ಗುವಾಹಟಿ: ಟೀಂ ಇಂಡಿಯಾ ಹೊಸ ವರ್ಷದ ಮೊದಲ ಸರಣಿಗೆ ಶ್ರೀಲಂಕಾ ವಿರುದ್ಧ ಸಜ್ಜಾಗುತ್ತಿದೆ. ಇಲ್ಲಿನ ಬರ್ಸಾಪಾರ ಕ್ರೀಡಾಂಗಣದಲ್ಲಿ ಇಂದು ಮೊದಲ ಟಿ-20 ನಡೆಯಲಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಈ ನಡುವೆ
ಟೀಂ ಇಂಡಿಯಾ ಆಟಗಾರರು ಜಿಮ್ನಲ್ಲಿ ಬೆವರು ಹರಿಸುತ್ತಿರುವಾಗ ನಡೆದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಜಿಮ್ ಕೋಚ್ಗೆ ರಿಷಭ್ ಪಂತ್ ಹಾಗೂ ಯಜುವೇಂದ್ರ ಚಹಾಲ್ ಹೊಡೆಯುತ್ತಿರುವ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.
ಈ ತಮಾಷೆಯ ವಿಡಿಯೋವನ್ನು ರಿಷಭ್ ಪಂತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೊದಲಿಗೆ ಪಂತ್ ಅವರು ಕೋಚ್ ನಿಕ್ ವೆಬ್ ಅವರೊಂದಿಗೆ ಪಂಚಿಂಗ್ ಅಭ್ಯಾಸ ನಡೆಸುತ್ತಿರುತ್ತಾರೆ. ನಂತರ ಚಹಾಲ್ ಜೊತೆಗೆ ಕೋಚ್ ಪಂಚಿಂಗ್ ನಡೆಸುವ ವೇಳೆ ಪಂತ್ ಹಿಂದಿನಿಂದ ಬಂದು ನಿಕ್ ಅವರನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ.
Ranji Trophy: ಪ್ರಬಲ ಮುಂಬೈ ವಿರುದ್ಧ ಕರ್ನಾಟಕಕ್ಕೆ 5 ವಿಕೆಟ್ ಭರ್ಜರಿ ಜಯ
ಈ ಸಂದರ್ಭ ಚಹಾಲ್ ಕೋಚ್ ನಿಕ್ ಬೆನ್ನಿಗೆ ಪಂಚ್ ಮಾಡುತ್ತಾರೆ. ಅಲ್ಲದೆ ಹಿಡಿದುಕೊಂಡಿದ್ದ ಪಂತ್ ಅವರಿಗೂ ತಮಾಷೆಯಾಗಿ ಎರಡು ಪಂಚ್ ಕೊಡುತ್ತಾರೆ. ಅಲ್ಲೆ ಇದ್ದ ಸಂಜು ಸ್ಯಾಮ್ಸನ್ ಕೂಡ ಹೊಡೆಯಲು ಸಹಾಯ ಮಾಡುತ್ತಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಇಂದಿನ ಮೊದಲ ಟಿ-20 ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ಅಭ್ಯಾಸ ನಡೆಸುತ್ತಿದೆ. ಭಾರತಕ್ಕಿದು ಪ್ರಮುಖ ಪಂದ್ಯವಾಗಿದ್ದು ತನ್ನ ಹಳೆಯ ದಾಖಲೆಯನ್ನು ಮುಂದುವರೆಸುವ ತವಕದಲ್ಲಿದೆ.
ಕಳೆದ 12 ವರ್ಷಗಳಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಒಂದೇ ಒಂದು ಸರಣಿಯಲ್ಲಿ ಸೋಲು ಅನುಭವಿಸಲಿಲ್ಲ. 2008 ಆಗಸ್ಟ್ ಬಳಿಕ ಟೆಸ್ಟ್, ಏಕದಿನ ಹಾಗೂ ಟಿ-20 ಸೇರಿ ಭಾರತ- ಲಂಕಾ ಒಟ್ಟು 59 ಪಂದ್ಯಗಳನ್ನಾಡಿದೆ. ಇದರಲ್ಲಿ ಭಾರತ 44 ಪಂದ್ಯಗಳಲ್ಲಿ ಗೆದ್ದರೆ, ಕೇವಲ 10 ರಲ್ಲಿ ಮಾತ್ರ ಸೋಲುಂಡಿದೆ.
Natasa Stankovic: ಬಿಕಿನಿಯಲ್ಲಿ ಸೆನ್ಸೇಷನ್ ಸೃಷ್ಟಿಸಿದ ಹಾರ್ದಿಕ್ ಪಾಂಡ್ಯ ಪ್ರೇಯಸಿ ನತಾಶಾ
12 ವರ್ಷಗಳ ಸರಣಿಯಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ 16-0 ಅಂತರದಿಂದ ಮೇಲುಗೈ ಸಾಧಿಸಿದೆ. ವಿರಾಟ್ ಕೊಹ್ಲಿ ಕಾಲಿಟ್ಟ ಬಳಿಕವಂತು ಭಾರತ ತಂಡ ಶ್ರೀಲಂಕಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. ಆಡಿದ 7 ಸರಣಿಗಳಲ್ಲಿ ಏಳನ್ನೂ ಗೆದ್ದು ಬೀಗಿದೆ. ಆಡಿದ 6 ಟಿ-20 ಪಂದ್ಯಗಳಲ್ಲಿ 5 ರಲ್ಲಿ ಗೆದ್ದರೆ ಒಂದು ಡ್ರಾ ಆಗಿದೆ.
ಅಸ್ಸಾಂ ಸ್ಟೇಡಿಯಂನಲ್ಲಿ 39,500 ಜನರು ಕುಳಿತು ಪಂದ್ಯವನ್ನು ನೋಡುವ ಸಾಮರ್ಥ್ಯ ಹೊಂದಿದೆ. ಈ ಪೈಕಿ ಈಗಾಗಲೇ ಬಹುತೇಕ ಟಿಕೆಟ್ಗಳು ಮಾರಾಟವಾಗಿದೆ. ಹಾಗಾಗಿ ಈ ಹೈವೋಲ್ಟೇಜ್ ಪಂದ್ಯ ವೀಕ್ಷಣೆಗೆ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿಕೊಳ್ಳಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ