IND vs WI: ವಿಂಡೀಸ್​ಗೆ ಬೃಹತ್ ಮೊತ್ತದ ಟಾರ್ಗೆಟ್ ನೀಡಿದ ಭಾರತ!

ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ವಿಂಡೀಸ್ 45 ರನ್ ಕಲೆಹಾಕಿದೆ. ಡ್ಯಾರೆನ್ ಬ್ರಾವೋ 18 ಹಾಗೂ ಶಮರ್ ಬ್ರೂಕ್ಸ್​ 4 ರನ್ ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಅಜಿಂಕ್ಯ ರಹಾನೆ ಹಾಗೂ ಹನುಮಾ ವಿಹಾರಿ

ಅಜಿಂಕ್ಯ ರಹಾನೆ ಹಾಗೂ ಹನುಮಾ ವಿಹಾರಿ

  • Share this:
ಬೆಂಗಳೂರು (ಸೆ. 02): ಜಮೈಕಾದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಭಾರತ ಗೆಲುವಿನತ್ತ ದಾಪುಗಾಲಿಡುತ್ತಿದೆ. ಗೆಲ್ಲಲು 468 ರನ್​ಗಳ ಟಾರ್ಗೆಟ್ ಬೆನ್ನಟ್ಟಿರುವ ಕೆರಿಬಿಯನ್ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 45 ರನ್ ಕಲೆಹಾಕಿದೆ. ವಿಂಡೀಸ್ ಗೆಲುವಿಗೆ ಇನ್ನೂ 423 ರನ್​ಗಳ ಅವಶ್ಯಕತೆಯಿದೆ.

ಭಾರತವನ್ನು 416 ರನ್​ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ್ದ ವೆಸ್ಟ್​ ಇಂಡೀಸ್ 2ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿತ್ತು. 3ನೇ ದಿನದ ಆರಂಭದಲ್ಲೇ ಉಳಿದ ವಿಕೆಟ್ ಕಳೆದುಕೊಂಡು 117 ರನ್​ಗೆ ಆಲೌಟ್ ಆಯಿತು. ಭಾರತ ಪರ ಬುಮ್ರಾ 6 ವಿಕೆಟ್ ಕಿತ್ತರೆ, ಶಮಿ 2 ಹಾಗೂ ಇಶಾಂತ್ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದರು.

ಈ ಸಂದರ್ಭ ವಿಂಡೀಸ್​ಗೆ ಫಾಲೋಆನ್ ಹೇರದೆ 299 ರನ್​ಗಳ ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ, ಉಪನಾಯಕ ಅಜಿಂಕ್ಯ ರಹಾನೆ (64*) ಹಾಗೂ ಹನುಮಾ ವಿಹಾರಿ (53*) ಅಜೇಯ ಅರ್ಧಶತಕಗಳ ನೆರವಿನಿಂದ 54.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 168 ರನ್‌ ಪೇರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ವಿಂಡೀಸ್‌ಗೆ 468 ರನ್‌ಗಳ ಬೃಹತ್ ಗೆಲುವಿನ ಗುರಿಯನ್ನು ಒಡ್ಡಿತು.

ಕೊನೆಯ 6 ಇನ್ನಿಂಗ್ಸ್​​ನಲ್ಲಿ ಶಮಿ ಗಳಿಸಿದ ರನ್ ಕೇಳಿದರೆ ಶಾಕ್ ಆಗೋದು ಗ್ಯಾರೆಂಟಿ!

ಆದರೆ, ಈ ಗುರಿ ಬೆನ್ನಟ್ಟುವಲ್ಲಿ ವಿಂಡೀಸ್ ಬ್ಯಾಟ್ಸ್​ಮನ್​ಗಳು ಮತ್ತೆ ಎಡವಿದ್ದಾರೆ. ಆರಂಭದಲ್ಲೇ ಜಾನ್ ಕಾಂಪ್​ಬೆಲ್​​(16) ಹಾಗೂ ಕ್ರೈಗ್​​ ಬ್ರಾಥ್​ವೈಟ್(3) ವಿಕೆಟ್ ಕಳೆದುಕೊಂಡಿದೆ. ಒಟ್ಟಾರೆ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ವಿಂಡೀಸ್ 45 ರನ್ ಕಲೆಹಾಕಿದೆ. ಡ್ಯಾರೆನ್ ಬ್ರಾವೋ 18 ಹಾಗೂ ಶಮರ್ ಬ್ರೂಕ್ಸ್​ 4 ರನ್ ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ ಪರ ಇಶಾಂತ್ ಶರ್ಮಾ ಹಾಗೂ ಶಮಿ ತಲಾ 1 ವಿಕೆಟ್ ಪಡೆದಿದ್ದಾರೆ. ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು, ವಿಂಡೀಸ್​ಗೆ ಗೆಲ್ಲಲು 423 ರನ್​ಗಳು ಬೇಕಾಗಿದೆ. ಭಾರತ ಗೆಲುವಿಗೆ 8 ವಿಕೆಟ್​ಗಳ ಅವಶ್ಯಕತೆಯಿದೆ.

ಕಮಿಲ್ ದೇವ್ ದಾಖಲೆ ಪುಡಿಪುಡಿ:

ಏಷ್ಯಾದ ಹೊರಗಡೆ 155 ವಿಕೆಟ್ ಕಬಳಿಸಿ ಅತಿ ಹೆಚ್ಚು ವಿಕೆಟ್ ಕಿತ್ತ ಕೀರ್ತಿ ವೇಗಿ ಕಪಿಲ್ ದೇವ್ ಹೆಸರಿನಲ್ಲಿತ್ತು. ಆದರೆ ಪಂದ್ಯದ ಮೂರನೇ ದಿನದಂದು ವಿಂಡೀಸ್ ಬ್ಯಾಟ್ಸ್​ಮನ್ ಜಹ್ಮರ್ ಹ್ಯಾಮಿಲ್ಟನ್ ಅವರನ್ನು ಔಟ್ ಮಾಡುವ ಮೂಲಕ ಇಶಾಂತ್ ಶರ್ಮಾ 156 ವಿಕೆಟ್​ ಕಬಳಿಸಿದರು. ಈ ಮೂಲಕ ಕಪಿಲ್ ದೇವ್ ಹೆಸರಲ್ಲಿದ್ದ ದಾಖಲೆಯನ್ನು ಶರ್ಮಾ ಪುಡಿ ಮಾಡಿದ್ದಾರೆ.

First published: