ಗೇಲ್- ರಸೆಲ್ ಇಲ್ಲದ ವೆಸ್ಟ್​ ಇಂಡೀಸ್; ಭಾರತ ವಿರುದ್ಧದ ಸರಣಿಗೆ ಕೆರಿಬಿಯನ್ ತಂಡ ಪ್ರಕಟ!

ಕೀರೊನ್ ಪೊಲಾರ್ಡ್​ ಏಕದಿನ ಹಾಗೂ ಟಿ-20 ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಫಾಬಿನ್ ಅಲೆನ್ ಇಂಜುರಿಯಿಂದ ಗುಣಮುಖರಾಗಿದ್ದು ತಂಡ ಸೇರಿಕೊಂಡಿದ್ದಾರೆ.

ಅಲ್ಲದೆ ಕ್ರಿಸ್ ಗೇಲ್, ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಸುನಿಲ್ ನರೇನ್ ನಂತಹ ಅನುಭವಿ ಆಟಗಾರರು ರಾಷ್ಟ್ರೀಯ ತಂಡದಿಂದ ಹೊರಗುಳಿದು,  ಐಪಿಎಲ್​, ಬಿಗ್ ಬ್ಯಾಷ್ ಲೀಗ್, ಬಿಪಿಎಲ್, ಪಿಎಸ್​ಎಲ್​ನಂತಹ ಟೂರ್ನಿಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ.

ಅಲ್ಲದೆ ಕ್ರಿಸ್ ಗೇಲ್, ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಸುನಿಲ್ ನರೇನ್ ನಂತಹ ಅನುಭವಿ ಆಟಗಾರರು ರಾಷ್ಟ್ರೀಯ ತಂಡದಿಂದ ಹೊರಗುಳಿದು, ಐಪಿಎಲ್​, ಬಿಗ್ ಬ್ಯಾಷ್ ಲೀಗ್, ಬಿಪಿಎಲ್, ಪಿಎಸ್​ಎಲ್​ನಂತಹ ಟೂರ್ನಿಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ.

  • Share this:
ಬೆಂಗಳೂರು (ನ. 29): ವೆಸ್ಟ್​ ಇಂಡೀಸ್ ತಂಡ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು ಮೂರು ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿ ಆಡಲಿದೆ. ಡಿಸೆಂಬರ್ 6 ರಂದು ಮೊದಲ ಟಿ-20 ಪಂದ್ಯ ಆಯೋಜಿಸಲಾಗಿದೆ.

ಸದ್ಯ ಭಾರತ ವಿರುದ್ಧದ ಸರಣಿಗೆ ವೆಸ್ಟ್​ ಇಂಡೀಸ್ ತನ್ನ ತಂಡವನ್ನು ಪ್ರಕಟ ಮಾಡಿದೆ. ಆದರೆ, ಇಬ್ಬರು ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್ ಹಾಗೂ ಆ್ಯಂಡ್ರೊ ರಸೆಲ್ ಅನುಪಸ್ಥಿತಿಯಲ್ಲಿ ಕೆರಿಬಿಯನ್ನರು ಭಾರತಕ್ಕೆ ಬರಲಿದ್ದಾರೆ.

ಕೀರೊನ್ ಪೊಲಾರ್ಡ್​ ಏಕದಿನ ಹಾಗೂ ಟಿ-20 ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಫಾಬಿನ್ ಅಲೆನ್ ಇಂಜುರಿಯಿಂದ ಗುಣಮುಖರಾಗಿದ್ದು ತಂಡ ಸೇರಿಕೊಂಡಿದ್ದಾರೆ. ವೆಸ್ಟ್​ ಇಂಡೀಸ್ ಇತ್ತೀಚೆಗಷ್ಟೆ ಅಫ್ಘಾನಿಸ್ತಾನ ವಿರುದ್ಧ 3-0 ಯಿಂದ ಏಕದಿನ ಸರಣಿ ವಶಪಡಿಸಿಕೊಂಡರೆ, 1-2 ರಿಂದ ಟಿ-20 ಸರಣಿ ಸೋತಿತ್ತು.

ಆತ ಟೀಂ ಇಂಡಿಯಾದ ಬಹುಕಾಲದ ಸಮಸ್ಯೆಗೆ ಪರಿಹಾರ; ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ

ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದ ಬಗ್ಗೆ ಗೇಲ್ ಮಾತನಾಡಿದ್ದು, "ಆಯ್ಕೆಗಾರರು ನಾನು ಭಾರತ ಪ್ರವಾಸಕ್ಕೆ ತೆರಳಬೇಕು ಎಂದು ಬಯಸಿದ್ದರು. ಆದರೆ ನಾನು ಭಾರತದ ವಿರುದ್ಧ ಆಡುತ್ತಿಲ್ಲ. ಕ್ರಿಕೆಟ್​ನಿಂದ ಕೊಂಚ ವಿರಾಮ ತೆಗೆದುಕೊಂಡು 2020ರಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ20 ಗಳ ಪಂದ್ಯಗಳತ್ತ ಗಮನಹರಿಸಬೇಕಿದೆ" ಎಂದು ಹೇಳಿದ್ದಾರೆ. ಜೊತೆಗೆ ಬಿಗ್ ಬ್ಯಾಷ್​ ಲೀಗ್​ ಹಾಗೂ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲೂ ಆಡಲ್ಲ ಎಂದು ಗೇಲ್ ಹೇಳಿದ್ದಾರೆ.

 ಏಕದಿನ ಸರಣಿಗೆ ವೆಸ್ಟ್​ ಇಂಡೀಸ್ ತಂಡ: ಸುನಿಲ್ ಅಂಬ್ರಿಸ್, ಶಾಯ್ ಹೋಪ್, ಖೇರಿ ಪಿರ್ರೆ, ರಾಸ್ಟನ್ ಚೇಸ್, ಅಲ್ಜರಿ ಜೋಸೆಫ್, ಕೀರೊನ್ ಪೊಲಾರ್ಡ್​ (ನಾಯಕ), ಶೆಲ್ಡನ್ ಕಾಟ್ರೆಲ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ಎವಿನ್ ಲೆವಿಸ್, ರೊಮಾರಿಯೊ ಶೆಫೆರ್ಡ್​, ಜೇಸನ್ ಹೋಲ್ಡರ್, ಕೀಮೊ ಪೌಲ್, ಹೇಡನ್ ವಾಲ್ಶ್​​.

ಟಿ-20 ಸರಣಿ: ಫಾಬಿನ್ ಅಲೆನ್, ಬ್ರಾಂಡನ್ ಕಿಂಗ್, ದಿನೇಶ್ ರಾಮ್ದಿನ್, ಶೆಲ್ಡನ್ ಕಾಟ್ರೆಲ್, ಎವಿನ್ ಲೆವಿಸ್, ಶೆರ್ಫನ್ ರುಥರ್​ಫಾರ್ಡ್​, ಶಿಮ್ರೋನ್ ಹೆಟ್ಮೇರ್, ಖೇರಿ ಪಿರ್ರೆ, ಲೆಂಡ್ ಸಿಮಾನ್ಸ್​, ಜೇಸನ್ ಹೋಲ್ಡರ್, ಕೀರೊನ್ ಪೊಲಾರ್ಡ್​ (ನಾಯಕ), ಹೇಡನ್ ವಾಲ್ಶ್​, ಕೀಮೊ ಪೌಲ್, ನಿಕೋಲಸ್ ಪೂರನ್, ಕೆಸ್ರಿಕ್ ವಿಲಿಯಮ್ಸ್.

ಸ್ಯಾಮ್ಸನ್ ಅಲ್ಲ; ರೋಹಿತ್ ಜೊತೆ ಕಣಕ್ಕಿಳಿಯಲು ಈತನಿಗೆ ಸಮಯ ಬಂದಿದೆ; ಲಕ್ಷ್ಮಣ್ ಹೇಳಿದ್ದು ಯಾರನ್ನ?

ವೆಸ್ಟ್​ ಇಂಡೀಸ್ ವಿರುದ್ಧ ಭಾರತ ಮೂರು ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿ ಆಡಲಿದೆ. ಡಿಸೆಂಬರ್ 6 ರಂದು ಹೈದರಾಬಾದ್​ನಲ್ಲಿ ಮೊದಲ ಟಿ-20 ನಡೆಯಲಿದ್ದರೆ, ಡಿ. 8 ರಂದು ತಿರುವನಂತಪುರಂ ಎರಡನೇ ಪಂದ್ಯ ಹಾಗೂ ಅಂತಿಮ ಟಿ-20 ಡಿ. 11 ಕ್ಕೆ ಮುಂಬೈಯಲ್ಲಿ ನಿಗದಿ ಪಡಿಸಲಾಗಿದೆ.

ಇನ್ನು ಡಿ. 15 ರಂದು ಚೆನ್ನೈನಲ್ಲಿ ಮೊದಲ ಏಕದಿನ, ಡಿ. 18 ವಿಶಾಖಪಟ್ಟಣಂನಲ್ಲಿ 2ನೇ ಏಕದಿನ ಹಾಗೂ ಡಿ. 22 ರಂದು ಕತಕ್​ನಲ್ಲಿ ಮೂರನೇ ಏಕದಿನ ಪಂದ್ಯ ಆಯೋಜಿಸಲಾಗಿದೆ.

First published: