ವಿಂಡೀಸ್ ವಿರುದ್ಧ 2ನೇ ಟಿ-20; ಭಾರತ ತಂಡದಲ್ಲಿ ಪ್ರಮುಖ 2 ಬದಲಾವಣೆಯ ನಿರೀಕ್ಷೆ

ನಿನ್ನೆ 4ನೇ ಕ್ರಮಾಂಕದಲ್ಲಿ ಆಡಿದ ರಿಷಭ್ ಪಂತ್ ಸೊನ್ನೆ ಸುತ್ತಿದ್ದರು. ಇವರ ಸ್ಥಾನದಲ್ಲಿ ಮನೀಶ್ ಪಾಂಡೆಯಲ್ಲಿ ಕಣಕ್ಕಿಳಿಸಿ ಪಂತ್ 5ನೇ ಸ್ಥಾನದಲ್ಲಿ ಆಡಿದರೆ ಉತ್ತಮ.

Vinay Bhat | news18
Updated:August 4, 2019, 4:09 PM IST
ವಿಂಡೀಸ್ ವಿರುದ್ಧ 2ನೇ ಟಿ-20; ಭಾರತ ತಂಡದಲ್ಲಿ ಪ್ರಮುಖ 2 ಬದಲಾವಣೆಯ ನಿರೀಕ್ಷೆ
ಟೀಂ ಇಂಡಿಯಾ
  • News18
  • Last Updated: August 4, 2019, 4:09 PM IST
  • Share this:
ಬೆಂಗಳೂರು (ಆ. 04): ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಈಗಾಗಲೇ ಭಾರತ 1-0 ಮುನ್ನಡೆ ಸಾಧಿಸಿದ್ದು, ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಮೊದಲ ಪಂದ್ಯದಲ್ಲಿ ಬ್ಯಾಟ್ಸ್​ಮನ್​ಗಳ ವೈಫಲ್ಯದ ಮಧ್ಯೆ ಕೊನೆಗೂ ಗೆಲುವು ಸಾಧಿಸಿದ ಭಾರತ ಇಂದಿನ ಪಂದ್ಯಕ್ಕೆ ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಅಂದಾಜಿದೆ.

ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ. 3ನೇ ಸ್ಥಾನ ವಿರಾಟ್ ಕೊಹ್ಲಿಗೆ. ನಿನ್ನೆ 4ನೇ ಕ್ರಮಾಂಕದಲ್ಲಿ ಆಡಿದ ರಿಷಭ್ ಪಂತ್ ಸೊನ್ನೆ ಸುತ್ತಿದ್ದರು. ಇವರ ಸ್ಥಾನದಲ್ಲಿ ಮನೀಶ್ ಪಾಂಡೆಯಲ್ಲಿ ಕಣಕ್ಕಿಳಿಸಿ ಪಂತ್ 5ನೇ ಸ್ಥಾನದಲ್ಲಿ ಆಡಿದರೆ ಉತ್ತಮ. ಫಿನಿಶರ್ ಆಗಿ ಗುರುತಿಸಿಕೊಂಡಿರುವ ಪಂತ್​ಗೆ 5ನೇ ಸ್ಥಾನ ಸೂಕ್ತ ಎಂಬ ಮಾತುಗಳಿವೆ.

ಇನ್ನು ಕ್ರುನಾಲ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರನ್ನು ಕೈಬಿಟ್ಟು ರಾಹುಲ್ ಚಹಾರ್​ಗೆ ಅವಕಾಶ ನೀಡುವ ಅಂದಾಜಿದೆ. ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ.

India vs West Indies: ಭಾರತ-ವಿಂಡೀಸ್ ಮಧ್ಯೆ ಇಂದು ಎರಡನೇ ಟಿ-20 ಪಂದ್ಯ

ಬೌಲಿಂಗ್​ನಲ್ಲೂ ಒಂದು ಬದಲಾವಣೆಯನ್ನು ನಿರೀಕ್ಷೆ ಮಾಡಲಾಗಿದೆ. ಖಲೀಲ್ ಅಹ್ಮದ್​ ಬದಲು ದೀಪಕ್ ಚಹಾರ್​ರನ್ನು ಆಡಿಸಿದರು ಅಚ್ಚರಿಯಿಲ್ಲ. ಇವರ ಜೊತೆಗೆ ಭುವನೇಶ್ವರ್ ಕುಮಾರ್ ಮತ್ತು ನವ್​​ದೀಪ್ ಸೈನಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಇನ್ನೊಂದು ಪಂದ್ಯ ಗೆದ್ದರೆ ಸರಣಿ ವಶ ಪಡಿಸಿಕೊಳ್ಳಲಿದೆ. ಇತ್ತ ಕೆರಿಬಿಯನ್ನರಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಆಗಿದ್ದು, ಗೆಲ್ಲ ಬೇಕಾದ ಒತ್ತಡದಲ್ಲಿದೆ. ಹೀಗಾಗಿ ಪ್ಲೋರಿಡಾದಲ್ಲಿ ಹೈವೋಲ್ಟೇಜ್ ಪಂದ್ಯವನ್ನು ನಿರೀಕ್ಷಿಸಲಾಗಿದೆ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ
First published:August 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading