ಇಂದು ಭಾರತ vs ವೆಸ್ಟ್​​ ಇಂಡೀಸ್​ ಎರಡನೇ ಏಕದಿನ ಪಂದ್ಯ; ಟೀಂ ಇಂಡಿಯಾಗೆ ಮಾಡು ಇಲ್ಲವೆ ಮಡಿ ಆಟ

ಇಂದಿನ ಪಂದ್ಯಕ್ಕೆ ಹವಾಮಾನವೇ ಮುಳುವಾಗುವ ಸಾಧ್ಯತೆ ಇದೆ. ಪಂದ್ಯ ನಡೆಯುತ್ತಿರುವುದು ವಿಶಾಖಪಟ್ಟಣದಲ್ಲಿ. ಇಂದು ವಿಶಾಖಪಟ್ಟಣದಲ್ಲಿ ಹ್ಯುಮಿಡಿಟಿ ಅತಿಯಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

news18-kannada
Updated:December 18, 2019, 8:09 AM IST
ಇಂದು ಭಾರತ vs ವೆಸ್ಟ್​​ ಇಂಡೀಸ್​ ಎರಡನೇ ಏಕದಿನ ಪಂದ್ಯ; ಟೀಂ ಇಂಡಿಯಾಗೆ ಮಾಡು ಇಲ್ಲವೆ ಮಡಿ ಆಟ
ಭಾರತ vs ವೆಸ್ಟ್​ ಇಂಡೀಸ್
  • Share this:
ವೆಸ್ಟ್​​ ಇಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿತ್ತು. ವಿರಾಟ್​ ಕೊಹ್ಲಿ ಪಡೆ ನೀಡಿದ್ದ 288ರನ್​ಗಳ ಗುರಿಯನ್ನು ವೆಸ್ಟ್​​ ಇಂಡೀಸ್​  ಕೇವಲ ಎರಡು ವಿಕೆಟ್​ಗಳಲ್ಲಿ ಹೊಡೆದು ಮುಗಿಸಿತ್ತು. ಈಗ ಎರಡನೇ ಏಕದಿನ ಪಂದ್ಯದಲ್ಲಿ ಗೆಲ್ಲಲು ವಿರಾಟ್​ ಕೊಹ್ಲಿ ಪಡೆ ಎಲ್ಲಿಲ್ಲದ ತಯಾರಿ ನಡೆಸುತ್ತಿದೆ.

ಬೌಲರ್​ ಭುವನೇಶ್ವರ್​ ಕುಮಾರ್​ ಈ ಸರಣಿಗೆ ಅಲಭ್ಯವಾಗಿದ್ದಾರೆ. ಹೀಗಾಗಿ, ಬೌಲರ್​ಗಳ ಅಗತ್ಯತೆ ಟೀಂ ಇಂಡಿಯಾಗೆ ಅತ್ಯಧಿಕವಾಗಿದ್ದು, ಶಿವಮ್​ ಡುಬೆ ಇಂದು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಅವರು ಫೀಲ್ಡ್​​ಗೆ ಇಳಿದರೆ ಬೌಲಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ಭಾರತಕ್ಕೆ ಬಲ ಸಿಗಲಿದೆ.

ಟೀಂ ಇಂಡಿಯಾ ಏಕದಿನ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನದಲ್ಲಿದೆ. ವೆಸ್ಟ್​ ಇಂಡೀಸ್​ ಇರುವುದು ಏಳನೇ ಸ್ಥಾನದಲ್ಲಿ. ಆದಾಗ್ಯೂ, ತನ್ನದೇ ನಾಡಿನಲ್ಲಿ ವಿರಾಟ್​ ಕೊಹ್ಲಿಗೆ ಸರಣಿ ಸೋಲುವ ಭಯ ಎದುರಾಗಿದೆ. ಒಂದೊಮ್ಮೆ ಇಂದಿನ ಪಂದ್ಯ ಸೋತರೆ ಭಾರತಕ್ಕೆ ಸರಣಿ ಕೈ ತಪ್ಪಲಿದೆ. ಹೀಗಾಗಿ ಕೊಹ್ಲಿ ಪಡೆಗೆ ಇಂದಿನದ್ದು ಮಾಡು ಇಲ್ಲವೆ ಮಡಿ ಪಂದ್ಯ.

ಇದನ್ನೂ ಓದಿ: ಕ್ರಿಕೆಟ್​ನಲ್ಲಿ ಈರೀತಿ ಎಂದೂ ನೋಡಿರಲಿಲ್ಲ; ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಕೆಂಡಾಮಂಡಲ ಆಗಿದ್ದೇಕೆ?

ಟೀಂ ಇಂಡಿಯಾದ ಆರಂಭಿಕರಾದ ಕೆ.ಎಲ್​.ರಾಹುಲ್​ ಹಾಗೂ ರೋಹಿತ್​ ಶರ್ಮ ಎಚ್ಚರಿಕೆಯ ಆಟವಾಡುವ ಅಗತ್ಯತೆ ಇದೆ. ಇಲ್ಲವಾದಲ್ಲಿ ಕೊಹ್ಲಿ ಪಡೆಗೆ ಸಂಕಷ್ಟ ಎದುರಾಗಬಹುದು. ವಿಶಾಖಪಟ್ಟಣಂ ಬ್ಯಾಟಿಂಗ್​ ಪಿಚ್​ ಆಗಿದ್ದು, ಮೊದಲು ಬ್ಯಾಟ್​ ಬೀಸಿದವರು ದೊಡ್ಡ ಮೊತ್ತದ ರನ್​ ಕಲೆ ಹಾಕಬಹುದು.

ಇಂದಿನ ಪಂದ್ಯಕ್ಕೆ ಹವಾಮಾನವೇ ಮುಳುವಾಗುವ ಸಾಧ್ಯತೆ ಇದೆ. ಪಂದ್ಯ ನಡೆಯುತ್ತಿರುವುದು ವಿಶಾಖಪಟ್ಟಣದಲ್ಲಿ. ಇಂದು ವಿಶಾಖಪಟ್ಟಣದಲ್ಲಿ ಹ್ಯುಮಿಡಿಟಿ ಅತಿಯಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಎರಡೂ ತಂಡದವರಿಗೆ ಜಾಸ್ತಿ ಹೊತ್ತು ಕ್ರೀಜ್​ನಲ್ಲಿ ನಿಲ್ಲುವುದು ಕಷ್ಟವಾಗಬಹುದು.

ಭಾರತ ಆಡುವ ಸಂಭಾವ್ಯ XI ಪಟ್ಟಿ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಕೆ ಎಲ್ ರಾಹುಲ್, ಶ್ರೇಯಸ್‌ ಐಯ್ಯರ್‌, ಕೇದರ್‌ ಜಾಧವ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಶಿವಂ ದುಬೆ, ಶಾರ್ದೂಲ್​ ಠಾಕೂರ್​, ದೀಪಕ್‌ ಚಹರ್‌, ಮೊಹಮ್ಮದ್‌ ಶಮಿ.ಸ್ಥಳ: ವಿಶಾಖಪಟ್ಟಣಂ

ಪಂದ್ಯ ಆರಂಭ: ಮಧ್ಯಾಹ್ನ 1:30ಕ್ಕೆ ಟಾಸ್ ಪ್ರಕ್ರಿಯೆ. 2 ಗಂಟೆಗೆ ಪಂದ್ಯ ಆರಂಭ.

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್​​​ 1 ಹಾಗೂ ಸ್ಟಾರ್ ಸ್ಪೋರ್ಟ್ಸ್​​​ 1 HD

 
First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ