'ನಾನಿನ್ನು ನಿವೃತ್ತಿ ಘೋಷಿಸಿಲ್ಲ'; ವದಂತಿಗಳಿಗೆ ಸ್ಪಷ್ಟನೆ ನೀಡಿದ ಗೇಲ್

ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ನೀಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ, ಗೇಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅಂದು ನಾನು ನಿನ್ನನ್ನು ಕ್ಷಮಿಸಿದ್ದೆ. ಆದರೆ ಆ ಘಟನೆಯನ್ನು ಇನ್ನೂ ಮರೆತಿಲ್ಲ ಎಂದ ಗೇಲ್ ಸರವಣ್​ನ್ನು ಹಾವಿಗೆ ಹೋಲಿಸಿದರು. ಆತನಲ್ಲಿ ವಿಷ ತುಂಬಿದೆ. ಹೀಗಾಗಿಯೇ ಬೆನ್ನ ಹಿಂದೆಯಿಂದ ಇರಿಸುವಂತಹ ಕೆಲಸ ಮಾಡುತ್ತಾನೆ ಎಂದು ಸ್ಪೋಟಕ ಆಟಗಾರ ತಿಳಿಸಿದರು.

ಅಂದು ನಾನು ನಿನ್ನನ್ನು ಕ್ಷಮಿಸಿದ್ದೆ. ಆದರೆ ಆ ಘಟನೆಯನ್ನು ಇನ್ನೂ ಮರೆತಿಲ್ಲ ಎಂದ ಗೇಲ್ ಸರವಣ್​ನ್ನು ಹಾವಿಗೆ ಹೋಲಿಸಿದರು. ಆತನಲ್ಲಿ ವಿಷ ತುಂಬಿದೆ. ಹೀಗಾಗಿಯೇ ಬೆನ್ನ ಹಿಂದೆಯಿಂದ ಇರಿಸುವಂತಹ ಕೆಲಸ ಮಾಡುತ್ತಾನೆ ಎಂದು ಸ್ಪೋಟಕ ಆಟಗಾರ ತಿಳಿಸಿದರು.

  • News18
  • Last Updated :
  • Share this:

ಬೆಂಗಳೂರು (ಆ. 15): ಅಂತರಾಷ್ಟ್ರೀಯ ಕ್ರಿಕೆಟ್​ಗೆ ವೆಸ್ಟ್​ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ವಿದಾಯ ಘೋಷಿಸಿದ್ದಾರೆ ಎಂದು ಹೇಳಲಾಗಿತ್ತು.


ನಿನ್ನೆ ಭಾರತ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕ್ರಿಸ್ ಗೇಲ್ ಕೇವಲ 41ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ 72 ರನ್ ಗಳಿಸಿದ್ದಾಗ ಖಲೀಲ್ ಅಹ್ಮದ್ ಬೌಲಿಂಗ್​ನಲ್ಲಿ ಔಟ್ ಆದರು.


ಈ ವೇಳೆ ಟೀಂ ಇಂಡಿಯಾ ಆಟಗಾರರು ವಿಕೆಟ್ ಪಡೆದ ಖುಷಿಯಲ್ಲಿ ಸಂಭ್ರಮಿಸುವ ಬದಲುಗೇಲ್​ಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದರುಪಂದ್ಯದ ನಡುವೆಯೇ ಭಾರತದ ಎಲ್ಲಾ ಆಟಗಾರರು ಕ್ರಿಸ್ ​ಗೇಲ್ ಅವರನ್ನು ತಬ್ಬಿಕೊಂಡು ಶುಭಕೋರಿದರು. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿತಮ್ಮ ವಿಶಿಷ್ಠ ಸ್ಟೇಲ್ನಲ್ಲಿ ಗೇಲ್​ಗೆ ಗುಡ್​ ಬಾಯ್ ಹೇಳಿದ್ದರು.


ಈ ಮೂಲಕ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ನೀಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ, ಗೇಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪಂದ್ಯ ಮುಗಿದ ಬಳಿಕ ಸಂದರ್ಶನದಲ್ಲಿ ಮಾತನಾಡಿದ ಗೇಲ್, 'ನಾನು ನಿವೃತ್ತಿ ಘೋಷಿಸಿಲ್ಲ. ಮುಂದಿನ ನೋಟಿಸ್​ ವರಗೂ ನಾನು ವೆಸ್ಟ್​​ ಇಂಡೀಸ್​ ಕ್ರಿಕೆಟ್​​ ತಂಡದಲ್ಲೇ ಇರಲಿದ್ದೇನೆ' ಎಂದು ಹೇಳಿದ್ದಾರೆ.

73ನೇ ಸ್ವಾತಂತ್ರ್ಯೋತ್ಸವ: ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿ ಧೋನಿ ಧ್ವಜಾರೋಹಣ

 ಈ ವಿಡಿಯೋವನ್ನು ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿಯ ತನ್ನ ಅಧಿಕೃತ ಟ್ವಿಟರ್​ನಲ್ಲಿ ಶೇರ್​ ಮಾಡಿದೆ. ಈ ಮೂಲಕ ಗೇಲ್​ ನಿವೃತ್ತಿ ಸದ್ಯಕ್ಕಿಲ್ಲ ಎಂಬುದು ಬಹಿರಂಗವಾಗಿದೆ.

ವಿಶ್ವಕಪ್ ವೇಳೆ ನಿವೃತ್ತಿ ಪ್ರಶ್ನೆ ಕೇಳಿ ಬಂದಾಗ ಭಾರತದ ವಿರುದ್ಧ ಸರಣಿ ಬಳಿಕ ನಿವೃತ್ತಿ ಹೊಂದುವುದಾಗಿ ಗೇಲ್ ಹೇಳಿದ್ದರು. ಆದರೆ, ಗೇಲ್ ಮುಂದಿನ ನೋಟಿಸ್​ವೆರಗೂ ನಾನು ಕ್ರಿಕೆಟ್ ಆಡಲಿದ್ದೇನೆ ಎಂದು ಹೇಳುವ ಮೂಲಕ ಅಭಿಮಾನಿಗಳು ಸಿಹಿಸುದ್ದಿ ನೀಡಿದ್ದಾರೆ.

First published: