IND vs WI: ಕೆರಿಬಿಯನ್ನರ ನಾಡಲ್ಲಿ ಮೆರೆದ ಕೊಹ್ಲಿ ಪಡೆ; ಸರಣಿ ಕ್ಲೀನ್​ ಸ್ವೀಪ್ ಮಾಡಿದ ಭಾರತ

257 ರನ್​ಗಳ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ವೈಟ್​ವಾಶ್ ಮಾಡಿಕೊಂಡಿದೆ. ಅಲ್ಲದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 120 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದೆ.

Vinay Bhat | news18-kannada
Updated:September 3, 2019, 8:15 AM IST
IND vs WI: ಕೆರಿಬಿಯನ್ನರ ನಾಡಲ್ಲಿ ಮೆರೆದ ಕೊಹ್ಲಿ ಪಡೆ; ಸರಣಿ ಕ್ಲೀನ್​ ಸ್ವೀಪ್ ಮಾಡಿದ ಭಾರತ
ಟೀಂ ಇಂಡಿಯಾ
  • Share this:
ಬೆಂಗಳೂರು (ಸೆ. 03): ಜಮೈಕಾದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್​ನಲ್ಲೂ ಟೀಂ ಇಂಡಿಯಾ ಭರ್ಜರಿ ಗೆಲುವಿ ಸಾಧಿಸಿದೆ. 257 ರನ್​ಗಳ ಬೃಹತ್ ಅಂತರದ ಜಯದೊಂದಿಗೆ ಕೊಹ್ಲಿ ಪಡೆ 2-0 ಮುನ್ನಡೆಯಲ್ಲಿ ಟೆಸ್ಟ್​ ಸರಣಿ ಕ್ಲೀನ್​ ಸ್ವೀಪ್ ಮಾಡಿಕೊಂಡಿದೆ. ಅಲ್ಲದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ನಂಬರ್ ಸ್ಥಾನಕ್ಕೇರಿದೆ.

ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 416 ರನ್ ಕಲೆಹಾಕಿತ್ತು. ಬಳಿಕ ವೆಸ್ಟ್​ ಇಂಡೀಸ್ 117 ರನ್​ಗೆ ಸರ್ವಪತನ ಕಂಡಿತು. ಈ ಸಂದರ್ಭ ವಿಂಡೀಸ್​ಗೆ ಫಾಲೋಆನ್ ಹೇರದೆ 299 ರನ್​ಗಳ ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ 168 ರನ್​ಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಕೆರಿಬಿಯನ್ನರಿಗೆ ಗೆಲ್ಲಲು 468 ರನ್​ಗಳ ಗುರಿ ನೀಡಿತು.

ಈ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 45 ರನ್ ಬಾರಿಸಿತ್ತು. ನಾಲ್ಕನೇ ದಿನದಾಟ ಮುಂದುವರೆಸಿದ ವಿಂಡೀಸ್ ಮತ್ತದೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಜಡೇಜಾ ಹಾಗೂ ಶಮಿ ಬೌಲಿಂಗ್ ದಾಳಿಗೆ ತತ್ತರಿಸಿ ಬಹುಬೇಗನೆ ವಿಕೆಟ್ ಕಳೆದುಕೊಂಡಿತು.

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಬಂಧನ ಭೀತಿ..!

Clinical India Thrash West Indies to Complete Series Sweep,
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ


ರಾಸ್ಟನ್ ಚೇಸ್ ಅರ್ಧಶತಕ ಬಾರಿಸಿದರೆ, ಜರ್ಮೈನ್ ಬ್ಲಾಕ್​​ವುಡ್ 38 ಹಾಗೂ ನಾಯಕ ಜೇಸನ್ ಹೋಲ್ಡರ್ 39 ರನ್ ಗಳಿಸಿದ್ದೇ ಹೆಚ್ಚು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಸ್ಕೋರ್ 5ರ ಗಡಿ ದಾಟಲಿಲ್ಲ. ಪರಿಣಾಮ ವೆಸ್ಟ್​ ಇಂಡೀಸ್ 59.5 ಓವರ್​​​ನಲ್ಲಿ 210 ರನ್​ಗೆ ಆಲೌಟ್ ಆಯಿತು. ಭಾರತ ಪರ ಜಡೇಜಾ ಹಾಗೂ ಶಮಿ ತಲಾ 3 ವಿಕೆಟ್ ಕಿತ್ತರೆ, ಇಶಾಂತ್ ಶರ್ಮಾ 2 ಹಾಗೂ ಬುಮ್ರಾ 1 ವಿಕೆಟ್ ಪಡೆದರು.

257 ರನ್​ಗಳ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ವೈಟ್​ವಾಶ್ ಮಾಡಿಕೊಂಡಿದೆ. ಅಲ್ಲದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 120 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದೆ. ಬ್ಯಾಟಿಂಗ್​ನಲ್ಲಿ ಮಿಂಚಿದ ಹನುಮಾ ವಿಹಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.ಈ ಗೆಲುವಿನೊಂದಿಗೆ ನಾಯಕ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಮುರಿದಿದ್ದು, ಅತ್ಯಧಿಕ 28 ಟೆಸ್ಟ್ ಗೆಲುವಿನೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.

First published: September 3, 2019, 8:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading