ಭಾರತ-ಶ್ರೀಲಂಕಾ ನಡುವಣ ಸೀಮಿತ ಓವರ್ಗಳ ಸರಣಿಗೆ ಕೊರೋನಾತಂಕ ಎದುರಾಗಿದೆ. ಸರಣಿ ಆರಂಭಕ್ಕೆ ಕೇವಲ 2 ದಿನಗಳಿರುವಾಗ ಅತ್ತ ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಕೊರೋನಾ ಪಾಸಿಟಿವ್ ಆಗಿದ್ದಾರೆ. ಈ ವರದಿ ಬೆನ್ನಲ್ಲೇ ಇದೀಗ ಶ್ರೀಲಂಕಾ ತಂಡದ ಡೇಟಾ ಅನಾಲಿಸ್ಟ್ ಜಿ.ಟಿ ನಿರೋಶನ್ ಅವರಲ್ಲೂ ಕೂಡ ಸೋಂಕಿನ ಲಕ್ಷ್ಮಣಗಳು ಕಂಡು ಬಂದಿವೆ. ಹೀಗಾಗಿ ಜುಲೈ 13 ರಿಂದ ಆರಂಭವಾಗಬೇಕಿದ್ದ ಸರಣಿಯನ್ನು ಜುಲೈ 17ಕ್ಕೆ ಮುಂದೂಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಇಂಗ್ಲೆಂಡ್ ಸರಣಿ ಮುಗಿಸಿ ಹಿಂದಿರುಗಿದ ಶ್ರೀಲಂಕಾದ ಎಲ್ಲಾ ಆಟಗಾರರ ಕೊರೋನಾ ಮೊದಲ ಟೆಸ್ಟ್ ಫಲಿತಾಂಶ ನೆಗೆಟಿವ್ ಬಂದಿತ್ತು. ಇದೀಗ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಸಿಬ್ಬಂದಿಯಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿರುವುದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆತಂಕ ಹೆಚ್ಚಿಸಿದೆ. ಸದ್ಯ ಎಲ್ಲಾ ಆಟಗಾರರು ಕ್ವಾರಂಟೈನ್ನಲ್ಲಿದ್ದು, ಆಟಗಾರರನ್ನು ಮತ್ತೊಮ್ಮೆ ಕೊರೋನಾ ಟೆಸ್ಟ್ಗೆ ಒಳಪಡಿಸುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ವಾರ ಸರಣಿಯನ್ನು ಆರಂಭಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ.
ಅದರಂತೆ ಜುಲೈ ರಿಂದ ಆರಂಭವಾಗಬೇಕಿದ್ದ ಏಕದಿನ ಸರಣಿಯು ಜುಲೈ 17 ರಿಂದ ಶುರುವಾಗಲಿದೆ. ಅದರಂತೆ 17, 19 ಹಾಗೂ 21 ರಂದು ಏಕದಿನ ಪಂದ್ಯಗಳು ನಡೆಯಲಿವೆ. ಹಾಗೆಯೇ ಜುಲೈ 21 ರಿಂದ ಶುರುವಾಗಬೇಕಿದ್ದ ಟಿ20 ಸರಣಿ 24 ರಿಂದ ಆರಂಭವಾಗಲಿದೆ. ಮೊದಲ ಟಿ20 ಪಂದ್ಯವು ಜುಲೈ 24ಕ್ಕೆ ನಡೆಯಲಿದ್ದು, 2ನೇ ಪಂದ್ಯವು 25 ಕ್ಕೆ ಹಾಗೂ ಜುಲೈ 27 ಕ್ಕೆ ಮೂರನೇ ಟಿ20 ಪಂದ್ಯವನ್ನು ಆಯೋಜಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ