India vs West Indies: ಇಂದು ಅಂತಿಮ ಟಿ-20; ಸರಣಿ ಕ್ಲೀನ್ ಸ್ವೀಪ್ ಮಾಡಲು ಕೊಹ್ಲಿ ಮಾಸ್ಟರ್​ ಪ್ಲ್ಯಾನ್​​

ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯ ಸೂಚಿನೆ ಸಿಕ್ಕಿದೆ. ಬೆಂಚ್ ಕಾಯುತ್ತಿರುವ ಆಟಗಾರರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

Vinay Bhat | news18
Updated:August 6, 2019, 8:31 AM IST
India vs West Indies: ಇಂದು ಅಂತಿಮ ಟಿ-20; ಸರಣಿ ಕ್ಲೀನ್ ಸ್ವೀಪ್ ಮಾಡಲು ಕೊಹ್ಲಿ ಮಾಸ್ಟರ್​ ಪ್ಲ್ಯಾನ್​​
ವಿರಾಟ್ ಕೊಹ್ಲಿ ಜೊತೆ ಕೆ ಎಲ್ ರಾಹುಲ್
Vinay Bhat | news18
Updated: August 6, 2019, 8:31 AM IST
ಬೆಂಗಳೂರು (ಆ. 06): ಕೆರಿಬಿಯನ್ ಪ್ರವಾಸವನ್ನು ಭರ್ಜರಿ ಆಗಿ ಆರಂಭಿಸಿರುವ ಟೀಂ ಇಂಡಿಯಾ ಇಂದು ಅಂತಿಮ ಟಿ-20 ಪಂದ್ಯವನ್ನಾಡಲಿದೆ.

ಈಗಾಗಲೇ ಮೂರು ಪಂದ್ಯಗಳ ಟಿ-20 ಸರಣಿ ಪೈಕಿ 2-0 ಮುನ್ನಡೆ ಸಾಧಿಸಿ ಸರಣಿ ವಶ ಪಡಿಸಿಕೊಂಡಿರುವ ಕೊಹ್ಲಿ ಪಡೆ ಕ್ಲೀನ್ ಸ್ವೀಪ್​ ನತ್ತ ಚಿತ್ತ ನೆಟ್ಟಿದೆ. ಇತ್ತ ವೆಸ್ಟ್​ ಇಂಡೀಸ್ ಪ್ರತಿಷ್ಠೆಗಾದರು ಇಂದಿನ ಪಂದ್ಯ ಗೆಲ್ಲ ಬೇಕೆಂದು ಪಣತೊಟ್ಟಿದೆ.

ಮೊದಲ ಟಿ-20 ಪಂದ್ಯದಲ್ಲಿ 4 ವಿಕೆಟ್​ಗಳಿಂದ ಗೆದ್ದು ಬೀಗಿದ್ದ ಭಾರತ, ಎರಡನೇ ಪಂದ್ಯದಲ್ಲು ಡಕ್ವರ್ತ್​​ ಲುಯೀಸ್ ನಿಯಮದ ಪ್ರಕಾರ 22 ರನ್ ಗಳಿಂದ ಜಯ ಸಾಧಿಸಿತ್ತು.

ಭಾರತಕ್ಕೆ ಉತ್ತಮ ಆರಂಭ ಉದಗಿಸುವಲ್ಲಿ ಎಡವುತ್ತಿದ್ದ ಶಿಖರ್ ಧವನ್-ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲಿ ಅರ್ಧಶತಕದ ಜೊತೆಯಾಟ ಆಡಿ ಫಾರ್ಮ್​​ಗೆ ಮರಳಿದ್ದಾರೆ. ಹೀಗಾಗಿ ಇಂದುಕೂಡ ಇವರಿಂದ ಭರ್ಜರಿ ಆಟ ನಿರೀಕ್ಷಿಸಬಹುದು.

Ashes 2019 ENG vs AUS: ತವರಿನಲ್ಲೇ ವಿಶ್ವಚಾಂಪಿಯನ್ನರಿಗೆ ಮಣ್ಣು ಮುಕ್ಕಿಸಿದ ಆಸ್ಟ್ರೇಲಿಯಾ

ಇದರ ಜೊತೆಗೆ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯ ಸೂಚಿನೆ ಸಿಕ್ಕಿದೆ. ಬೆಂಚ್ ಕಾಯುತ್ತಿರುವ ಆಟಗಾರರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ದೀಪಕ್ ಚಹಾರ್, ರಾಹುಲ್ ಚಹಾರ್ ಹಾಗೂ ಶ್ರೇಯಸ್ ಅಯ್ಯರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.

ವಾಷಿಂಗ್ಟನ್ ಸುಂದರ್ ಹಾಗೂ ಖಲೀಲ್ ಅಹ್ಮದ್​ಗೆ ವಿಶ್ರಾಂತಿ ನೀಡಿ ಚಹಾರ್ ಬ್ರದರ್ಸ್​​ ಅವಕಾಶ ಪಡೆದುಕೊಂಡರೆ, ಮನೀಶ್ ಪಾಂಡೆ ಜಾಗದಲ್ಲಿ ಅಯ್ಯರ್ ಆಡಬಹುದು. ಸರಣಿ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾ ಕೊನೆಯ ಪಂದ್ಯ ಎಂದು ಕಡೆಗಣನೆ ಮಾಡದೆ ಗೆಲ್ಲುವ ವಿಶ್ವಾದಲ್ಲಿದೆ.
Loading...

ಇತ್ತ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲುಂಡಿರುವ ಕೆರಿಬಿಯನ್ನರು ಪ್ರತಿಷ್ಠೆಗಾಗಿ ಇಂದಿನ ಪಂದ್ಯ ಗೆಲ್ಲಬೇಕೆಂದು ಪಣತೊಟ್ಟಿದೆ. ಆ್ಯಂಡ್ರೊ ರಸೆಲ್ ಅನುಪಸ್ಥಿತಿ ತಂಡದಲ್ಲಿ ಎದ್ದು ಕಾಣುತ್ತಿದ್ದು, ರನ್ ದಾಹ ಅನುಭವಿಸುತ್ತಿದೆ.

(VIDEO): 120 ಎಸೆತಗಳಲ್ಲಿ 215 ರನ್​; ಎಬಿಡಿ ಬ್ಯಾಟ್​​ನಿಂದ ಸಿಡಿದಿದ್ದು 9 ಅಮೋಘ ಸಿಕ್ಸ್​

ಶಿಮ್ರೋನ್ ಹೆಟ್ಮೇರ್, ಕೀರೊನ್ ಪೊಲ್ಲಾರ್ಡ್, ಎವಿನ್ ಲೆವಿಸ್​ರಂತಹ ಬಿಗ್ ಹಿಟ್ಟರ್​ಗಳು ತಂಡದಲ್ಲಿದ್ದರೂ ಗೆಲುವು ಕಾಣುವಲ್ಲಿ ಎಡವುತ್ತಿದೆ. ಬೌಲಿಂಗ್​ನಲ್ಲಿ ವೆಸ್ಟ್​ ಇಂಡೀಸ್​ ತಂಡ ಉತ್ತಮ ಪ್ರದರ್ಶನ ತೋರಿದೆ.

ಒಟ್ಟಾರೆ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡುದ ಅಂದಾಜಲ್ಲಿದ್ದರೆ, ಇತ್ತ ವಿಂಡೀಸ್ ಕನಿಷ್ಠ ಕೊನೆಯ ಪಂದ್ಯವನ್ನಾದರು ಗೆದ್ದು ಮಾನಉಳಿಸಿಕೊಳ್ಳಲು ಹೊಂಚು ಹಾಕಿದೆ.

First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...