IND vs SL: ಭಾರತ- ಶ್ರೀಲಂಕಾ ಟಿ-20 ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್!

ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆಯಂತೆ. ಗುವಾಹಟಿ ಬೆಳವಣಿಗೆ ಬಗ್ಗೆ ಬಿಸಿಸಿಐ ಹಾಗೂ ಅಸ್ಸಾಂ ಕ್ರಿಕೆಟ್‌ ಸಂಸ್ಥೆ ಜಂಟಿಯಾಗಿ ತೀವ್ರ ನಿಗಾ ವಹಿಸಿವೆ.

Vinay Bhat | news18-kannada
Updated:January 4, 2020, 10:39 AM IST
IND vs SL: ಭಾರತ- ಶ್ರೀಲಂಕಾ ಟಿ-20 ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್!
ಟೀಂ ಇಂಡಿಯಾ ಅಭಿಮಾನಿಗಳು ಮತ್ತು ವಿರಾಟ್ ಕೊಹ್ಲಿ
  • Share this:
ಬೆಂಗಳೂರು (ಜ. 04): ಭಾರತ ಹಾಗೂ ಶ್ರೀಲಂಕಾ ನಡುವಣ ಟಿ-20 ಸರಣಿ ಆರಂಭಕ್ಕೆ ಕೇವಲ ಒಂದು ದಿನವಷ್ಟೆ ಬಾಕಿಯಿದೆ. ನಾಳೆ ಗುವಾಹಟಿಯ ಬರ್ಸಾಪಾರ ಸ್ಟೇಡಿಯಂನಲ್ಲಿ ಮೊದಲ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಭರ್ಜರಿ ಅಭ್ಯಾಸ ನಡೆಸುತ್ತಿದೆ. ಆದರೆ, ಪಂದ್ಯ ವೀಕ್ಷಿಸಲು ಸ್ಟೇಡಿಯಂಗೆ ಬರುವ ಪ್ರೇಕ್ಷಕರಿಗೆ ಬೇಸರದ ಸಂಗತಿ ಹೊರಬಿದ್ದಿದೆ.

ಸ್ಟೇಡಿಯಂ ಒಳಗಡೆಗೆ ಪ್ರೇಕ್ಷಕರು ಯಾವುದೆ ರೀತಿಯ ಪೋಸ್ಟರ್, ಬ್ಯಾನರ್ ಅಥವಾ ಸಂದೇಶ ಇರುವಂತಹ ಬೋರ್ಡ್​ಗಳನ್ನು ತರುವಂತಿಲ್ಲ, ಇದನ್ನು ನಿಷೇಧಿಸಲಾಗಿದೆ ಎಂದು ಅಸ್ಸಾಂ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ದೇವಜಿತ್ ಸೈಕಿಯ ತಿಳಿಸಿದ್ದಾರೆ.

India vs Sri Lanka: No posters, banners message boards allowed during IND vs SL 1st T20I in Guwahati
ಟೀಂ ಇಂಡಿಯಾ ಅಭಿಮಾನಿಗಳು


India vs Sri Lanka: ಕೊಹ್ಲಿ ಕಾಲಿಟ್ಟ ಬಳಿಕ ನಡೆದ ಭಾರತ- ಲಂಕಾ ಪಂದ್ಯ ಅಚ್ಚರಿ ಮೂಡಿಸುವಂತಿದೆ!

ಅಲ್ಲದೆ 4 ಮತ್ತು 6 ಬೋರ್ಡ್​ಗಳನ್ನು ಕೂಡ ತರುವಂತಿಲ್ಲ ಎಂದು ಹೇಳಿದ್ದು, ಮಾರ್ಕರ್ ಪೆನ್ ಅನ್ನು ಕೂಡ ಸ್ಟೇಡಿಯಂ ಒಳಗಡೆ ನಿಷೇಧಿಸಲಾಗಿದೆ. ಪುರುಷರು ಪರ್ಸ್​​, ಮಹಿಳೆಯರು ಹ್ಯಾಂಡ್​ಬ್ಯಾಗ್, ಮೊಬೈಲ್ ಮತ್ತು ವಾಹನದ ಕೀ ಅನ್ನು ಮಾತ್ರ ಸ್ಟೇಡಿಯಂ ಒಳಗೆ ತೆಗೆದುಕೊಂಡು ಹೋಗಬಹುದು.

ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆಯಂತೆ. ಗುವಾಹಟಿ ಬೆಳವಣಿಗೆ ಬಗ್ಗೆ ಬಿಸಿಸಿಐ ಹಾಗೂ ಅಸ್ಸಾಂ ಕ್ರಿಕೆಟ್‌ ಸಂಸ್ಥೆ ಜಂಟಿಯಾಗಿ ತೀವ್ರ ನಿಗಾ ವಹಿಸಿವೆ.

''ಕ್ರೀಡಾಂಗಣವನ್ನು ಸಂಪೂರ್ಣವಾಗಿ ಪೊಲೀಸರ ನಿಯಂತ್ರಣಕ್ಕೆ ನೀಡಲಾಗಿದೆ. ರಾಜಧಾನಿಯ ಪರಿಸ್ಥಿತಿ ತಿಳಿಯಾಗಿದ್ದು, ಇನ್ನೆರಡು ದಿನಗಳಲ್ಲಿಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ'' ಎಂದು ಅಸ್ಸಾಂ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ರೊಮೆನ್‌ ದತ್ತಾ ಹೇಳಿದ್ದಾರೆ.Virat Kohli: ಹೊಸ ವರ್ಷಕ್ಕೆ ಹೊಸ ಹೇರ್​ ಸ್ಟೈಲ್​ನಲ್ಲಿ ಮಿಂಚಿದ ಕಿಂಗ್ ಕೊಹ್ಲಿ!

ಅಸ್ಸಾಂ ಸ್ಟೇಡಿಯಂನಲ್ಲಿ 39,500 ಜನರು ಕುಳಿತು ಪಂದ್ಯವನ್ನು ನೋಡುವ ಸಾಮರ್ಥ್ಯ ಹೊಂದಿದೆ. ಈ ಪೈಕಿ ಈಗಾಗಲೇ ಬಹುತೇಕ ಟಿಕೆಟ್‌ಗಳು ಮಾರಾಟವಾಗಿದೆ. ಹಾಗಾಗಿ ಈ ಹೈವೋಲ್ಟೇಜ್ ಪಂದ್ಯ ವೀಕ್ಷಣೆಗೆ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿಕೊಳ್ಳಲಿದೆ ಎಂಬುದರಲ್ಲಿ ಅನುಮಾನವಿಲ್ಲ.

ಇನ್ನು ಈ ಸರಣಿ ಭಾರತಕ್ಕಂತು ವಿಶೇಷವಾಗಿದೆ. ಕಳೆದ 12 ವರ್ಷಗಳಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಒಂದೇ ಒಂದು ಸರಣಿಯಲ್ಲಿ ಸೋಲು ಕಾಣಲಿಲ್ಲ. 2008 ಆಗಸ್ಟ್ ಬಳಿಕ ಟೆಸ್ಟ್, ಏಕದಿನ ಹಾಗೂ ಟಿ-20 ಸೇರಿ ಭಾರತ- ಲಂಕಾ ಒಟ್ಟು 59 ಪಂದ್ಯಗಳನ್ನಾಡಿದೆ. ಇದರಲ್ಲಿ ಭಾರತ 44 ಪಂದ್ಯಗಳಲ್ಲಿ ಗೆದ್ದರೆ, ಕೇವಲ 10 ರಲ್ಲಿ ಮಾತ್ರ ಸೋಲುಂಡಿದೆ.

IPL 2020: ನಿಷೇಧದ ಭೀತಿಯಲ್ಲಿ ಕೆಕೆಆರ್ ತಂಡದ ಇಬ್ಬರು ಸ್ಟಾರ್ ಆಟಗಾರರು!

12 ವರ್ಷಗಳ ಸರಣಿಯಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ 16-0 ಅಂತರದಿಂದ ಮೇಲುಗೈ ಸಾಧಿಸಿದೆ. ವಿರಾಟ್ ಕೊಹ್ಲಿ ಕಾಲಿಟ್ಟ ಬಳಿಕವಂತು ಭಾರತ ತಂಡ ಶ್ರೀಲಂಕಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. ಆಡಿದ 7 ಸರಣಿಗಳಲ್ಲಿ ಏಳನ್ನೂ ಗೆದ್ದು ಬೀಗಿದೆ. ಆಡಿದ 6 ಟಿ-20 ಪಂದ್ಯಗಳಲ್ಲಿ 5 ರಲ್ಲಿ ಗೆದ್ದರೆ ಒಂದು ಡ್ರಾ ಆಗಿದೆ.

First published:January 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ