿ ವೆಸ್ಟ್​ ಇಂಡೀಸ್

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ವೆಸ್ಟ್​ ಇಂಡೀಸ್ ಸರಾಗವಾಗಿ ವಿಕೆಟ್ ಕಳೆದುಕೊಂಡೆ ಸಾಗಿತು. ಇಶಾಂತ್ ಶರ್ಮಾ ಮಾರಕ ದಾಳಿಗೆ ತತ್ತರಿಸಿದ ಕೆರಿಬಿಯನ್ ಬ್ಯಾಟ್ಸ್​ಮನ್​ಗಳು ಕ್ರೀಸ್ ಕಚ್ಚಿ ಆಡುವಲ್ಲಿ ವಿಫಲರಾದರು.

2018 ರಲ್ಲಿ ಯಾವುದೇ ತಂಡದಲ್ಲೂ ಕಾಣಿಸಿಕೊಳ್ಳದ ಇಶಾಂತ್ ಶರ್ಮಾರನ್ನು 2019 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. ಪ್ರಸ್ತುತ ಡೆಲ್ಲಿ ಪರ ಕಣಕ್ಕಿಳಿಯುತ್ತಿರುವ ಇಶಾಂತ್ ಐಪಿಎಲ್​ನಲ್ಲಿ 89 ಪಂದ್ಯಗಳನ್ನಾಡಿ 72 ವಿಕೆಟ್ ಪಡೆದಿದ್ದಾರೆ.

2018 ರಲ್ಲಿ ಯಾವುದೇ ತಂಡದಲ್ಲೂ ಕಾಣಿಸಿಕೊಳ್ಳದ ಇಶಾಂತ್ ಶರ್ಮಾರನ್ನು 2019 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. ಪ್ರಸ್ತುತ ಡೆಲ್ಲಿ ಪರ ಕಣಕ್ಕಿಳಿಯುತ್ತಿರುವ ಇಶಾಂತ್ ಐಪಿಎಲ್​ನಲ್ಲಿ 89 ಪಂದ್ಯಗಳನ್ನಾಡಿ 72 ವಿಕೆಟ್ ಪಡೆದಿದ್ದಾರೆ.

  • News18
  • Last Updated :
  • Share this:
ಬೆಂಗಳೂರು (ಆ. 24): ಆಂಟಿಗಾದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 297 ರನ್​ಗೆ ಆಲೌಟ್ ಆಗಿದೆ. ಬಳಿಕ ಬ್ಯಾಟಿಂಗ್ ಮಾಡಿದ ವೆಸ್ಟ್​ ಇಂಡೀಸ್ ಇಶಾಂತ್ ಶರ್ಮಾ ಬೌಲಿಂಗ್ ದಾಳಿಗೆ ತತ್ತರಿಸಿ ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 189 ರನ್ ಕಲೆಹಾಕಿದೆ.

ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 203 ರನ್ ಬಾರಿಸಿದ್ದ ಭಾರತ 2ನೇ ದಿನದ ಆರಂಭದಲ್ಲೇ ರಿಷಭ್ ಪಂತ್(24) ವಿಕೆಟ್ ಕಳೆದುಕೊಂಡಿತು. ಬಳಿಕ ಇಶಾಂತ್ ಶರ್ಮಾ ಹಾಗೂ ಜಡೇಜಾ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಜಡೇಜಾ ಅರ್ಧಶತಕ ಸಿಡಿಸಿ ಮಿಂಚಿದರೆ, ಇಶಾಂತ್ ಸ್ಟ್ಯಾಂಡಿಂಗ್ ನೀಡಿದರು.

60 ರನ್​ಗಳ ಕಾಣಿಕೆಯೊಂದಿಗೆ ಇಶಾಂತ್ 19 ರನ್​ಗೆ ನಿರ್ಗಮಿಸಿದರೆ, ಶಮಿ 0 ಸುತ್ತಿದರು. ಅಂತಿಮವಾಗಿ ಜಡೇಜಾ 112 ಎಸೆತಗಳಲ್ಲಿ 58 ರನ್ ಬಾರಿಸಿ ಔಟ್ ಆಗುವ ಮೂಲಕ ಭಾರತ ಮೊದಲ ಇನ್ನಿಂಗ್ಸ್​​ನಲ್ಲಿ 297 ರನ್​ಗೆ ಆಲೌಟ್ ಆಯಿತು. ವಿಂಡೀಸ್ ಪರ ಕೇಮರ್ ರೋಚ್ 4 ವಿಕೆಟ್ ಕಿತ್ತು ಮಿಂಚಿದರೆ, ಗಾಬ್ರಿಯಲ್ 3, ರಾಸ್ಟನ್ ಚೇಸ್ 2 ಹಾಗೂ ಹೋಲ್ಡರ್ 1 ವಿಕೆಟ್ ಪಡೆದರು.

ಒಂದು ಅಣು ಬಾಂಬ್​ನಿಂದ ಇಡೀ ಭಾರತವನ್ನು ಸ್ವಚ್ಛಗೊಳಿಸುತ್ತೇವೆ; ಪಾಕ್ ಕ್ರಿಕೆಟಿಗನ ಬೆದರಿಕೆ!

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ವೆಸ್ಟ್​ ಇಂಡೀಸ್ ಸರಾಗವಾಗಿ ವಿಕೆಟ್ ಕಳೆದುಕೊಂಡೆ ಸಾಗಿತು. ಇಶಾಂತ್ ಶರ್ಮಾ ಮಾರಕ ದಾಳಿಗೆ ತತ್ತರಿಸಿದ ಕೆರಿಬಿಯನ್ ಬ್ಯಾಟ್ಸ್​ಮನ್​ಗಳು ಕ್ರೀಸ್ ಕಚ್ಚಿ ಆಡುವಲ್ಲಿ ವಿಫಲರಾದರು. ರಾಸ್ಟನ್ ಚೇಸ್ 48, ಶಿಮ್ರೋನ್ ಹೆಟ್ಮೇರ್ 35 ಹಾಗೂ ಶಾಯ್ ಹೋಪ್ 24 ರನ್ ಬಾರಿಸಿ ಗರಿಷ್ಠ ಸ್ಕೋರ್ ಬಾರಿಸಿದವರಾಗಿದ್ದಾರೆ.

 



ವೆಸ್ಟ್​ ಇಂಡೀಸ್ ಇನ್ನೂ 108 ರನ್​ಗಳ ಹಿನ್ನಡೆಯಲ್ಲಿದ್ದು ಮೊದಲ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 189 ರನ್ ಬಾರಿಸಿದೆ. ನಾಯಕ ಜೇಸನ್ ಹೋಲ್ಡರ್ 10 ಹಾಗೂ ಮಿಗುಲ್ ಕಮಿನ್ಸ್​ ಖಾತೆ ತೆರೆಯದೆ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಶಾಂತ್ ಶರ್ಮಾ 5 ವಿಕೆಟ್ ಕಿತ್ತರೆ, ಬುಮ್ರಾ, ಶಮಿ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published: