ಬೆಂಗಳೂರು (ಡಿ. 14): ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಭರ್ಜರಿಯಾಗಿ ಆರಂಭಿಸಿರುವ ಟೀಂ ಇಂಡಿಯಾ ಟಿ-20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಸದ್ಯ ಏಕದಿನ ಸರಣಿಗೆ ಸಜ್ಜಾಗಿರುವ ಕೊಹ್ಲಿ ಪಡೆ ನಾಳೆ ಮೊದಲ ಪಂದ್ಯವನ್ನು ಆಡಲಿದೆ.
ಈಗಾಗಲೇ ಭರ್ಜರಿ ಅಭ್ಯಾಸದಲ್ಲಿ ಉಭಯ ತಂಡಗಳು ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದೆ. ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆಗಳಾಗಿವೆ. ಶಿಖರ್ ಧವನ್ ಇಂಜುರಿಯಿಂದ ಗುಣಮುಖರಾಗದ ಕಾರಣ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.
ಭುವನೇಶ್ವರ್ ಕುಮಾರ್ ಸ್ನಾಯು ಸೆಳೆತಕ್ಕೊಳಗಾಗಿರುವ ಕಾರಣ ಶಾರ್ದೂಲ್ ಠಾಕೂರ್ ತಂಡ ಸೇರಿಕೊಂಡಿದ್ದಾರೆ.
IPL: ಆರ್ಸಿಬಿ ಟ್ವಿಟ್ಟರ್ ಖಾತೆಯಲ್ಲಿ ಖರೀದಿಸಲಿರುವ ಆಟಗಾರರ ಬಗ್ಗೆ ಸುಳಿವು; ಯಾರೆಲ್ಲಾ ಗೊತ್ತಾ?
ಭಾರತ ತಂಡದಲ್ಲಿ ಓಪನರ್ ಆಗಿ ರೋಹಿತ್ ಶರ್ಮಾ ಜೊತೆ ಕೆ ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಮಯಾಂಕ್ ಅಗರ್ವಾಲ್ ಬೆಂಚ್ ಕಾಯಬೇಕಾಗಿದೆ. ಕೇದರ್ ಜಾಧವ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಬಹುದು.
Rishabh Pant: ಸ್ಯಾಂಡಲ್ವುಡ್ ನಟಿಯೊಂದಿಗೆ ಡೇಟಿಂಗ್ನಲ್ಲಿದ್ದಾರೆ ರಿಷಭ್ ಪಂತ್? ಇತ್ತ ವೆಸ್ಟ್ ಇಂಡೀಸ್ ತಂಡವನ್ನು ಕೀರೊನ್ ಪೊಲಾರ್ಡ್ ಮುನ್ನಡೆಸುತ್ತಿದ್ದು, ಶಾಯ್ ಹೋಪ್ ತಂಡ ಸೇರಿಕೊಂಡಿದ್ದಾರೆ. ಅಲ್ಲದೆ ಸುನಿಲ್ ಅಂಬ್ರಿಸ್, ನಿಕೋಲಸ್ ಪೂರನ್, ಶ್ರಿಮ್ರೋನ್ ಹೆಟ್ಮೇರ್ರಂತಹ ಅಪಾಯಕಾರಿ ಆಟಗಾರರು ತಂಡದಲ್ಲಿದ್ದಾರೆ.
ವಿಂಡೀಸ್ ಪರ ಎವಿನ್ ಲೆವಿಸ್ ಇಂಜುರಿಗೆ ತುತ್ತಾಗಿರುವ ಕಾರಣ ಶಾಯ್ ಹೋಪ್ ಜೊತೆ ಸುನಿಲ್ ಅಂಬ್ರಿಸ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಮೊದಲ ಏಕದಿನ ಪಂದ್ಯ ನಾಳೆ (ಡಿ. 15) ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 2 ಗಂಟೆಗೆ ಪಂದ್ಯ ಆರಂಭವಾಗಲಿದೆ.
ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ 1 ಹಾಗೂ ಸ್ಟಾರ್ ಸ್ಪೋರ್ಟ್ಸ್ 1 HD ಯಲ್ಲಿ ವೀಕ್ಷಿಸಬಹುದು. ಜೊತೆಗೆ ಆನ್ಲೈನ್ನಲ್ಲಿ ಹಾಟ್ಸ್ಟಾರ್ ಮೂಲಕ ಲೈವ್ ನೋಡಬಹುದು.
ಉಭಯ ತಂಡಗಳು ಈವರೆಗೆ ಒಟ್ಟು 130 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ 62 ರಲ್ಲಿ ಜಯ ಸಾಧಿಸಿದರೆ, ವೆಸ್ಟ್ ಇಂಡೀಸ್ ಕೂಡ 62 ರನ್ ಪಂದ್ಯ ಗೆದ್ದಿದೆ. ಎರಡು ಪಂದ್ಯ ಟೈ ಆಗಿದ್ದರೆ, 4 ಪಂದ್ಯ ಫಲಿತಾಂಶ ವಿಲ್ಲದೆ ಅಂತ್ಯಕಂಡಿದೆ.
IPL: ಐಪಿಎಲ್ ಹರಾಜಿನಲ್ಲಿ 14 ವರ್ಷದ ಪೋರ; ಈತನನ್ನು ಖರೀದಿಸುವ ತಂಡ ಯಾವುದು ಗೊತ್ತಾ?
ಈ ಪಿಚ್ನಲ್ಲಿ ಚೇಸಿಂಗ್ ಮಾಡಿದ ತಂಡ 7 ಬಾರಿ ಜಯ ಸಾಧಿಸಿದರೆ, 13 ಬಾರಿ ಸೋಲು ಕಂಡಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯಕಂಡಿದೆ. ಚೆನ್ನೈನಲ್ಲಿ ಬೆಳಗಿನ ಹೊತ್ತು ಮಳೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯಾದರು ವರುಣನ ಕಾಟ ಪಂದ್ಯಕ್ಕೆ ಆಗುವುದು ಅನುಮಾನ ಎನ್ನಲಾಗಿದೆ.
ಭಾರತ ಆಡುವ ಸಂಭಾವ್ಯ XI ಪಟ್ಟಿ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ),
ಕೆ ಎಲ್ ರಾಹುಲ್, ಶ್ರೇಯಸ್ ಐಯ್ಯರ್, ಕೇದರ್ ಜಾಧವ್, ರಿಷಭ್ ಪಂತ್, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಲ್, ದೀಪಕ್ ಚಹರ್, ಮೊಹಮ್ಮದ್ ಶಮಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ