India vs Sri Lanka Results: ಶ್ರೀಲಂಕಾ ವಿರುದ್ಧ ಸೋತ ಟೀಂ ಇಂಡಿಯಾ; ಏಷ್ಯಾ ಕಪ್​ನಿಂದಲೇ ಹೊರಕ್ಕೆ?

ಆದರೆ ಈ ಮೊತ್ತವನ್ನು ಶ್ರೀಲಂಕಾ ತಂಡ 4 ವಿಕೆಟ್ ನಷ್ಟಕ್ಕೆ 19.4 ಓವರ್​ಗಳಲ್ಲಿ ರನ್ ಪೇರಿಸಿ ಜಯ ಗಳಿಸಿದೆ. 

ರೋಹಿತ್ ಶರ್ಮಾ

ರೋಹಿತ್ ಶರ್ಮಾ

 • Share this:
  ಏಷ್ಯಾ ಕಪ್​ನ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ (India vs Sri Lanka Results) ಭಾರತ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma)  72 ರನ್​ ಬಾರಿಸಿ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್​ ಕಲೆಹಾಕಿತ್ತು. ಭಾರತದ ಪರ ಸೂರ್ಯಕುಮಾರ್ ಯಾದವ್ 34 ರನ್ ಕೊಡುಗೆ ನೀಡಿದರು. ಈ ಮೂಲಕ 174 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನೇ ಟಾರ್ಗೆಟ್ ನೀಡಿತ್ತು. ಆದರೆ ಈ ಮೊತ್ತವನ್ನು ಶ್ರೀಲಂಕಾ ತಂಡ 4 ವಿಕೆಟ್ ನಷ್ಟಕ್ಕೆ 19.4 ಓವರ್​ಗಳಲ್ಲಿ ರನ್ ಪೇರಿಸಿ ಜಯ ಗಳಿಸಿದೆ. 

  ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸುವ ಮೂಲಕ ಏಷ್ಯಾ ಕಪ್​ನಿಂದ ಬಹುತೇಕ ಹೊರಬಿದ್ದಂತೆಯೇ ಆಗಿದೆ. ಈ ಸರಣಿಯ ಮುಂದಿನ ಪಂದ್ಯಗಳಲ್ಲಿ ಭಾರತ ತಂಡ ಗೆದ್ದರೂ ಸಹ ಇತರ ತಂಡಗಳ ಗೆಲುವು ಸೋಲಿನ ಆಧಾರದ ಮೇಲೆ ಭಾರತ ಮುಂದಿನ ಹಂತಕ್ಕೆ ಏರುವ ಸಾಧ್ಯತೆ ನಿರ್ಣಾಯಕವಾಗಿರುತ್ತದೆ.

  ಶ್ರೀಲಂಕಾ ಆಟ ಹೀಗಿತ್ತು

  ಶ್ರೀಲಂಕಾ ಪರ ದಿಲ್ಶನ್ ಮಧುಶಂಕ (3/24), ಚಮಿಕಾ ಕರುಣರತ್ನೆ (2/27) ಮತ್ತು ದಸುನ್ ಶನಕ (2/26) ಪ್ರಮುಖ ವಿಕೆಟ್ ಪಡೆದರು.

  ಶ್ರೀಲಂಕಾt ತಂಡದ ಆಟವೂ ಮೊದಲಿಂದಲೂ ಕಳಪೆಯಾಗಿರಲಿಲ್ಲ ಪಾತುಂ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್  ಮೊದಲ ವಿಕೆಟ್​ಗೆ 97 ರನ್ ಪೇರಿಸಿದ್ದರು ಆದರೂ ಟೀಮ್ ಇಂಡಿಯಾವನ್ನು ಕಟ್ಟಿಹಾಕಿದ್ದರು. ಕೊನೆಯ ಓವರ್​ನಲ್ಲಿ ಶ್ರೀಲಂಕಾಗೆ ಕೇವಲ 7 ರನ್ ಬೇಕಿತ್ತು. ಆ ಓವರ್ ಬೌಲ್ ಮಾಡಿದ ಅರ್ಷದೀಪ್ ಸಿಂಗ್ ಶ್ರೀಲಂಕಾ ಬ್ಯಾಟರ್​ಗಳಾಧ  ಭಾನುಕಾ ರಾಜಪಕ್ಸೆ ಹಾಗೂ ದುಸನ್ ಶಾನಕರಿಗೆ ಸಮಸ್ಯೆ ತಂದೊಡ್ಡಿದರು. ಆದರೂ ಶ್ರೀಲಂಕಾ ಬ್ಯಾಟರ್​ಗಳು 6 ವಿಕೆಟ್​ಗಳ ಜಯಗಳಿಸುವ ಆಟ ಆಡಿದರು.

  ಏಷ್ಯಾ ಕಪ್​ನ (Asia Cup 2022) ಬಹು ರೋಮಾಂಚಕ ಭಾರತ vs ಶ್ರೀಲಂಕಾ ಪಂದ್ಯದಲ್ಲಿ (India vs Sri Lanka) ಭಾರತ 8 ವಿಕೆಟ್‌ಗೆ 173 ರನ್ ಗಳಿಸಿತ್ತು. ರೋಹಿತ್ ಶರ್ಮಾ ಅವರ 41 ಎಸೆತಗಳಲ್ಲಿ 72 ರನ್ ಮೂಲಕ ಭಾರತ ಸ್ಪರ್ಧಾತ್ಮಕ ಸವಾಲಿನ ಮೊತ್ತವನ್ನು ದಾಖಲಿಸಲು ಸಾಧ್ಯವಾಗಿದೆ. ರೋಹಿತ್ ಶರ್ಮಾ (Rohit Sharma) ಮೊದಲು ಕೇವಲ 32 ಎಸೆತಗಳಲ್ಲಿ ತಮ್ಮ 28 ನೇ T20I ಅರ್ಧಶತಕ ಗಳಿಸಿದರು. ಅಲ್ಲದೇ ಶ್ರೀಲಂಕಾದ ಬೌಲರ್‌ಗಳಿಗೆ ಬೆವರಿಳಿಸುವಂತೆ ಆಟವಾಡಿದರು. ಈ ಅರ್ಧಶತಕದ ಮೂಲಕ ರೋಹಿತ್ ಏಷ್ಯಾ ಕಪ್‌ನಲ್ಲಿ ಎರಡು ಅದ್ಭುತ ದಾಖಲೆಗಳನ್ನು ಮುರಿದಿದ್ದಾರೆ. ಈ ಹಿಂದೆ ಕ್ರಮವಾಗಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಶಾಹಿದ್ ಅಫ್ರಿದಿ ಈ ದಾಖಲೆ ಮಾಡಿದ್ದರು.

  ಇದನ್ನೂ ಓದಿ: Virat Kohli: ಧೋನಿ ಒಬ್ರಿಗೆ ನನ್ನ ಮೇಲೆ ಕಾಳಜಿ ಇರೋದು ಅಂತ ಸುಳ್ಳು ಹೇಳಿದ್ರಾ? ವಿರಾಟ್​ಗೆ ಬಿಸಿಸಿಐ ಕ್ಲಾಸ್​!

  ರೋಹಿತ್ಕೂ ಶರ್ಮಾ ಸಚಿನ್‌ ತೆಂಡೂಲ್ಕರ್ ಅವರ ಸರಿಸಮನಾಗಿ ಮತ್ತೊಂದು ಏಷ್ಯಾಕಪ್ ಪಟ್ಟಿಯಲ್ಲಿ ಸ್ಥಾನ ಪಡೆದರು. 72 ರನ್‌ಗಳ ನಾಕ್ ಏಷ್ಯಾ ಕಪ್ ಇತಿಹಾಸದಲ್ಲಿ ಅವರದ್ದು ಒಂಬತ್ತನೇ ಅರ್ಧಶತಕವಾಗಿದೆ.

  ಭಾರತದ ಪ್ಲೇಯಿಂಗ್ XI ಹೀಗಿತ್ತು:
  ಕೆಎಲ್ ರಾಹುಲ್, ರೋಹಿತ್ ಶರ್ಮಾ(ಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆ), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್

  ಶ್ರೀಲಂಕಾದ ಪ್ಲೇಯಿಂಗ್ XI ಹೀಗಿತ್ತು:
  ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (WK), ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶಾನಕ (ಸಿ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ
  Published by:guruganesh bhat
  First published: