India vs West Indies: ಇಂದು ಕೊಹ್ಲಿ ಪಡೆಗೆ ಕೆರಿಬಿಯನ್ನರ ಸವಾಲು; ಮುಂದುವರಿಯುತ್ತಾ ಟೀಂ ಇಂಡಿಯಾ ಪಾರುಪತ್ಯ?

ಹೀಗಾಗಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ವಿಜಯ್ ಶಂಕರ್ ಬದಲಿಗೆ, ರಿಷಭ್ ಪಂತ್ ಕಣಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ.

zahir | news18
Updated:June 27, 2019, 11:34 AM IST
India vs West Indies: ಇಂದು ಕೊಹ್ಲಿ ಪಡೆಗೆ ಕೆರಿಬಿಯನ್ನರ ಸವಾಲು; ಮುಂದುವರಿಯುತ್ತಾ ಟೀಂ ಇಂಡಿಯಾ ಪಾರುಪತ್ಯ?
Ind vs Wi
  • News18
  • Last Updated: June 27, 2019, 11:34 AM IST
  • Share this:
ಮ್ಯಾಂಚೆಸ್ಟರ್‌: ಐಸಿಸಿ ವಿಶ್ವಕಪ್​ನ 34ನೇ ಪಂದ್ಯದಲ್ಲಿ ಟೀಂ ಇಂಡಿಯಾ  ವೆಸ್ಟ್​ ಇಂಡೀಸ್ ತಂಡವನ್ನು ಎದುರಿಸಲಿದೆ. ದಿ ಓಲ್ಡ್‌ ಟ್ರಾಫರ್ಡ್‌ ಅಂಗಳದಲ್ಲಿ ಇಂದು ನಡೆಯುವ ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ನಾಲ್ಕನೇ ಘಟಕ್ಕೆ ಪ್ರವೇಶಿಸುವ ತುಡಿತದಲ್ಲಿದೆ.

ಆಡಿರುವ 4 ಪಂದ್ಯಗಳಲ್ಲಿ ಗೆದ್ದಿರುವ ಟೀಂ ಇಂಡಿಯಾ ವಿಂಡೀಸ್ ವಿರುದ್ಧ ಕೂಡ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದು, ಈ ಮೂಲಕ ಸೆಮಿ ಫೈನಲ್​ ಹಾದಿಯನ್ನು ಸುಗಮಗೊಳಿಸುವ ಇರಾದೆಯಲ್ಲಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿರುವ ಕೊಹ್ಲಿ ಪಡೆ 9 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಇನ್ನು ವಿಂಡೀಸ್ ಪಡೆ 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಟೀಂ ಇಂಡಿಯಾ ಉತ್ತಮ ಫಾರ್ಮ್​ನಲ್ಲಿದ್ದು, ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತೀಯ ಬೌಲರುಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ನಾಯಕನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ಇನ್ನು ಗಾಯಾಳು ಭುವಿ ಸ್ಥಾನದಲ್ಲಿ ಅವಕಾಶ ಪಡೆದ ಮೊಹಮ್ಮದ್ ಶಮಿ ಹ್ಯಾಟ್ರಿಕ್ ಮೂಲಕ ಮಿಂಚಿದ್ದು ತಂಡಕ್ಕೆ ಪ್ಲಸ್​ ಆದರೆ, ಶಿಖರ್ ಧವನ್ ಅವರ ಆರಂಭಿಕ ಸ್ಥಾನವನ್ನು ಕನ್ನಡಿಗೆ ಕೆ.ಎಲ್ ರಾಹುಲ್ ಉತ್ತಮ ಆಟದೊಂದಿಗೆ ತುಂಬಿದ್ದಾರೆ.

ಜಸ್​ಪ್ರೀತ್ ಬುಮ್ರಾ ತನ್ನ ಯಾರ್ಕರ್​ಗಳಿಂದ ಗಮನ ಸೆಳೆಯುತ್ತಿದ್ದರೆ, ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ ಹಾಗೂ ನಾಯಕ ಕೊಹ್ಲಿ ಭರ್ಜರಿಯಾಗಿ ಇನಿಂಗ್ಸ್​ ಕಟ್ಟುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮಿಂಚಿನ ಸಂಚಲನ ಸೃಷ್ಟಿಸುತ್ತಿದ್ದಾರೆ. ಬ್ಯಾಟಿಂಗ್​ ಲೈನ್​ನಲ್ಲಿ ಆಟಗಾರರಿಂದ ಸ್ಥಿರ ಪ್ರದರ್ಶನ ಮೂಡಿಬರುತ್ತಿದ್ದರೂ ನಾಲ್ಕನೇ ಕ್ರಮಾಂಕದ ಚಿಂತೆ ಟೀಂ ಇಂಡಿಯಾ ನಾಯಕನಿಗಿದೆ.

ಹೀಗಾಗಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ವಿಜಯ್ ಶಂಕರ್ ಬದಲಿಗೆ, ರಿಷಭ್ ಪಂತ್ ಕಣಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಬಲಿಷ್ಠ ಬ್ಯಾಟ್ಸ್​ಮನ್​ಗಳನ್ನು ಹೊಂದಿರುವ ಕೆರಿಬಿಯನ್ನರನ್ನು ಕಟ್ಟಿ ಹಾಕಲು ಸ್ಪಿನ್‌ ವಿಭಾಗದಲ್ಲಿ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಾಹಲ್‌ ತಂಡದ ಪ್ರಮುಖ ಅಸ್ತ್ರಗಳಾಗಿ ಬಳಕೆಯಲ್ಲಿದ್ದಾರೆ.

ಅತ್ತ ಕಡೆ ಸತತ ಸೋಲಿಂದ ಕಂಗೆಟ್ಟಿರುವ ಜೇಸನ್‌ ಹೋಲ್ಡರ್ ಪಡೆಗೆ ಗಾಯದ ಸಮಸ್ಯೆ ತಲೆನೋವಾಗಿದೆ. ಈಗಾಗಲೇ ತಂಡದ ಪ್ರಮುಖ ಆಲ್​ರೌಂಡರ್ ಆ್ಯಂಡ್ರೊ ರಸೆಲ್ ಟೂರ್ನಿಯಿಂದ ಹೊರ ಬಿದ್ದಿರುವುದು ವಿಂಡೀಸ್ ತಂಡಕ್ಕೆ ಭಾರೀ ಹೊಡೆತ ನೀಡಿದೆ. ಇನ್ನು ಆರಂಭಿಕ ಕ್ರಿಸ್ ಗೇಲ್ ರಿಂದ ನಿರೀಕ್ಷಿತ ಆಟ ಪ್ರದರ್ಶನವಾಗದಿರುವುದು ಕೂಡ ಚಿಂತೆಗೆ ಕಾರಣವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ​ ಶಿಮ್ರಾನ್‌ ಹೆಟ್ಮೇರ್‌ ಮತ್ತು ಕಾರ್ಲೋಸ್‌ ಬ್ರಾಥ್‌ವೇಟ್‌ ಮಿಂಚಿದರೂ ಗೆಲುವು ತಂದುಕೊಡುವಲ್ಲಿ ಎಡವುತ್ತಿದ್ದಾರೆ.

ಹಾಗೆಯೇ ಲಯ ಕಳೆದುಕೊಂಡಿರುವ ವಿಂಡೀಸ್ ವೇಗಿಗಳು ಭಾರತದ ವಿರುದ್ಧವಾದರೂ ಫಾರ್ಮ್​ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಆರು ಪಂದ್ಯಗಳಿಂದ ಮೂರು ಅಂಕಗಳಿಸಿರುವ ವೆಸ್ಟ್​ ಇಂಡೀಸ್ ಉಳಿದ ಮೂರು ಪಂದ್ಯಗಳಲ್ಲಿ ಗೆದ್ದರೂ ಸೆಮಿಫೈನಲ್‌ ಹಾದಿ ಅನುಮಾನವಾಗಿದೆ. ಹೀಗಾಗಿ ಪ್ರಬಲ ಪೈಪೋಟಿ ನೀಡುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲೆರುವ ಪ್ರಯತ್ನವನ್ನು ವಿಂಡೀಸ್ ಆಟಗಾರರು ಮಾಡಲಿದ್ದಾರೆ.ಉಭಯ ತಂಡಗಳು ಇಂತಿವೆ:
ಭಾರತ:
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ(ಉಪನಾಯಕ), ಮಹೇಂದ್ರ ಸಿಂಗ್‌ ಧೋನಿ , ರಿಷಬ್‌ ಪಂತ್‌, ಕೆ.ಎಲ್ ರಾಹುಲ್‌, ದಿನೇಶ್‌ ಕಾರ್ತಿಕ್, ಭುವನೇಶ್ವರ್‌ ಕುಮಾರ್‌, ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲ್ದೀಪ್‌ ಯಾದವ್‌, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್, ರವೀಂದ್ರಾ ಜಡೇಜಾ.

ವೆಸ್ಟ್‌ ಇಂಡೀಸ್‌:
ಜೇಸನ್‌ ಹೋಲ್ಡರ್ ‌(ನಾಯಕ), ಫ್ಯಾಬಿಯನ್‌ ಅಲ್ಲೆನ್‌, ಡೆರೆನ್‌ ಬ್ರಾವೊ, ಶನ್ನೋನ್‌ ಗ್ಯಾಬ್ರಿಯಲ್‌, ಶಿಮ್ರಾನ್‌ ಹೆಟ್ಮೇರ್‌, ಎವಿನ್‌ ಲೆವಿಸ್‌, ನಿಕೋಲಸ್‌ ಪೂರನ್‌, ಸುನೀಲ್‌ ಅಂಬ್ರೀಸ್‌, ಕಾರ್ಲೋಸ್‌ ಬ್ರಾಥ್‌ವೇಟ್‌, ಶೆಲ್ಡನ್‌ ಕಾಟ್ರೆಲ್‌, ಕ್ರಿಸ್‌ ಗೇಲ್‌, ಶಾಯ್‌ ಹೋಪ್‌, ಆಯಶ್ಲೆ ನರ್ಸ್‌, ಕೇಮರ್‌ ರೋಚ್, ಓಶೇನ್‌ ಥಾಮಸ್‌

ಸಮಯ: ಇಂದು ಮಧ್ಯಾಹ್ನ 03:00
ಸ್ಥಳ: ಓಲ್ಡ್‌ ಟ್ರಾಫರ್ಡ್‌, ಮ್ಯಾಂಚೆಸ್ಟರ್‌
First published:June 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ