ಕ್ರಿಕೆಟ್​ಗೆ ನಿವೃತ್ತಿ ನೀಡಿದ ಯೂನಿವರ್ಸಲ್ ಬಾಸ್ ಗೇಲ್; ಭಾರತೀಯರ ಜೊತೆ ವಿಶೇಷ ಸಂಭ್ರಮಾಚರಣೆ

ಪಂದ್ಯದ ನಡುವೆಯೇ ಭಾರತದ ಎಲ್ಲಾ ಆಟಗಾರರು ಕ್ರಿಸ್ ​ಗೇಲ್ ಅವರನ್ನು ತಬ್ಬಿಕೊಂಡು ಶುಭಕೋರಿದರು. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ತಮ್ಮ ವಿಶಿಷ್ಠ ಸ್ಟೇಲ್​ನಲ್ಲಿ ಗೇಲ್​ಗೆ ಗುಡ್​ ಬಾಯ್ ಹೇಳಿದರು.

ಕ್ರಿಸ್ ಗೇಲ್ ಜೊತೆ ಭಾರತೀಯ ಆಟಗಾರರು

ಕ್ರಿಸ್ ಗೇಲ್ ಜೊತೆ ಭಾರತೀಯ ಆಟಗಾರರು

  • News18
  • Last Updated :
  • Share this:

ಬೆಂಗಳೂರು (ಆ. 15): ಅಂತರಾಷ್ಟ್ರೀಯ ಕ್ರಿಕೆಟ್​ಗೆ ವೆಸ್ಟ್​ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ವಿದಾಯ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಗೇಲ್ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಬೇಕಿದೆಯಷ್ಟೆ.


ನಿನ್ನೆ ಭಾರತ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕ್ರಿಸ್ ಗೇಲ್ ಕೇವಲ 41 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ 72 ರನ್ ಗಳಿಸಿದ್ದಾಗ ಖಲೀಲ್ ಅಹ್ಮದ್ ಬೌಲಿಂಗ್​ನಲ್ಲಿ ಔಟ್ ಆದರು.


ಈ ವೇಳೆ ಟೀಂ ಇಂಡಿಯಾ ಆಟಗಾರರು ವಿಕೆಟ್ ಪಡೆದ ಖುಷಿಯಲ್ಲಿ ಸಂಭ್ರಮಿಸುವ ಬದಲು, ಗೇಲ್​ಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು. ಪಂದ್ಯದ ನಡುವೆಯೇ ಭಾರತದ ಎಲ್ಲಾ ಆಟಗಾರರು ಕ್ರಿಸ್ಗೇಲ್ ಅವರನ್ನು ತಬ್ಬಿಕೊಂಡು ಶುಭಕೋರಿದರು. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ತಮ್ಮ ವಿಶಿಷ್ಠ ಸ್ಟೇಲ್ನಲ್ಲಿ ಗೇಲ್​ಗೆ ಗುಡ್ಬಾಯ್ ಹೇಳಿದರು.


 IND vs WI: ಕೊಹ್ಲಿ ಖಾತೆಗೆ 43ನೇ ಶತಕ; ಟೀಂ ಇಂಡಿಯಾದಿಂದ ಸ್ವಾತಂತ್ರ್ಯಕ್ಕೆ ಸರಣಿ ಗೆಲುವಿನ ಸಿಹಿ

ಕೊನೆಯ ಪಂದ್ಯವಾಗಿದ್ದರಿಂದ ಭಾರತ ವಿರುದ್ದ 301 ನಂಬರ್ ಜೆರ್ಸಿ ಧರಿಸಿ ಗೇಲ್ ಆಡಿದ್ದು ಮಗದೊಂದು ವಿಶೇಷವೆನಿಸಿತ್ತುಇತ್ತೀಚೆಗಷ್ಟೆ ವಿಂಡೀಸ್ ಪರ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದ್ದ ಬ್ರಿಯನ್ ಲಾರ ದಾಖಲೆಯನ್ನು ಗೇಲ್ ಮುರಿದು ಹಾಕಿದ್ದರು. ಲಾರ 299 ಇನ್ನಿಂಗ್ಸ್ಗಳಲ್ಲಿ 10,348 ರನ್ ಬಾರಿಸಿದ್ದರು. ಸದ್ಯ ಗೇಲ್ ಎರಡನೇ ಏಕದಿನ ಪಂದ್ಯದಲ್ಲಿ 7 ರನ್ ಗಳಿಸುದ್ದಂತೆ ವಿಂಡೀಸ್ ಪರ ಗರಿಷ್ಠ ರನ್ ಕಲೆಹಾಕಿದ ಸಾಧನೆ ಮಾಡಿದ್ದರು. ಅಲ್ಲದೆ ವಿಂಡೀಸ್ ಪರ 300 ಏಕದಿನ ಪಂದ್ಯವನ್ನಾಡಿದ ಮೊದಲ ಬ್ಯಾಟ್ಸ್ಮನ್ ಆಗಿದ್ದಾರೆ.

 


ಗೇಲ್ ಈವರೆಗೆ ಒಟ್ಟು 301 ಏಕದಿನ ಪಂದ್ಯವನ್ನಾಡಿದ್ದು, 10480 ರನ್ ಕಲೆಹಾಕಿದ್ದಾರೆ. ಇದರಲ್ಲಿ 54 ಅರ್ಧಶತಕ ಹಾಗೂ 25 ಶತಕ ಸೇರಿವೆ. 215 ಇವರ ಗರಿಷ್ಠ ಸ್ಖೊರ್ ಆಗಿದೆ. ಟೆಸ್ಟ್​ನಲ್ಲಿ 182 ಇನ್ನಿಂಗ್ಸ್​ ಆಡಿದ್ದು 7214 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಹಾಗೂ 15 ಅರ್ಧಶತಕ ಸೇರಿವೆ. ಟೆಸ್ಟ್​ನಲ್ಲಿ ಇವರು ಗಳಿಸಿದ ಗರಿಷ್ಠ ಸ್ಕೋರ್ 333 ಆಗಿವೆ.


 
First published: