ಬೆಂಗಳೂರು (ಆ. 30): ಟೀಂ ಇಂಡಿಯಾ ಜಮೈಕಾದಲ್ಲಿಂದು ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಉಭಯ ತಂಡಗಳಿಗೆ ಈ ಟೆಸ್ಟ್ ಮುಖ್ಯವಾಗಿದ್ದು, ಭಾರತ ಗೆದ್ದರೆ ಸರಣಿ ಕ್ಲೀನ್ ಸ್ವೀಪ್ ಮಾಡಲಿದೆ. ಈಗಾಗಲೇ ಏಕದಿನ, ಟಿ-20 ಸರಣಿಯನ್ನು ಕೊಹ್ಲಿ ಪಡೆ ವೈಟ್ವಾಶ್ ಮಾಡಿದೆ. ಹೀಗಿರುವಾಗ 2ನೇ ಟೆಸ್ಟ್ಗೆ ಯಾವ ಆಟಗಾರರನ್ನು ಕಣಕ್ಕಿಳಿಸ ಬೇಕು ಎಂಬುದು ಕೊಹ್ಲಿಗೆ ತಲೆನೋವಾಗಿ ಪರಿಣಮಿಸಿದೆ.
ರಿಷಭ್ ಪಂತ್ ವೈಫಲ್ಯ ಅನುಭವಿಸಿದರೆ ವೃದ್ದಿಮಾನ್ ಸಾಹರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇತ್ತ ಅಶ್ವಿನ್ರನ್ನು ಮೊದಲ ಟೆಸ್ಟ್ನಿಂದ ಹೊರಗಿಟ್ಟಿದ್ದಕ್ಕೆ ಕೊಹ್ಲಿ ಹಾಗೂ ಮ್ಯಾನೇಜ್ಮೆಂಟ್ ಮೇಲೆ ಅನೇಕರು ಬೊಟ್ಟು ಮಾಡಿ ತೋರಿಸಿದ್ದಾರೆ. ಇದರ ಮಧ್ಯೆ ವಿರಾಟ್ ಯಾವ ಆಟಗಾರರಿಗೆ ಕೊಕ್ ನೀಡಿ ಯಾರಿಗೆ ಸ್ಥಾನ ನೀಡುತ್ತಾರೆ ಎಂಬುದೆ ಕುತೂಹಲ.
ಮಾಹಿತಿಯ ಪ್ರಕಾರ ಸಾಹಾ ಹಾಗೂ ಅಶ್ವಿನ್ ಕಣಕ್ಕಿಳಿಯುವುದು ಪಕ್ಕ ಎಂದು ಹೇಳಲಾಗುತ್ತಿದೆ. ಅಶ್ವಿನ್ ಅವರು ಜಡೇಜಾ ಜೊತೆ ನೆಟ್ನಲ್ಲಿ ಭರ್ಜರಿ ಪ್ರ್ಯಾಕ್ಟೀಸ್ನಲ್ಲಿ ತೊಡಗಿದ್ದಾರೆ.
IND vs WI: ಇಂದಿನಿಂದ ಎರಡನೇ ಟೆಸ್ಟ್; ಸರಣಿ ಕ್ಲೀನ್ ಸ್ವೀಪ್ ಕನಸಿನಲ್ಲಿ ಟೀಂ ಇಂಡಿಯಾ!
ಜೊತೆಗೆ ಸಾಹ ಕೂಡ ಬ್ಯಾಟಿಂಗ್ -ವಿಕೆಟ್ ಕೀಪಿಂಗ್ ಅಭ್ಯಾಸದಲ್ಲಿ ಬೆವರು ಹರಿಸುತ್ತಿದ್ದಾರೆ.
ಯಾರ ಜಾಗದಲ್ಲಿ ಅಶ್ವಿನ್-ಸಾಹ ಸ್ಥಾನ ಪಡೆಯುತ್ತಾರೆ ಎಂಬುದನ್ನು ನೋಡುವುದಾದರೆ, ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಎಡವುತ್ತಿರುವ ರಿಷಭ್ ಪಂತ್ರನ್ನು ಕೈಬಿಟ್ಟು ಸಾಹ ಆಡಬಹುದು. ಇತ್ತ ಅಶ್ವಿನ್ ಮೊಹಮ್ಮದ್ ಶಮಿ ಬದಲು ಕಣಕ್ಕಿಳಿಯುವ ಅಂದಾಜಿದೆ.
ಒಟ್ಟಾರೆ ನಾಯಕನಾಗಿ
ಕೊಹ್ಲಿಗೂ ಈ ಪಂದ್ಯ ಪ್ರಮುಖವಾಗಿದ್ದು, ಭಾರತ ಬಲಿಷ್ಠ ತಂಡವನ್ನೆ ಆಡಿಸುವ ಅಂದಾಜಿನಲ್ಲಿದ್ದಾರೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.
2ನೇ ಟೆಸ್ಟ್ಗೆ ಭಾರತ ಸಂಭಾವ್ಯ ತಂಡ: ಮಯಾಂಕ್ ಅಗರ್ವಾಲ್, ಕೆ ಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ವೃದ್ದಿಮಾನ್ ಸಾಹ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ