ಬೆಂಗಳೂರು (ಸೆ. 1): ಜಮೈಕಾದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಹನುಮಾ ವಿಹಾರಿ ಅಮೋಘ ಚೊಚ್ಚಲ ಶತಕದಿಂದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 416 ರನ್ ಕಲೆಹಾಕಿತು. ವಿಂಡೀಸ್ ಬ್ಯಾಟ್ಸ್ಮನ್ಗಳು ಬುಮ್ರಾ ಹ್ಯಾಟ್ರಿಕ್ ಮ್ಯಾಜಿಕ್ಗೆ ತಲೆಬಾಗಿ ಕೇವಲ 87 ರನ್ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 264 ರನ್ ಪೇರಿಸಿತ್ತು. ಹನುಮಾ ವಿಹಾರಿ 42 ಹಾಗೂ ರಿಷಭ್ ಪಂತ್ 27 ರನ್ ಕಲೆಹಾಕಿ ಕ್ರೀಸ್ನಲ್ಲಿದ್ದರು. 2ನೇ ದಿನದಾಟ ಆರಂಭಿಸಿದ ಈ ಜೋಡಿ ಪೈಕಿ ಪಂತ್ ಬಂದ ಬೆನ್ನಲ್ಲೆ ನಿರ್ಗಮಿಸಿದರು. ರವೀಂದ್ರ ಜಡೇಜಾ 17 ರನ್ಗೆ ಇನ್ನಿಂಗ್ಸ್ ಅಂತ್ಯಗೊಳಿಸಿದರು.
ಈ ಸಂದರ್ಭ 8ನೇ ವಿಕೆಟ್ಗೆ ವಿಹಾರಿ ಜೊತೆಯಾದ ಇಶಾಂತ್ ಶರ್ಮಾ ಅತ್ಯುತ್ತಮ ಆಟ ಪ್ರದರ್ಶಿಸಿದರು. ವಿಂಡೀಸ್ ಬೌಲರ್ಗಳನ್ನು ಕಾಡಿದ ಈ ಜೋಡಿ ಶತಕದ ಜೊತೆಯಾಟ ಆಡಿತು. ಅಲ್ಲದೆ ಇಶಾಂತ್ ಅರ್ಧಶತಕ ಬಾರಿಸಿದರೆ, ವಿಹಾರಿ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದರು.
ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಮೊದಲ ಚಿನ್ನದ ಪದಕ ಗೆದ್ದಿದ್ದು ಪಿ.ವಿ ಸಿಂಧು ಅಲ್ಲ..!
ಇವರ ಸಹಾಯದ ನೆರವಿನಿಂದ ಭಾರತ 140.1 ಓವರ್ನಲ್ಲಿ 416 ರನ್ಗೆ ಆಲೌಟ್ ಆಯಿತು. ವಿಹಾರಿ 225 ಎಸೆತಗಳಲ್ಲಿ 111 ರನ್ ಗಳಿಸಿದರೆ, ಇಶಾಂತ್ 80 ಎಸೆತಗಳಲ್ಲಿ 57 ರನ್ ಬಾರಿಸಿ ಔಟ್ ಆದರು. ವಿಂಡೀಸ್ ಪರ ಜೇಸನ್ ಹೋಲ್ಡರ್ 5 ವಿಕೆಟ್ ಕಿತ್ತರೆ, ಕಾರ್ನವೆನ್ 3 ಹಾಗೂ ಕೇಮರ್ ರೋಚ್ 1 ವಿಕೆಟ್ ಪಡೆದರು.
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಡ್ಯಾರೆನ್ ಬ್ರಾವೋ(4), ಶಮರ್ ಬ್ರೋಕ್ಸ್(0), ರೋಸ್ಟನ್ ಚೇಸ್(0) ಅವರ ವಿಕೆಟ್ ಕಿತ್ತು ಹ್ಯಾಟ್ರಿಕ್ ವಿಕೆಟ್ ಪಡೆದರು. ಶಿಮ್ರೋನ್ ಹೆಟ್ಮೇರ್ 57 ಎಸೆತಗಳಲ್ಲಿ 34 ರನ್ ಬಾರಿಸಿದ್ದೆ ಹೆಚ್ಚು.
ಎರಡನೇ ದಿನದಾಟದ ಅಂತ್ಯಕ್ಕೆ ವಿಂಡೀಸ್ 7 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿದೆ. ಜಮರ್ ಹ್ಯಾಮಿಲ್ಟನ್(2) ಹಾಗೂ ರಖೀಮ್ ಕಾರ್ನವೆಲ್(4) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಬುಮ್ರಾ 6 ವಿಕೆಟ್ ಕಿತ್ತಿದ್ದರೆ, ಶಮಿ 1 ವಿಕೆಟ್ ಪಡೆದಿದ್ದಾರೆ. ಅಲ್ಲದೆ ವೆಸ್ಟ್ ಇಂಡೀಸ್ ಇನ್ನೂ 329 ರನ್ಗಳ ಹಿನ್ನಡೆಯಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ