IND vs WI: ಅದ್ದೂರಿ ಸ್ವಾಗತ ಕೋರಿದ್ದೇ ಬಂತು; ತವರಿನಲ್ಲೂ ಸ್ಯಾಮ್ಸನ್​ಗೆ ಸಿಗದ ಅವಕಾಶ

ಟಾಸ್ ಪ್ರಕ್ರಿಯೆಗೂ ಮುನ್ನ ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ, ಸ್ಟೇಡಿಯಂನಲ್ಲಿರುವ ಪ್ರೇಕ್ಷಕರು ಸಂಜೂ.. ಸಂಜೂ ಎಂದು ಕೂಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿತ್ತು. ಹೀಗಾಗಿ ಸ್ಯಾಮ್ಸನ್​ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ನಂಬಲಾಗಿತ್ತು.

news18-kannada
Updated:December 8, 2019, 8:14 PM IST
IND vs WI: ಅದ್ದೂರಿ ಸ್ವಾಗತ ಕೋರಿದ್ದೇ ಬಂತು; ತವರಿನಲ್ಲೂ ಸ್ಯಾಮ್ಸನ್​ಗೆ ಸಿಗದ ಅವಕಾಶ
ಸಂಜು ಸ್ಯಾಮ್ಸನ್
  • Share this:
ಬೆಂಗಳೂರು (ಡಿ. 08): ತಿರುವನಂತಪುರಂನ ಗ್ರೀನ್​ಫೀಲ್ಡ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಸೋತು ಭಾರತ ಬ್ಯಾಟಿಂಗ್ ಆರಂಭಿಸಿದೆ. ಓಪನರ್​ಗಳು ಕೈಕೊಟ್ಟರು ಶಿವಂ ದುಬೆ ಸ್ಫೋಟಕ ಅರ್ಧಶತಕ ಸಿಡಿಸಿದ ಪರಿಣಾಮ ಭಾರತ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ.

ಇಂದಿನ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡದೆ ಮೊದಲ ಪಂದ್ಯದಲ್ಲಿ ಗೆದ್ದ ತಂಡವನ್ನೇ ಟೀಂ ಇಂಡಿಯಾ ಕಣಕ್ಕಿಳಿಸಿದೆ. ತವರು ಮೈದಾನವಾಗಿದ್ದರಿಂದ ಸಂಜು ಸ್ಯಾಮ್ಸನ್​​ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಇದು ಸುಳ್ಳಾಗಿದೆ.

India vs West Indies Live Score: ಕ್ಯಾಪ್ಟನ್ ಔಟ್; ಭಾರತದ 4 ವಿಕೆಟ್ ಪತನ

ಕೊಹ್ಲಿ ಪಡೆ ಹೈದರಾಬಾದ್​ನಿಂದ ತೆರಳಿ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಇಳಿದಾಗ ಟೀಂ ಇಂಡಿಯಾ ಆಟಗಾರರ ಪೈಕಿ ಲೋಕಲ್ ಬಾಯ್ ಸಂಜು ಸ್ಯಾಮ್ಸನ್​ಗೆ ಅದ್ದೂರಿ ಸ್ವಾಗತ ದೊರಕಿತು. ಕೊಹ್ಲಿ, ರೋಹಿತ್​ರಂತಹ ಸ್ಟಾರ್ ಆಟಗಾರರಿದ್ದರೂ ಯಾರನ್ನೂ ಲೆಕ್ಕಿಸದೆ ಸಂಜೂ.. ಸಂಜೂ ಎಂದು ಸ್ಥಳೀಯ ಆಟಗಾರನಿಗೆ ಅಭಿಮಾನಿಗಳು ಚಿಯರ್ ಮಾಡಿದರು.

 ಅಲ್ಲದೆ ಟಾಸ್ ಪ್ರಕ್ರಿಯೆಗೂ ಮುನ್ನ ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ, ಸ್ಟೇಡಿಯಂನಲ್ಲಿರುವ ಪ್ರೇಕ್ಷಕರು ಸಂಜೂ.. ಸಂಜೂ ಎಂದು ಕೂಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿತ್ತು. ಹೀಗಾಗಿ ಸ್ಯಾಮ್ಸನ್​ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ನಂಬಲಾಗಿತ್ತು.

ಆತ ತಂಡದಲ್ಲಿ ಯಾಕಿಲ್ಲ? ಕೇಳಿದ್ದಕ್ಕೆ, ನನ್ನ ತಂಗಿಯೊಂದಿಗೆ ಬೆಡ್​ನಲ್ಲಿ ಮಲಗಿದ್ದ ಎಂದ ಡುಪ್ಲೆಸಿಸ್!

ಆದರೆ, ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಸಂಜು ಮತ್ತೊಮ್ಮೆ ಬೆಂಚ್ ಕಾಯಬೇಕಾಗಿ ಬಂದಿದೆ. ಇದರಿಂದ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಸಂಜು ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದಕ್ಕೆ ಆಕ್ರೋಶ ಹೊರಹಾಕುತ್ತಿದ್ದಾರೆ.

  (VIDEO): ತಿರುವನಂತಪುರಂ ಏರ್​ಪೋರ್ಟ್​​ನಲ್ಲಿ ಸಂಜು ಸ್ಯಾಮ್ಸನ್​​ಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ?

ಇಂದಿನ ಪಂದ್ಯಕ್ಕೆ ಸ್ಯಾಮ್ಸನ್ ಜೊತೆ ಮನೀಶ್ ಪಾಂಡೆಯನ್ನೂ ಕಣಕ್ಕಿಳಿಸಿಲ್ಲ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಪಾಂಡೆ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಆದರೂ ಪಾಂಡೆಯನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿಕೊಂಡಿಲ್ಲ.

ಇತ್ತ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆ ಸೇರಿ ಒಟ್ಟು ಮೂರು ಜನ ಆಲ್ರೌಂಡರ್​​ಗಳು ತಂಡದಲ್ಲಿದ್ದಾರೆ. ಈ ಬಗ್ಗೆಯೂ ಅಭಿಮಾನಿಗಳೂ ಬೇಸರ ಹೊರಹಾಕಿದ್ದಾರೆ.

First published:December 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ