ಮೊದಲ ಟೆಸ್ಟ್​​ನಲ್ಲಿ ಉಪ ನಾಯಕನಿಗೇ ಇಲ್ಲ ಸ್ಥಾನ?; ರಹಾನೆ ಜಾಗದಲ್ಲಿ ಈ ಸ್ಟಾರ್ ಆಟಗಾರ!

ಸುಮಾರು ಏಳೂವರೆ ತಿಂಗಳ ಬಳಿಕ ಭಾರತ ಟೆಸ್ಟ್ ಕ್ರಿಕೆಟ್​ಗೆ ಮರಳುತ್ತಿದೆ. ನಾಯಕ ಕೊಹ್ಲಿ ಹಾಗೂ ಕೋಚ್ ಆಗಿ ಮರು ಆಯ್ಕೆಯಾದ ರವಿಶಾಸ್ತ್ರಿಗೆ ಈ ಟೆಸ್ಟ್​ ಸರಣಿ ಪ್ರಮುಖವಾಗಿದೆ.

Vinay Bhat | news18
Updated:August 21, 2019, 2:50 PM IST
ಮೊದಲ ಟೆಸ್ಟ್​​ನಲ್ಲಿ ಉಪ ನಾಯಕನಿಗೇ ಇಲ್ಲ ಸ್ಥಾನ?; ರಹಾನೆ ಜಾಗದಲ್ಲಿ ಈ ಸ್ಟಾರ್ ಆಟಗಾರ!
ಅಜಿಂಕ್ಯ ರಹಾನೆ
  • News18
  • Last Updated: August 21, 2019, 2:50 PM IST
  • Share this:
ಬೆಂಗಳೂರು (ಆ. 21): ಟೀಂ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್​​ಗೆ ಪದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದೆ. ನಾಳೆ ಭಾರತ, ವೆಸ್ಟ್​ ಇಂಡೀಸ್ ವಿರುದ್ಧ ಮೊದಲ ಟೆಸ್ಟ್​ ಪಂದ್ಯ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ನಾರ್ತ್​ಸೌಂಡ್​ನ ಸರ್ ವೀವ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

ಈ ಮಧ್ಯೆ ಮೊದಲ ಟೆಸ್ಟ್​ಗೆ ಭಾರತ ತಂಡದಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿಗೆ ಎದುರಾಗಿದೆ. ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್​​ಗಳು ಹಾಗೂ ಬ್ಯಾಟ್ಸ್​ಮನ್​ಗಳು ಭರ್ಜರಿ ಪ್ರದರ್ಶನ ತೋರಿರುವುದು ಇದಕ್ಕೆ ಕಾರಣ.

ಮೊದಲ ಟೆಸ್ಟ್​​ಗೆ ಭಾರತ ಪರ ಐದು ಬೌಲರ್​ಗಳು ಬೇಕೋ ಅಥವಾ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಬೇಕೋ ಒಂಬ ಪ್ರಶ್ನೆ ನಾಯಕನಿಗೆ ಎದುರಾಗಿದೆ. ಜಸ್​ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಅಥವಾ ಮೊಹಮ್ಮದ್ ಶಮಿ ಈ ನಾಲ್ವರಲ್ಲಿ ಮೂವರು ವೇಗಿಗಳು ಕಣಕ್ಕಿಳಿಯುವುದು ಪಕ್ಕ. ಸ್ಪಿನ್ನರ್​​ಗಳಾಗಿ ರವೀಂದ್ರ ಜಡೇಹಾ ಹಾಗೂ ಕುಲ್ದೀಪ್ ಯಾದವ್ ಆಡಬಹುದು. ಹೀಗಾದಲ್ಲಿ ರೋಹಿತ್ ಶರ್ಮಾ ಅಥವಾ ಅಜಿಂಕ್ಯ ರಹಾನೆ ಪೈಕಿ ಒಬ್ಬರು ಮಾತ್ರ ಆಡುವ ಬಳಗದಲ್ಲಿ ಕಾಣಿಸುತ್ತಾರೆ.

India vs West Indies: Captain Virat Kohli’s dilemma - Ajinkya Rahane and Rohit Sharma or a fifth bowler?
ರೋಹಿತ್ ಶರ್ಮಾ


ಎಲ್ಲಾದರು ನಾಲ್ವರು ಬೌಲರ್​ಗಳ ಸಂಯೋಜನೆಯೊಂದಿಗೆ ಆಡಿದರೆ ಮಾತ್ರ ಟೆಸ್ಟ್ ತಂಡದ ಉಪನಾಯಕ ರಹಾನೆ ಹಾಗೂ ಏಕದಿನ ತಂಡದ ಉಪನಾಯಕ ರೋಹಿತ್​ಗೆ ತಂಡದಲ್ಲಿ ಸ್ಥಾನ.

ಭಾರತದ ಅಳಿಯನಾದ ಪಾಕ್ ಕ್ರಿಕೆಟಿಗ ಹಸನ್ ಅಲಿ; ವೈರಲ್ ಆಗುತ್ತಿದೆ ವೆಡ್ಡಿಂಗ್ ಫೋಟೋ

ಇನ್ನು ಕೊಹ್ಲಿ ಐದು ಬೌಲರ್​ಗಳನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡಲ್ಲಿ ಅಜಿಂಕ್ಯ ರಹಾನೆಯನ್ನು ಕೈಬಿಟ್ಟು, ರೋಹಿತ್ ಶರ್ಮಾ ಆಡುವುದು ಬಹುತೇಕ ಖಚಿತ. ವೆಸ್ಟ್​ ಇಂಡೀಸ್ ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲಾಗಲಿ ಅಥವಾ ಇತ್ತೀಚಿನ ಫಾರ್ಮ್​​ ನೋಡುವಾಗ ರಹಾನೆ ಉತ್ತಮ ಪ್ರದರ್ಶನ ನೀಡಿಲ್ಲ. ಅಭ್ಯಾಸ ಪಂದ್ಯದಲ್ಲಿ ರೋಹಿತ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ರಹಾನೆ ಕೈಬಿಟ್ಟು ರೋಹಿತ್​ಗೆ ಅವಕಾಶ ನೀಡುವ ಅಂದಾಜಿದೆ.ಅಲ್ಲದೆ ಸುಮಾರು ಏಳೂವರೆ ತಿಂಗಳ ಬಳಿಕ ಭಾರತ ಟೆಸ್ಟ್ ಕ್ರಿಕೆಟ್​ಗೆ ಮರಳುತ್ತಿದೆ. ನಾಯಕ ಕೊಹ್ಲಿ ಹಾಗೂ ಕೋಚ್ ಆಗಿ ಮರು ಆಯ್ಕೆಯಾದ ರವಿಶಾಸ್ತ್ರಿಗೆ ಈ ಟೆಸ್ಟ್​ ಸರಣಿ ಪ್ರಮುಖವಾಗಿದೆ.

ಮೊದಲ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ (ನಾಯಕ), ಚೇತೇಶ್ವರ್ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್​ಪ್ರೀತ್ ಬುಮ್ರಾ.

First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading