India vs West Indies: ಸರಣಿ ವಶಕ್ಕೆ ಗೆಲುವೊಂದೆ ಮಂತ್ರ; ಏಕದಿನಕ್ಕೂ ಕಾಲಿಡಲಿದ್ದಾರ ಸೈನಿ..?

ಕೇದರ್ ಜಾಧವ್​​ಗೆ ಈ ಪಂದ್ಯ ಮುಖ್ಯವಾಗಿದೆ. ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳಬೇಕಾದರೆ ಜಾಧವ್ ಫಾರ್ಮ್​ಗೆ ಮರಳಬೇಕಿದೆ.

Vinay Bhat | news18
Updated:August 11, 2019, 10:32 AM IST
India vs West Indies: ಸರಣಿ ವಶಕ್ಕೆ ಗೆಲುವೊಂದೆ ಮಂತ್ರ; ಏಕದಿನಕ್ಕೂ ಕಾಲಿಡಲಿದ್ದಾರ ಸೈನಿ..?
ಟೀಂ ಇಂಡಿಯಾ
Vinay Bhat | news18
Updated: August 11, 2019, 10:32 AM IST
ಬೆಂಗಳೂರು (ಆ. 11): ಭಾರತ ಹಾಗೂ ವೆಸ್ಟ್​ ಇಂಡೀಸ್ ನಡುವೆ ಇಂದು ಟ್ರಿನಿಡಾದ ಕ್ವೀನ್ಸ್​ ಪಾರ್ಕ್​ ಓವಲ್ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಮೂರು ಪಂದ್ಯಗಳ ಸರಣಿ ಪೈಕಿ ಮೊದಲ ಪಂದ್ಯ ಮಳೆಯಿಂದ ಕೊಚ್ಚಿಹೋಗಿದ್ದು, ಸರಣಿ ಗೆಲ್ಲಬೇಕಾದರೆ ಉಭಯ ತಂಡಗಳಿಗೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಬೇಕಿದೆ.

ಟೀಂ ಇಂಡಿಯಾದಲ್ಲಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಆಟಗಾರರೇ ಇಂದೂ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ. ಶ್ರೇಯಸ್ ಐಯರ್ ನಾಲ್ಕನೇ ಸ್ಥಾನ ತುಂಬುವ ಭರವಸೆಯಲ್ಲಿದ್ದು, ಕೆ ಎಲ್ ರಾಹುಲ್ ಬೆಂಚ್ ಕಾಯಬೇಕಿದೆ. ಹಾಗೆಲ್ಲಾದರು ರೋಹಿತ್ ಶರ್ಮಾ ಅಥವಾ ಶಿಖರ್ ಧವನ್ ಪೈಕಿ ಯಾರಿಗಾದರು ವಿಶ್ರಾಂತಿ ನೀಡಿದರೆ, ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆಯಷ್ಟೆ.

ಮನೀಶ್ ಪಾಂಡೆ ಟಿ-20ಯಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಹೀಗಾಗಿ ಇವರು ಸ್ಥಾನ ಪಡೆಯುವುದು ಅನುಮಾನ. ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್ ಆಡುವ ಬಳಗದಲ್ಲಿರಲಿದ್ದು, ಕೇದರ್ ಜಾಧವ್​​ಗೆ ಈ ಪಂದ್ಯ ಮುಖ್ಯವಾಗಿದೆ. ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳಬೇಕಾದರೆ ಜಾಧವ್ ಫಾರ್ಮ್​ಗೆ ಮರಳಬೇಕಿದೆ. ಆಲ್ರೌಂಡರ್ ಜಡೇಜಾ 7ನೇ ಸ್ಥಾನದಲ್ಲಿ ಆಡಲಿದ್ದಾರೆ.

6 ಅಡಿ ಎತ್ತರ ಮತ್ತು 140 ಕೆ.ಜಿ. ತೂಕ: ಟೀಂ ಇಂಡಿಯಾ ವಿರುದ್ಧ ಕಣಕ್ಕೆ ಇಳಿಯಳಿದ್ದಾರೆ ದೈತ್ಯ ಕ್ರಿಕೆಟಿಗ

ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಿದರು ಅಚ್ಚರಿಯಿಲ್ಲ. ಖಲೀಲ್ ಅಹ್ಮದ್​ಗೆ ವಿಶ್ರಾಂತಿ ನೀಡಿ ನವ್​ದೀಪ್ ಸೈನಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಅಂದಾಜಿದೆ. ಉಳಿದಂತೆ ಕುಲ್ದೀಪ್ ಯಾದವ್, ಭುವಿ, ಮೊಹಮ್ಮದ್ ಶಮಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತ ವೆಸ್ಟ್​ ಇಂಡೀಸ್​ಗೆ ಕ್ರಿಸ್ ಗೇಲ್ ಫಾರ್ಮ್​ ಕಳೆದುಕೊಂಡಿರುವುದು ತಲೆನೋವಾಗಿ ಪರಿಣಮಿಸಿದೆ. ಕಳೆದ ಪಂದ್ಯದಲ್ಲಿ ಗೇಲ್ 31 ಎಸೆತಗಳಲ್ಲಿ ಕೇವಲ 4 ರನ್ ಕಲೆಹಾಕಿ ಕುಲ್ದೀಪ್ ಬೌಲಿಂಗ್​ನಲ್ಲಿ ಬೌಲ್ಡ್​ ಆಗಿದ್ದರು. ಅಭಿಮಾನಿಗಳು ಗೇಲ್​ರಿಂದ ಬಿರುಸಿನ ಆಟವನ್ನು ನಿರೀಕ್ಷೆ ಮಾಡುತ್ತಿದ್ದಾರೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ಸಂಭಾವ್ಯ ತಂಡ:

ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಐಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ನವ್​ದೀಪ್ ಸೈನಿ.

ವೆಸ್ಟ್​ ಇಂಡೀಸ್: ಕ್ರಿಸ್ ಗೇಲ್, ಎವಿನ್ ಲೆವಿಸ್, ಶಾಯ್ ಹೋಪ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ರಾಸ್ಟನ್ ಚೇಸ್, ಜೇಸನ್ ಹೋಲ್ಡರ್ (ನಾಯಕ), ಕಾರ್ಲಸ್ ಬ್ರಾಥ್​ವೈಟ್, ಫಾಬಿನ್ ಅಲೆನ್, ಶೆಲ್ಡನ್ ಕಟ್ರೆಲ್, ಕೇಮರ್ ರೋಚ್.

First published:August 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...