IND vs WI: ಏಕದಿನ ಸರಣಿಯಿಂದ ಭುವನೇಶ್ವರ್ ಔಟ್; ಈ ಆಟಗಾರನಿಗೆ ಸ್ಥಾನ!

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಟೀಂ ಇಂಡಿಯಾದ ಮತ್ತೊಬ್ಬ ಪ್ರಮುಖ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ ವಿಂಡೀಸ್ ಏಕದಿನ ಸರಣಿಯಿಂದ ಹೊರ ಬಿದ್ದಿದ್ದಾರೆ.

  • Share this:

ಬೆಂಗಳೂರು (ಡಿ. 14): ವೆಸ್ಟ್​ ಇಂಡೀಸ್ ವಿರುದ್ಧದ ಟಿ-20 ಸರಣಿಯನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ ಸದ್ಯ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಇದಕ್ಕಾಗಿ ಈಗಾಗಲೇ ಕೊಹ್ಲಿ ಪಡೆ ಚೆನ್ನೈ ತಲುಪಿದೆ. ಆದರೆ, ಮೊದಲ ಪಂದ್ಯ ಆರಂಭಕ್ಕೂ ಮುನ್ನ ಭಾರತಕ್ಕೆ ಮಗದೊಂದು ಆಘಾತ ಉಂಟಾಗಿದೆ.

ಈಗಾಗಲೇ ಇಂಜುರಿಯಿಂದ ಗುಣಮುಖರಾಗದ ಕಾರಣ ಶಿಖರ್ ಧವನ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇವರ ಬದಲು ಮಯಾಂಕ್ ಅಗರ್ವಾಲ್​ಗೆ ಅವಕಾಶ ಕಲ್ಪಿಸಲಾಗಿದೆ.

IND vs WI: ನಾಳೆ ಮೊದಲ ಏಕದಿನ ಫೈಟ್; ಟೀಂ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ

ಹೀಗಿರುವಾಗ ಟೀಂ ಇಂಡಿಯಾದ ಮತ್ತೊಬ್ಬ ಪ್ರಮುಖ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ ವಿಂಡೀಸ್ ಏಕದಿನ ಸರಣಿಯಿಂದ ಹೊರ ಬಿದ್ದಿದ್ದಾರೆ.

ಸ್ನಾಯು ಸೆಳೆತಕ್ಕೊಳಗಾಗಿರುವ ಭುವಿ ವಿಂಡೀಸ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತಿಳಿಸಿದ್ದು, ಭುವಿ ಜಾಗಕ್ಕೆ ಶಾರ್ದೂಲ್ ಠಾಕೂರ್​​ಗೆ ಅವಕಾಶ ನೀಡಲಾಗಿದೆ.

 IPL 2020 Auction: ಐಪಿಎಲ್ ಹರಾಜಿಗೆ ಮ್ಯಾಕ್ಸ್​ವೆಲ್​, ಪ್ಯಾಟ್ ಕಮಿನ್ಸ್​ ಸೇರಿ 332 ಆಟಗಾರರ ಹೆಸರು ಪ್ರಕಟ

ಮೊದಲ ಏಕದಿನ ಪಂದ್ಯ ಡಿ. 15 ರಂದು ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕೊಹ್ಲಿ ಪಡೆ ಈಗಾಗಲೇ ಚೆನ್ನೈಗೆ ಬಂದಿಳಿದಿದೆ. ಎರಡನೇ ಪಂದ್ಯ ಡಿ. 18ಕ್ಕೆ ವಿಶಾಖಪಟ್ಟಣ ಹಾಗೂ ಅಂತಿಮ ಕದನ ಡಿ. 22 ರಂದು ಕತಕ್​ನಲ್ಲಿ ಏರ್ಪಡಿಸಲಾಗಿದೆ.

ಏಕದಿನ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶ್ರೇಯಸ್‌ ಐಯ್ಯರ್‌, ಕೇದರ್‌ ಜಾಧವ್‌, ಮಯಾಂಕ್ ಅಗರ್ವಾಲ್, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌, ಮನೀಶ್‌ ಪಾಂಡೆ, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಲ್‌, ದೀಪಕ್‌ ಚಹರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಶಾರ್ದೂಲ್ ಠಾಕೂರ್.

First published: