IND vs WI: 3ನೇ ಏಕದಿನದಿಂದ ಭಾರತದ ಸ್ಟಾರ್ ಆಟಗಾರ ಔಟ್; ಆರ್​ಸಿಬಿ ಪ್ಲೇಯರ್​ಗೆ ಅವಕಾಶ!

ಮೊದಲ ಏಕದಿನ ಪಂದ್ಯವನ್ನು ವಿಂಡೀಸ್ ಜಯಸಿದರೆ, ಎರಡನೇ ಪಂದ್ಯದಲ್ಲಿ ಭಾರತ 107 ರನ್​ಗಳ ಭರ್ಜರಿ ಗೆಲುವು ತನ್ನದಾಗಿಸಿತ್ತು. ಹೀಗಾಗಿ ಡಿ. 22 ರಂದು ಕತಕ್​ನಲ್ಲಿ ನಡೆಯಲಿರುವ ಅಂತಿಮ ಕದನ ನಿರ್ಣಾಯಕವಾಗಲಿದೆ.

Vinay Bhat | news18-kannada
Updated:December 19, 2019, 3:20 PM IST
IND vs WI: 3ನೇ ಏಕದಿನದಿಂದ ಭಾರತದ ಸ್ಟಾರ್ ಆಟಗಾರ ಔಟ್; ಆರ್​ಸಿಬಿ ಪ್ಲೇಯರ್​ಗೆ ಅವಕಾಶ!
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
  • Share this:
ಬೆಂಗಳೂರು (ಡಿ. 19): ವೆಸ್ಟ್​ ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯ ಗೆದ್ದು ಭರ್ಜರಿ ಕಮ್​ಬ್ಯಾಕ್ ಮಾಡಿರುವ ಭಾರತ ಸರಣಿ ಸಮಬಲ ಸಾಧಿಸಿದೆ. ಮೂರನೇ ಪಂದ್ಯ ಗೆದ್ದು, ಸರಣಿ ವಶಪಡಿಸಿಕೊಳ್ಳಬೇಕು ಎಂಬಹೊತ್ತಿಗೆ ಕೊಹ್ಲಿ ಪಡೆಗೆ ದೊಡ್ಡ ಆಘಾತ ಉಂಟಾಗಿದೆ.

ತಂಡದ ಪ್ರಮುಖ ಬೌಲರ್ ದೀಪಕ್ ಚಹಾರ್ ಅಂತಿಮ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಬೆನ್ನು ನೋವಿನಿಂದಾಗಿ ಚಹಾರ್ ಹೊರಗುಳಿದಿದ್ದು, ನವ್​ದೀಪ್​ ಸೈನಿ ಇವರ ಬದಲು ತಂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.

IPL 2020 Player Auction Live: ಹರಾಜಿಗೆ ಕ್ಷಣಗಣನೆ; ಅದೃಷ್ಟ ಪರೀಕ್ಷೆಗಿಳಿದಿದ್ದಾರೆ 332 ಆಟಗಾರರು!

 ವಿಂಡೀಸ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಚಹಾರ್ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಆಡಿದ ಎರಡು ಪಂದ್ಯಗಳಲ್ಲಿ ಚಹಾರ್ ಕೇವಲ 1 ವಿಕೆಟ್ ಅಷ್ಟೆ ಪಡೆದಿದ್ದರು. ಅಲ್ಲದೆ ಫೀಲ್ಡಿಂಗ್​ನಲ್ಲಿ ಅನೇಕ ಕ್ಯಾಚ್ ಕೈಚೆಲ್ಲಿದ್ದರು.

IND vs WI: ಭಾರತ- ವೆಸ್ಟ್​ ಇಂಡೀಸ್ 2ನೇ ಏಕದಿನ ಪಂದ್ಯದ ಕೆಲ ರೋಚಕ ಕ್ಷಣಗಳು

ಇನ್ನು ನವ್​ದೀಪ್ ಸೈನಿ ಇದೇ ಮೊದಲ ಬಾರಿಗೆ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಸೈನಿ ಭಾರತ ಪರ ಟಿ-20 ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆಡಿದ 5 ಟಿ-20 ಪಂದ್ಯಗಳಲ್ಲಿ ಸೈನಿ 6 ವಿಕೆಟ್ ಪಡೆದಿದ್ದರು. ಸದ್ಯ ಸೈನಿ ಅವರು ರಣಜಿ ಟ್ರೋಫಿಯ ಪಂದ್ಯದಲ್ಲಿ ಮಿಂಚುತ್ತಿದ್ದಾರೆ.

ಮೊದಲ ಏಕದಿನ ಪಂದ್ಯವನ್ನು ವಿಂಡೀಸ್ ಜಯಸಿದರೆ, ಎರಡನೇ ಪಂದ್ಯದಲ್ಲಿ ಭಾರತ 107 ರನ್​ಗಳ ಭರ್ಜರಿ ಗೆಲುವು ತನ್ನದಾಗಿಸಿತ್ತು. ಹೀಗಾಗಿ ಡಿ. 22 ರಂದು ಕತಕ್​ನಲ್ಲಿ ನಡೆಯಲಿರುವ ಅಂತಿಮ ಕದನ ನಿರ್ಣಾಯಕವಾಗಲಿದೆ.

Published by: Vinay Bhat
First published: December 19, 2019, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading