India vs Sri Lanka: ಮ್ಯಾಥ್ಯೂಸ್ ಶತಕ: ಟೀಂ ಇಂಡಿಯಾಗೆ ಸಾಧಾರಣ ಸವಾಲಿತ್ತ ಲಂಕಾ
ICC World cup 2019: ಹಾಗೆಯೇ ಟೀಂ ಇಂಡಿಯಾ ಆರಂಭಿಕರಾಗಿ ಪ್ರಸ್ತುತ ಟೂರ್ನಿಯಲ್ಲಿ ರೋಹಿತ್ ಶರ್ಮಾ ಜೊತೆ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಆದರೆ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಿದ್ದು, 4ನೇ ಕ್ರಮಾಂಕದಲ್ಲಿ ಬಲಿಷ್ಠ ಆಟಗಾರನನ್ನು ಕಣಕ್ಕಿಳಿಸಲು ಕೊಹ್ಲಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ 264 ರನ್ ಪೇರಿಸಿದೆ. ಅನುಭವಿ ಆಟಗಾರ ಅಂಜೆಲೊ ಮ್ಯಾಥ್ಯೂಸ್ ಅವರ ಆಕರ್ಷಕ ಶತಕದ ನೆರವಿನಿಂದ ಲಂಕಾ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಂತಾಯಿತು.
ಇದಕ್ಕೂ ಮುನ್ನ ಟಾಸ್ ಗೆದ್ದ ಲಂಕಾ ನಾಯಕ ಕರುಣಾರತ್ನೆ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಬುಮ್ರಾ ನೀಡಿದ ಶಾಕ್ನಿಂದ ಲಂಕಾ ಆರಂಭಿಕ ಆಘಾತಕ್ಕೊಳಗಾಯಿತು. ಆರಂಭಿಕನಾಗಿ ಕಣಕ್ಕಿಳಿದ ಕರುಣಾರತ್ನೆ(10) 3ನೇ ಓವರ್ಗೆ ಇನಿಂಗ್ಸ್ ಕೊನೆಗೊಳಿಸಿದರು.
ಇನ್ನು ಆರಂಭದಲ್ಲೇ ಸ್ಪೋಟಕ ಆಟಕ್ಕೆ ಒತ್ತು ನೀಡಿದ್ದ ಕುಶಾಲ ಪೆರೆರಾ 3 ಭರ್ಜರಿ ಬೌಂಡರಿಗಳೊಂದಿಗೆ 18 ರನ್ಗಳಿಸಿದ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಬುಮ್ರಾ ಭಾರತಕ್ಕೆ 2ನೇ ಯಶಸ್ಸು ತಂದುಕೊಟ್ಟರು. ಇನ್ನು ಕುಶಾಲ ಮೆಂಡೀಸ್(3) ರವೀಂದ್ರ ಜಡೇಜ ಅವರ ಸ್ಪಿನ್ ಎಸೆತವನ್ನು ಗುರುತಿಸಲು ಎಡವಿ ಸ್ಟಂಪ್ ಆಗುವ ಆಗಿ ಪೆವಿಲಿಯನ್ಗೆ ಹೆಜ್ಜೆ ಹಾಕಿದರು. 12ನೇ ಓವರ್ ಎಸೆದ ಹಾರ್ದಿಕ್ ಪಾಂಡ್ಯರ ಬೌನ್ಸರ್ಗೆ ಬೆದರಿದ ಅವಿಷ್ಕಾ ಫೆರ್ನಾಂಡೊ(20) ಸಹ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
Sri Lanka are collapsing at Headingley!
A slower-ball bouncer from Hardik Pandya takes the glove as Avishka Fernando looks to ramp.
— Cricket World Cup (@cricketworldcup) July 6, 2019
55ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಲಂಕಾಗೆ ಈ ಹಂತದಲ್ಲಿ ಆಸರೆಯಾಗಿದ್ದು ತಿರಿಮನ್ನೆ ಹಾಗೂ ಅಂಜೆಲೊ ಮ್ಯಾಥ್ಯೂಸ್. ರಕ್ಷಣಾತ್ಮಕ ಆಟದ ನಿಧಾನಗತಿಯಲ್ಲಿ ರನ್ ಪೇರಿಸುತ್ತಾ ಹೋದ ಈ ಜೋಡಿ 5ನೇ ವಿಕೆಟ್ಗೆ ನೂರು ರನ್ಗಳ ಭರ್ಜರಿ ಜೊತೆಯಾಟ ಆಡಿದರು. ಇದರ ನಡುವೆ ಮ್ಯಾಥ್ಯೂಸ್ ಆಕರ್ಷಕ ಅರ್ಧಶತಕ ಪೂರೈಸಿದರು.
ಹಾಗೆಯೇ 68 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಲಹಿರು ತಿರಿಮನ್ನೆ ತಂಡದ ಮೊತ್ತ 179 ಆಗಿದ್ದಾಗ ಭರ್ಜರಿ ಹೊಡೆತಕ್ಕೆ ಮುಂದಾಗಿ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಮ್ಯಾಥ್ಯೂಸ್ ಭಾರತದ ಬೌಲರುಗಳ ಮೇಲೆ ಮುಗಿಬಿದ್ದರು. ಪರಿಣಾಮ 115 ಎಸೆತಗಳಲ್ಲಿ ಶತಕ ಸಿಡಿಸಿ ರನ್ ವೇಗವನ್ನು ಹೆಚ್ಚಿಸಿದರು. ಈ ಸೆಂಚುರಿ ಆಟದಲ್ಲಿ 10 ಭರ್ಜರಿ ಬೌಂಡರಿ ಹಾಗೂ 2 ಅಮೋಘ ಸಿಕ್ಸರ್ಗಳು ಮ್ಯಾಥ್ಯೂಸ್ ಬ್ಯಾಟ್ನಿಂದ ಸಿಡಿಯಿತು.
ಇನ್ನು ನಿರ್ಣಾಯಕ ಓವರ್ಗಳಲ್ಲಿ ರನ್ ಗತಿ ಏರಿಸಲು ಮುಂದಾದ ಮ್ಯಾಥ್ಯೂಸ್(115) ಬುಮ್ರಾ ಎಸೆತದಲ್ಲಿ ರೋಹಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಧನಂಜಯ್ ಡಿಸಿಲ್ವಾ 29 ರನ್ಗಳಿಸುವುದರೊಂದಿಗೆ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 264ಕ್ಕೆ ತಂದು ನಿಲ್ಲಿಸಿದರು.
ಭಾರತದ ಪರ ಮಾರಕ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ ಲಂಕಾ ತಂಡದ ಪ್ರಮುಖ 3 ವಿಕೆಟ್ಗಳನ್ನು ಉರುಳಿಸಿ ಯಶಸ್ವಿ ಬೌಲರು ಎನಿಸಿಕೊಂಡರು.
ವಿದಾಯದ ಪಂದ್ಯ:
ಈ ಪಂದ್ಯವು ವೇಗಿ ಲಿಸಿತ್ ಮಾಲಿಂಗ ಅವರ ಕೊನೆಯ ಏಕದಿನವಾಗಿರಲಿದ್ದು, ಟೀಂ ಇಂಡಿಯಾ ವಿರುದ್ಧ ಜಯ ಸಾಧಿಸುವ ಮೂಲಕ ತಮ್ಮ ತಂಡದ ಆಟಗಾರನಿಗೆ ಅವಿಸ್ಮರಣೀಯ ಬೀಳ್ಕೊಡುಗೆ ನೀಡಲು ಶ್ರೀಲಂಕಾ ಟೀಂ ಯೋಜನೆ ರೂಪಿಸಿದೆ.
ಇನ್ನು ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಗಟ್ಟಿಯಾಗಿರಿಸಿರುವ ವಿರಾಟ್ ಕೊಹ್ಲಿ ಪಡೆ ಅಗ್ರಸ್ಥಾನವನ್ನು ಅಲಂಕರಿಸುವ ಮೂಲಕ ಸೆಮೀಸ್ನಲ್ಲಿ ಕಿವೀಸ್ ಅನ್ನು ಎದುರು ನೋಡಲಿದೆ. ಭಾರತ 8 ಪಂದ್ಯಗಳ ಪೈಕಿ 6 ಪಂದ್ಯ ಗೆದ್ದು ಒಂದು ಪಂದ್ಯ ಸೋತಿದ್ದು, ಮತ್ತೊಂದು ಪಂದ್ಯ ಮಳೆಯಿಂದ ರದ್ದಾಗಿದೆ. ಹಾಗಾಗಿ ಇಂದಿನ ಪಂದ್ಯ ಗೆದ್ದರೆ ಭಾರತ ಅಂಕಪಟ್ಟಿಯಲ್ಲಿ 15 ಪಾಯಿಂಟ್ ಗಳಿಸಿದಂತಾಗುತ್ತದೆ. ಸದ್ಯ ಆಸ್ಟ್ರೇಲಿಯಾ ರ್ಯಾಂಕಿಂಗ್ನಲ್ಲಿ 14 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ.
ಇಂದೇ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗುತ್ತಿದ್ದು, ಇಲ್ಲಿ ಹರಿಣರು ಗೆದ್ದರೆ ಸೆಮಿ ಫೈನಲ್ನಲ್ಲಿ ಭಾರತದ ಎದುರಾಳಿಯಾಗಿ ನ್ಯೂಜಿಲೆಂಡ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಹಾಗೆಯೇ ಇಂದಿನ ಮ್ಯಾಚ್ನಲ್ಲಿ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಚಹಾಲ್ ಬದಲಿಗೆ ಕುಲ್ದೀಪ್ ಯಾದವ್ಗೆ ಸ್ಥಾನ ನೀಡಲಾಗಿದೆ. ಹಾಗೆಯೇ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ರವೀಂದ್ರ ಜಡೇಜ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ಕನ್ನಡಿಗ ಮಾಯಾಂಕ್ ಅಗರ್ವಾಲ್ಗೆ ಸ್ಥಾನ ಸಿಗಲಿದೆ ಎನ್ನಲಾಗಿತ್ತಾದರೂ, ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ನಿ ಪರೀಕ್ಷೆ ಮಾಡಲು ಕೊಹ್ಲಿ ಆಸಕ್ತಿವಹಿಸಿಲ್ಲ ಎಂದು ತಿಳಿದು ಬಂದಿದೆ.
ಕನ್ನಡಿಗ ಮಯಾಂಕ್ ಅಗರ್ವಾಲ್ಗೆ ಅವಕಾಶ ಸಿಗಲಿದ್ದು, ಈ ಮೂಲಕ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಲು ಕೊಹ್ಲಿ ಯೋಜನೆ ಹಾಕಿಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗಿದ್ದು, ಆದರೆ 4ನೇ ಕ್ರಮಾಂಕದಲ್ಲಿ ಕಾರ್ತಿಕ್ ವಿಫಲರಾಗಿದ್ದರು. ಹೀಗಾಗಿ ಮಯಾಂಕ್ಗೆ ಅವಕಾಶವೊಂದು ನೀಡುವ ಸಾಧ್ಯತೆಯಿದೆ ಎನ್ನಲಾಗಿತ್ತು.
ಈ ಹಿಂದೆ ಭಾರತ ಎ ತಂಡದ ಇಂಗ್ಲೆಂಡ್ ಸರಣಿಯಲ್ಲಿ ನಾಲ್ಕು ಇನಿಂಗ್ಸ್ನಲ್ಲಿ ಮಯಾಂಕ್ ಬ್ಯಾಟ್ನಿಂದ ಹರಿದು ಬಂದಿರುವುದು 287 ರನ್ಗಳು. ಹಾಗೆಯೇ ಲೈಸ್ಟರ್ಶೈರ್ ಎದುರು 151 ರನ್ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಈ ಪಂದ್ಯವು ಜುಲೈ ಮತ್ತು ಆಗಸ್ಟ್ ಅವಧಿಯಲ್ಲಿ ನಡೆದಿರುವುದು ಕೂಡ ಮಯಾಂಕ್ಗೆ ಅದೃಷ್ಟ ಬಾಗಿಲು ತೆರೆಯಲಿದೆ ಎಂದೇ ಹೇಳಲಾಗಿತ್ತು.
ಏಕೆಂದರೆ ಇಂಗ್ಲೆಂಡ್ನ ಹವಾಮಾನಕ್ಕೆ ಹೊಂದಿಕೊಳ್ಳಲು ಇದು ಕನ್ನಡಿಗನಿಗೆ ನೆರವಾಗಲಿದೆ ಎಂಬುದನ್ನು ಮ್ಯಾನೇಜ್ಮೆಂಟ್ ಗಣನೆಗೆ ತೆಗೆದುಕೊಂಡಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಯಾಂಕ್ ಅಗರ್ವಾಲ್ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಬಹುದು. ಈ ಮೂಲಕ ಸೆಮೀಸ್ ಆರಂಭಕ್ಕೂ ಮುನ್ನ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಕಾಣಲು ತಂಡದ ಮ್ಯಾನೇಜ್ಮೆಂಟ್ ಯೋಜನೆ ಹಾಕಿಕೊಂಡಿದೆ ಹೇಳಲಾಗಿದೆ. ಆದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಂಡರೆ ಮುಂದಿನ ಪಂದ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಟೀಂ ಮ್ಯಾನೇಜ್ಮೆಂಟ್ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಿಕೊಂಡಿದೆ.