IND vs WI: ರೋಹಿತ್ ವಿಶ್ವ ದಾಖಲೆ, ಶಮಿ ವಿಶೇಷ ದಾಖಲೆ; 300+ ಚೇಸಿಂಗ್​ನಲ್ಲಿ ಭಾರತವೇ ನಂ. 1

4 ವಿಕೆಟ್​ಗಳ ಜಯದೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ರೋಹಿತ್ ಶರ್ಮಾ ಸರಣಿಶ್ರೇಷ್ಠ ತಮ್ಮದಾಗಿಸಿದರು.

Vinay Bhat | news18-kannada
Updated:December 23, 2019, 7:27 AM IST
IND vs WI: ರೋಹಿತ್ ವಿಶ್ವ ದಾಖಲೆ, ಶಮಿ ವಿಶೇಷ ದಾಖಲೆ; 300+ ಚೇಸಿಂಗ್​ನಲ್ಲಿ ಭಾರತವೇ ನಂ. 1
ಟೀಂ ಇಂಡಿಯಾ
  • Share this:
ಬೆಂಗಳೂರು (ಡಿ. 23): ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ಅಂತರದಿಂದ ವಶಪಡಿಸಿಕೊಂಡಿದೆ. ನಿನ್ನೆ ಕಟಕ್​ನಲ್ಲಿ ನಡೆದ ಫೈನಲ್ ಫೈಟ್​ನಲ್ಲಿ ಕೊಹ್ಲಿ ಪಡೆ ರೋಚಕ ಜಯ ಸಾಧಿಸಿ ವಿಶೇಷ ಸಾಧನೆ ಮಾಡಿದೆ. ಟೀಂ ಇಂಡಿಯಾ ವಿಂಡೀಸ್ ವಿರುದ್ಧ  ಸತತ 10ನೇ ಸರಣಿ ಗೆಲುವಿನ ಮೂಲಕ ದಾಖಲೆ ಬರೆದಿದೆ. ಈ ಮೂಲಕ ಭಾರತ ತಂಡ 2019ನೇ ಸಾಲಿಗೆ ಗೆಲುವಿನ ವಿದಾಯ ಹೇಳಿದೆ.

ಇನ್ನು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ 22 ವರ್ಷ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್‌ ವರ್ಷವೊಂದರಲ್ಲಿ ಎಲ್ಲಾ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆರಂಭಿಕ ಬ್ಯಾಟ್ಸ್‌ಮನ್‌ಗಳ ದಾಖಲೆ ಪಟ್ಟಿಯಲ್ಲಿ ಜಯಸೂರ್ಯ ಅವರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಶ್ರೀಲಂಕಾದ ಬ್ಯಾಟಿಂಗ್‌ ದಂತಕತೆ ಸನತ್‌ ಜಯಸೂರ್ಯ ಅವರ ದಾಖಲೆಯನ್ನು ನುಚ್ಚು ನೂರು ಮಾಡಿದ್ದಾರೆ.

 IND vs WI: ಓಪನರ್​ಗಳ ಅಬ್ಬರ; ಕೊಹ್ಲಿ-ಜಡ್ಡು ಜೊತೆಯಾಟ; ಭಾರತಕ್ಕೆ ರೋಚಕ ಜಯದೊಂದಿಗೆ ಸರಣಿ ಕೈವಶ

ನಿನ್ನೆಯ ಪಂದ್ಯದಲ್ಲಿ 9ನೇ ರನ್‌ ಗಳಿಸುವ ಮೂಲಕ ಈ ವರ್ಷ ಎಲ್ಲಾ ಮಾದರಿಯಲ್ಲಿ ಗಳಿಸಿದ ಒಟ್ಟು ರನ್‌ಗಳ ಸಂಖ್ಯೆಯನ್ನು ರೋಹಿತ್‌ 2,388ಕ್ಕೆ ಕೊಂಡೊಯ್ದರು. ಅಂತಿಮವಾಗಿ 63 ರನ್‌ ಗಳಿಸಿ ಔಟ್‌ ಆಗುವ ಮೂಲಕ ರನ್‌ ಗಳಿಕೆಯನ್ನು 2,442ಕ್ಕೆ ವಿಸ್ತರಿಸಿದರು. ಸನತ್‌ ಜಯಸೂರ್ಯ 1997ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 2,387 ರನ್‌ಗಳನ್ನು ಬಾರಿಸಿದ್ದರು.

ಇನ್ನು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ 2019ರ ಸಾಲಿನ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 42 ವಿಕೆಟ್‌ಗಳನ್ನು ಪಡೆದು ವರ್ಷವೊಂದರಲ್ಲಿ ಅತಿ ಹೆಚ್ಚು ಒಡಿಐ ವಿಕೆಟ್‌ ಪಡೆದ ವೇಗದ ಬೌಲರ್‌ ಎಂದೆನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವೃತ್ತಿ ಬದುಕಿನಲ್ಲಿ ಎರಡು ಬಾರಿ ಈ ದಾಖಲೆ ಬರೆದ ಭಾರತದ ಮೊತ್ತ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

300+ ಚೇಸಿಂಗ್​ನಲ್ಲಿ ಭಾರತವೇ ನಂ. 1:‘

ಟೀಂ ಇಂಡಿಯಾ 300ಕ್ಕೂ ಅಧಿಕ ರನ್ ಚೇಸ್ ಮಾಡಿ ಗೆಲುವು ದಾಖಲಿಸಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ. ಟೀಂ ಇಂಡಿಯಾ ಏಕದಿನದಲ್ಲಿ ಒಟ್ಟು 17 ಬಾರಿ 300ಕ್ಕೂ ಅಧಿಕ ರನ್ ಚೇಸ್ ಮಾಡಿ ಗೆಲುವು ದಾಖಲಿಸಿ ಮೊದಲ ಸ್ಥಾನದಲ್ಲಿದೆ.

ದ್ವಿತೀಯ ಸ್ಥಾನದಲ್ಲಿರುವ ಇಂಗ್ಲೆಂಡ್ 11 ಗೆಲುವು ದಾಖಲಿಸಿದೆ. ಮೂರನೇ ಸ್ಥಾನವನ್ನು ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಹಂಚಿಕೊಂಡಿದೆ.

ಅಂತಿಮ ಕದನಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್​ ಇಂಡೀಸ್ 50 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 315 ರನ್ ಬಾರಿಸಿತು. ನಿಕೋಲಸ್ ಪೂರನ್ 89 ಹಾಗೂ ನಾಯಕ ಕೀರೊನ್ ಪೊಲಾರ್ಡ್​ ಅಜೇಯ 74 ಚಚ್ಚಿದರು.

PAK vs SL: ದಶಕಗಳ ಬಳಿಕ ಟೆಸ್ಟ್​​ ಗೆಲುವಿನತ್ತ ಪಾಕಿಸ್ತಾನ; ಅಂತಿಮ ದಿನದತ್ತ ಎಲ್ಲರ ಚಿತ್ತ

316 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ 48.4 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 316 ರನ್ ಗಳಿಸಿ 4 ವಿಕೆಟ್​ಗಳ ಜಯ ಸಾಧಿಸಿತು. ನಾಯಕ ವಿರಾಟ್ ಕೊಹ್ಲಿ 85 ರನ್ ಸಿಡಿಸಿದರೆ, ಕೆ ಎಲ್ ರಾಹುಲ್ 77, ರೋಹಿತ್ ಶರ್ಮಾ 63 ಹಾಗೂ ರವೀಂದ್ರ ಜಡೇಜಾ ಅಜೇಯ 39 ರನ್ ಬಾರಿಸಿ ಗೆಲುವಿನ ರೂವಾರಿಯಾದರು.

 4 ವಿಕೆಟ್​ಗಳ ಜಯದೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ರೋಹಿತ್ ಶರ್ಮಾ ಸರಣಿಶ್ರೇಷ್ಠ ತಮ್ಮದಾಗಿಸಿದರು.

Published by: Vinay Bhat
First published: December 23, 2019, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading