ಒಂದೇ ಪಂದ್ಯದಲ್ಲಿ ಕೊಹ್ಲಿಯಿಂದ ದಾಖಲೆಗಳ ಸುರಿಮಳೆ; ಸಚಿನ್ ಸಾಧನೆ ಹಿಂದಿಕ್ಕಲು ಬೇಕಿಲ್ಲ ಹೆಚ್ಚು ಸಮಯ

ಕೊಹ್ಲಿ ವಿಂಡೀಸ್ ವಿರುದ್ಧ 6ನೇ ಶತಕ ಬಾರಿಸಿ ತಮ್ಮ ಖಾತೆಗೆ ಮತ್ತೊಂದು ದಾಖಲೆ ಸೇರ್ಪಡೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಶತಕದ ವೀರ ಸಚಿನ್ ಅವರ 49 ಶತಕ ಮುರಿಯಲು ಕೊಹ್ಲಿಗೆ ಇನ್ನು ಕೇವಲ 8 ಸೆಂಚುರಿಯಷ್ಟೆ ಬಾಕಿ ಉಳಿದಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • News18
  • Last Updated :
  • Share this:
ಟ್ರಿನಿಡಾಡ್ (. 12): ಕ್ವೀನ್ಸ್​ ಪಾರ್ಕ್​ ಓವಲ್ ಮೈದಾನದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನಾಯಕ ವಿರಾಟ್ ಕೊಹ್ಲಿ 42ನೇ ಶತಕ ಸಿಡಿಸಿ ಮಿಂಚಿದರು. ಇದರ ಜೊತೆಗೆ ಕೊಹ್ಲಿ ಒಂದದಿಷ್ಟು ದಾಖಲೆಯನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಒಟ್ಟು 11366 ರನ್ ಕಲೆಹಾಕುವ ಮೂಲಕ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ. ಗಂಗೂಲಿ ಏಕದಿನ ಕ್ರಿಕೆಟ್​ನಲ್ಲಿ 11363 ರನ್ ಬಾರಿಸಿದ್ದರು. ಸದ್ಯ ಕೊಹ್ಲಿ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಮೊದಲ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಇದ್ದು 18426 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಕೊಹ್ಲಿ 8ನೇ ಸ್ಥಾನಕ್ಕೇರಿದ್ದಾರೆ.

IND vs WI: ಕೊಹ್ಲಿ ಶತಕ, ಐಯರ್ ಅರ್ಧಶತಕ; ಭಾರತಕ್ಕೆ 59 ರನ್​ಗಳ ಭರ್ಜರಿ ಜಯ

ಈ ಪಂದ್ಯದಲ್ಲಿ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 42ನೇ ಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ತಂಡವೊಂದರ ವಿರುದ್ಧ ಅತೀ ಹೆಚ್ಚು ಶತಕ ಗಳಿಸಿದ ಬ್ಯಾಟ್ಸ್​ಮನ್​ ಎಂಬ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಕಿವೀಸ್ ವಿರುದ್ಧ 5 ಶತಕ ಗಳಿಸಿದ್ದರು. ಸದ್ಯ ಕೊಹ್ಲಿ ವಿಂಡೀಸ್ ವಿರುದ್ಧ 6ನೇ ಶತಕ ಬಾರಿಸಿ ತಮ್ಮ ಖಾತೆಗೆ ಮತ್ತೊಂದು ದಾಖಲೆ ಸೇರ್ಪಡೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಶತಕದ ವೀರ ಸಚಿನ್ ಅವರ 49 ಶತಕ ಮುರಿಯಲು ಕೊಹ್ಲಿಗೆ ಇನ್ನು ಕೇವಲ 8 ಸೆಂಚುರಿಯಷ್ಟೆ ಬಾಕಿ ಉಳಿದಿದೆ.

 ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಅತಿಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹಿರಿಮೆಗೂ ವಿರಾಟ್ ಕೊಹ್ಲಿ ಪಾತ್ರರಾದರು. ಇದಕ್ಕೂ ಮುನ್ನ ಪಾಕಿಸ್ತಾನದ ಜಾವೇದ್‌ ಮಿಯಾಂದದ್‌ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ್ದ ಆಟಗಾರ ಆಗಿದ್ದರು. ಇವರು 64 ಇನಿಂಗ್ಸ್‌ಗಳಲ್ಲಿ 1930 ರನ್‌ಗಳನ್ನು ದಾಖಲಿಸಿದ್ದರು. ಆದರೆ ಕೇವಲ 34 ಇನಿಂಗ್ಸ್‌ಗಳಲ್ಲಿ ಕೊಹ್ಲಿ, ಪಾಕ್ ಮಾಜಿ ನಾಯಕನ ದಾಖಲೆಯನ್ನು ಧೂಳಿಪಟ ಮಾಡಿದ್ದು, ವಿಂಡೀಸ್ ವಿರುದ್ಧ ಒಟ್ಟು 2032 ರನ್​ಗಳಿಸಿದ್ದಾರೆ.

ಕ್ರಿಸ್ ಗೇಲ್​ರಿಂದ ನೂತನ ದಾಖಲೆ:

ವೆಸ್ಟ್​ ಇಂಡೀಸ್ ಕ್ರಿಸ್ ಗೇಲ್ ಹೊಸ ದಾಖಲೆಯನ್ನು ತಮ್ಮ ಮುಡಿಗೆ ಸೇರಿಸಿಕೊಂಡಿದ್ದಾರೆ. ವಿಂಡೀಸ್ ಪರ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಗಳಿಸಿದ್ದ ಬ್ರಿಯನ್ ಲಾರ ದಾಖಲೆಯನ್ನು ಗೇಲ್ ಮುರಿದು ಹಾಕಿದ್ದಾರೆ. ಲಾರ 299 ಇನ್ನಿಂಗ್ಸ್​ಗಳಲ್ಲಿ 10,348 ರನ್ ಬಾರಿಸಿದ್ದರು. ಸದ್ಯ ಗೇಲ್ ಎರಡನೇ ಏಕದಿನ ಪಂದ್ಯದಲ್ಲಿ 7 ರನ್ ಗಳಿಸುದ್ದಂತೆ ವಿಂಡೀಸ್ ಪರ ಗರಿಷ್ಠ ರನ್ ಕಲೆಹಾಕಿದ ಸಾಧನೆ ಮಾಡಿದರು. ಅಲ್ಲದೆ ವಿಂಡೀಸ್ ಪರ 300 ಏಕದಿನ ಪಂದ್ಯವನ್ನಾಡಿದ ಮೊದಲ ಬ್ಯಾಟ್ಸ್​ಮನ್ ಆಗಿದ್ದಾರೆ.

 First published: