India vs Sri Lanka: ವರ್ಷ ಮೊದಲ ಟಿ-20 ಸರಣಿ ಗೆದ್ದು ಬೀಗಿದ ಭಾರತ; ಲಂಕಾ ವಿರುದ್ಧದ ದಾಖಲೆ ಮತ್ತಷ್ಟು ಭದ್ರ!

78 ರನ್​​ಗಳ ಭರ್ಜರಿ ಜಯದೊಂದಿಗೆ ಭಾರತ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ಅಲ್ಲದೆ ಶ್ರೀಲಂಕಾ ವಿರುದ್ಧ ತನ್ನ ದಾಖಲೆಯನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿತು. ಕಳೆದ 12 ವರ್ಷಗಳಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ ಒಂದೇ ಒಂದು ಸರಣಿಯಲ್ಲಿ ಸೋಲು ಕಾಣಲಿಲ್ಲ.

Vinay Bhat | news18-kannada
Updated:January 10, 2020, 10:18 PM IST
India vs Sri Lanka: ವರ್ಷ ಮೊದಲ ಟಿ-20 ಸರಣಿ ಗೆದ್ದು ಬೀಗಿದ ಭಾರತ; ಲಂಕಾ ವಿರುದ್ಧದ ದಾಖಲೆ ಮತ್ತಷ್ಟು ಭದ್ರ!
ಟೀಂ ಇಂಡಿಯಾ
  • Share this:
ಪುಣೆ (. 10): ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಅಂತಿಮ ಮೂರನೇ ಟಿ-20 ಪಂದ್ಯದಲ್ಲಿ ಭಾರತ 78 ರನ್​​ಗಳ ಭರ್ಜರಿ ಜಯ ಸಾಧಿಸಿದೆ. ರಾಹುಲ್- ಧವನ್ ಅರ್ಧಶತಕ ಹಾಗೂ ಬೌಲರ್​ಗಳ ಸಂಘಟಿತ ದಾಳಿಯ ನೆರವಿನಿಂದ ಹೊಸ ವರ್ಷದ ಮೊದಲ ಸರಣಿಯನ್ನು 2-0 ಅಂತರದಿಂದ ಭಾರತ ವಶಪಡಿಸಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಉಳಿದ ಟೀಂ ಇಂಡಿಯಾ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಕೆ ಎಲ್ ರಾಹುಲ್ ಹಾಗೂ ಶಿಖರ್ ಧವನ್ ಬಿರುಸಿನ ಆಟವಾಡಿದರು. ಬೌಂಡರಿಗಳ ಮಳೆ ಸುರಿಸಿದ ಈ ಜೋಡಿ 97 ರನ್​ಗಳ ಜೊತೆಯಾಟ ಆಡಿತು.

 


ಬೊಂಬಾಟ್ ಆಟವಾಡಿದ ಧವನ್ 36 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​​ನೊಂದಿಗೆ 52 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೆ ಬಂದ ಸಂಜು ಸ್ಯಾಮ್ಸನ್ ತಾನು ಎದುರಿಸಿದ ಮೊದಲ ಎಸೆತದಲ್ಲೇ ಚೆಂಡನ್ನು ಸಿಕ್ಸ್​ಗೆ ಅಟ್ಟಿದರು.

ಆದರೆ, 2ನೇ ಎಸೆತದಲ್ಲಿ ಎಲ್​ಬಿ ಬಲೆಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇತ್ತ ರಾಹುಲ್ ಕೂಡ ಅರ್ಧಶತಕ ಸಿಡಿಸಿ ಸುಸ್ತಾದರು. ರಾಹುಲ್ 36 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್​​ನೊಂದಿಗೆ 54 ರನ್ ಗಳಿಸಿದರು. ಶ್ರೇಯಸ್ ಐಯರ್ ಒಂದು ಬೌಂಡರಿಗೆ ತಮ್ಮ ಇನ್ನಿಂಗ್ಸ್​ ಅಂತ್ಯಗೊಳಿಸಿದರು.

ಹೀಗೆ ದಿಢೀರ್ ಕುಸಿತ ಕಂಡ ಭಾರತಕ್ಕೆ ಆಸರೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಶ್ ಪಾಂಡೆ ತಂಡವನ್ನು ಮೇಲೆತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಜೋಡಿ 42 ರನ್​ಗಳ ಕಾಣಿಕೆ ನೀಡಿತು. ಕೊಹ್ಲಿ 17 ಎಸೆತಗಳಲ್ಲಿ 26 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ ಸೊನ್ನೆ ಸುತ್ತಿದರು.

IND vs SL: ಜಸ್​ಪ್ರೀತ್ ಬುಮ್ರಾ ನೂತನ ದಾಖಲೆ; ಈವರೆಗೆ ಯಾರು ಮಾಡಿಲ್ಲ ಈ ಸಾಧನೆ!

ಕೊನೆ ಹಂತದಲ್ಲಿ ಮನೀಶ್ ಪಾಂಡೆ(31*) ಹಾಗೂ ಶಾರ್ದೂಲ್ ಠಾಕೂರ್ ಅಬ್ಬರಿಸಿದರು. ಠಾಕೂರ್ ಕೇವಲ 8 ಎಸೆತಗಳಲ್ಲಿ ಅಜೇಯ 22 ರನ್ ಚಚ್ಚಿದರು. ಅಂತಿಮವಾಗಿ ಭಾರತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತು. ಲಂಕಾ ಪರ ಲಕ್ಷಣ್ ಸಂದಕನ್ 3 ವಿಕೆಟ್ ಕಿತ್ತರೆ, ವನಿಂದು ಹಸರಂಗ ಹಾಗೂ ಲಹಿರು ಕುಮಾರ ತಲಾ 1 ವಿಕೆಟ್ ಪಡೆದರು.

202 ರನ್​ಗಳ ಟಾರ್ಗೆಟ್ ಬೆನ್ನಟ್ಟಿರುವ ಶ್ರೀಲಂಕಾ ಆರಂಭದಿಂದ ವಿಕೆಟ್ ಕಳೆದುಕೊಂಡಿ ಸಾಗಿತು. ಜಸ್​ಪ್ರೀತ್ ಬುಮ್ರಾ ಮೊದಲ ಓವರ್​ನ ಕೊನೆಯ ಎಸೆತದಲ್ಲಿ ಧನುಷ್ಕಾ ಗುಣತಿಲಕ(1) ಸುಂದರ್​ಗೆ ಕ್ಯಾಚ್ ನೀಡಿ ಔಟ್ ಆದರು.

ಇದರ ಬೆನ್ನಲ್ಲೆ ಮುಂದಿನ ಶಾರ್ದೂಲ್ ಠಾಕೂರ್ ಓವರ್​ನಲ್ಲಿ ಆವಿಷ್ಕಾ ಫೆರ್ನಾಂಡೊ(9) ಕೂಡ ನಿರ್ಗಮಿಸಿದರೆ, ಓಶಾಡ ಫೆರ್ನಾಂಡೊ(2) ರನೌಟ್​ಗೆ ಬಲಿಯಾದರು. ನವ್​ದೀಪ್ ಸೈನಿ ತನ್ನ 2ನೇ ಓವರ್​ನ ಮೊದಲ ಎಸೆತದಲ್ಲೇ ಕುಶಾಲ್ ಪೆರೇರಾ(7) ಅವರನ್ನು ಕ್ಲೀನ್ ಬೌಲ್ಡ್​ ಮಾಡಿದರು.

ಸುಮಾರು ಒಂದುವರೆ ವರ್ಷದ ಬಳಿಕ ಲಂಕಾ ಪರ ಟಿ-20 ಪಂದ್ಯವಾಡಿದ ಆ್ಯಂಜಲೊ ಮ್ಯಾಥ್ಯೂಸ್ ಕೂಡ ಹೆಚ್ಚು ಪರಿಣಾಮಕಾರಿಯಾಗಿ ಗೋಚರಿಸಲಿಲ್ಲ. 20 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಬಾರಿಸಿ ಮ್ಯಾಥ್ಯೂಸ್ 31 ರನ್​ಗೆ ಔಟ್ ಆದರು.

Sanju Samson: 5 ವರ್ಷದ ಬಳಿಕ ಸ್ಯಾಮ್ಸನ್ ಕಣಕ್ಕೆ; ಭಾರತ ಪರ ದಾಖಲೆ ಬರೆದ ಸಂಜು!

ಇತ್ತ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಧನಂಜಯ್ ಡಿ ಸಿಲ್ವಾ ಮಾತ್ರ ಏಕಾಂಗಿ ಹೋರಾಟ ನಡೆಸುತ್ತಿದ್ದರು. ಆದರೆ, ಇವರಿಗೆ ಯಾವೊಬ್ಬ ಬ್ಯಾಟ್ಸ್​ಮನ್​ ಸಾಥ್ ನೀಡದ ಪರಿಣಾಮ ಶ್ರೀಲಂಕಾ ಅಂತಿಮವಾಗಿ 15.5 ಓವರ್​ನಲ್ಲಿ 123 ರನ್​ಗೆ ಆಲೌಟ್ ಆಯಿತು.

ಧನಂಜಯ್ 36 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಬಾರಿಸಿ 57 ರನ್ ಗಳಿಸಿದರು. ಭಾರತ ಪರ ನವ್​ದೀಪ್​ ಸೈನಿ  3 ವಿಕೆಟ್ ಕಿತ್ತರೆ, ಠಾಕೂರ್ ಹಾಗೂ ಸುಂದರ್ ತಲಾ 2 ಹಾಗೂ ಜಸ್​ಪ್ರೀತ್ ಬುಮ್ರಾ 1 ವಿಕೆಟ್ ಪಡೆದರು.

 



78 ರನ್​​ಗಳ ಭರ್ಜರಿ ಜಯದೊಂದಿಗೆ ಭಾರತ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ಅಲ್ಲದೆ ಶ್ರೀಲಂಕಾ ವಿರುದ್ಧ ತನ್ನ ದಾಖಲೆಯನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿತು. ಕಳೆದ 12 ವರ್ಷಗಳಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ ಒಂದೇ ಒಂದು ಸರಣಿಯಲ್ಲಿ ಸೋಲು ಕಾಣಲಿಲ್ಲ.
First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ