ನೂತನ ಸಾಧನೆಯ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ; 26 ವರ್ಷಗಳ ಹಿಂದಿನ ದಾಖಲೆ ಅಳಿಸಲಿರುವ ವಿರಾಟ್

Virat Kohli : ಈ ರನ್​ಗಳ ಗುಚ್ಛಕ್ಕೆ ಕೇವಲ 19 ರನ್ ಸೇರ್ಪಡೆಯಾದರೆ ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ. ಇನ್ನು ಇದುವೆರೆಗೂ ಕೆರಿಬಿಯನ್ ತಂಡದ ವಿರುದ್ಧ ಯಾವುದೇ ಆಟಗಾರ 2 ಸಾವಿರ ರನ್​ಗಳ ಗಡಿದಾಟಿಲ್ಲ.

zahir | news18-kannada
Updated:August 11, 2019, 12:59 PM IST
ನೂತನ ಸಾಧನೆಯ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ; 26 ವರ್ಷಗಳ ಹಿಂದಿನ ದಾಖಲೆ ಅಳಿಸಲಿರುವ ವಿರಾಟ್
ವಿರಾಟ್​ ಕೊಹ್ಲಿ
  • Share this:
ಬೆಂಗಳೂರು (ಆ. 11): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆ ನಾಗಾಲೋಟ ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಮುಂದುವರೆಯಲಿದೆ. ಕೆರಿಬಿಯನ್ ವಿರುದ್ಧ ಅತೀ ಹೆಚ್ಚು ರನ್​ ಬಾರಿಸಿದ ಆಟಗಾರನೆಂಬ ಸಾಧನೆ ಮೆರೆಯಲು ಕ್ಯಾಪ್ಟನ್ ಕೊಹ್ಲಿಗೆ ಬೇಕಿರುವುದು ಕೇವಲ 19 ರನ್​ಗಳು ಮಾತ್ರ.

ಇಂದು ಟ್ರಿನಿಡಾದ ಕ್ವೀನ್ಸ್​ ಪಾರ್ಕ್​ನಲ್ಲಿ ಎರಡನೇ ಪಂದ್ಯ ನಡೆಯಲಿದ್ದು, ಕೊಹ್ಲಿ ಹೊಸ ದಾಖಲೆ ಸೃಷ್ಟಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ವೆಸ್ಟ್​ ಇಂಡೀಸ್ ವಿರುದ್ಧ ಇದುವರೆಗೆ ಅತೀ ಹೆಚ್ಚು ರನ್​ ಬಾರಿಸಿದ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಹೆಸರಿನಲ್ಲಿದೆ. 1975 ಮತ್ತು 1996ರ ನಡುವೆ ಪಾಕ್​ ತಂಡವನ್ನು ಪ್ರತಿನಿಧಿಸಿದ್ದ ಮಿಯಾಂದಾದ್​ ಅವರ ರನ್​ ದಾಖಲೆಯನ್ನು ದಾಟಲು ವಿಶ್ವದ ಯಾವುದೇ ಆಟಗಾರನಿಗೆ ಇದುವರೆಗೂ ಸಾಧ್ಯವಾಗಿರಲಿಲ್ಲ. ಇದೀಗ ರನ್ ಮಿಷಿನ್ ಇಂತಹದೊಂದು ಸರ್ವಶ್ರೇಷ್ಠ ದಾಖಲೆಯ ಹೊಸ್ತಿಲಲ್ಲಿದ್ದಾರೆ.

GT20 Canada 2019: ಪಾಕ್ ಕ್ರಿಕೆಟಿಗ ಮಲಿಕ್​ರಿಂದ ಸ್ಟೇಡಿಯಂ ಕಿಟಕಿ ಗಾಜುಗಳ ಪುಡಿಪುಡಿ; ವಿಡಿಯೋ ವೈರಲ್

ವೆಸ್ಟ್ ಇಂಡೀಸ್ ವಿರುದ್ಧ ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಮಿಯಾಂದಾದ್ 64 ಇನ್ನಿಂಗ್ಸ್‌ಗಳಲ್ಲಿ 1930 ರನ್ ಗಳಿಸಿದ್ದಾರೆ. ಈ ದಾಖಲೆಯನ್ನು ಬೆನ್ನತ್ತುತ್ತಿರುವ ಟೀಂ ಇಂಡಿಯಾ ನಾಯಕ ಸದ್ಯ 33 ಇನ್ನಿಂಗ್ಸ್‌ಗಳಲ್ಲಿ 1912 ರನ್ ಗಳಿಸಿದ್ದಾರೆ.

ಈ ರನ್​ಗಳ ಗುಚ್ಛಕ್ಕೆ ಕೇವಲ 19 ರನ್ ಸೇರ್ಪಡೆಯಾದರೆ ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ. ಇನ್ನು ಇದುವೆರೆಗೂ ಕೆರಿಬಿಯನ್ ತಂಡದ ವಿರುದ್ಧ ಯಾವುದೇ ಆಟಗಾರ 2 ಸಾವಿರ ರನ್​ಗಳ ಗಡಿದಾಟಿಲ್ಲ. ಇಂತಹದೊಂದು ಅಪರೂಪದ ದಾಖಲೆ ಬರೆಯುವ ಅವಕಾಶ ಕೂಡ ಕೊಹ್ಲಿ ಮುಂದಿದೆ.

First published:August 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...