India vs Sri Lanka Live: 143 ಟಾರ್ಗೆಟ್; ಕೊಹ್ಲಿ- ಐಯರ್ ಜೊತೆಯಾಟ; ಗೆಲುವಿನತ್ತ ಭಾರತ

ಕೊಹ್ಲಿ ಪಡೆಗೆ ಇಂದೋರ್​ನ ಹೋಲ್ಕಾರ್ ಕ್ರೀಡಾಂಗಣ ಅದೃಷ್ಟದ ಅಂಗಳ. ಯಾಕೆಂದರೆ, ಈ ಕ್ರೀಡಾಂಗಣದಲ್ಲಿ ಭಾರತ ಈವರೆಗೆ ಒಂದೇ ಒಂದು ಪಂದ್ಯ ಸೋತಿಲ್ಲ. ಈ ದಾಖಲೆ ಕೇವಲ ಟಿ-20ಗೆ ಮಾತ್ರ ಸೀಮಿತವಾಗಿಲ್ಲ. ಮೂರೂ ಮಾದರಿಯ ಕ್ರಿಕೆಟ್​ನಲ್ಲೂ ಮುಂದುವರೆದಿದೆ.

Vinay Bhat | news18-kannada
Updated:January 7, 2020, 9:59 PM IST
India vs Sri Lanka Live: 143 ಟಾರ್ಗೆಟ್; ಕೊಹ್ಲಿ- ಐಯರ್ ಜೊತೆಯಾಟ; ಗೆಲುವಿನತ್ತ ಭಾರತ
ಕೊಹ್ಲಿ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಆಡಿದ 78 ಪಂದ್ಯಗಳಲ್ಲಿ 74 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಇನ್ನು 8 ಸಿಕ್ಸ್ ಬಾರಿಸಿದರೆ T20I ಕ್ರಿಕೆಟ್ನಲ್ಲಿ 50ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ 2ನೇ ನಾಯಕ ಎಂಬ ದಾಖಲೆ ಬರೆಯಲಿದ್ದಾರೆ.
  • Share this:
ಇಂದೋರ್​ (ಜ. 07): ಇಲ್ಲಿನ ಹೋಲ್ಕಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ ಗೆಲ್ಲಲು 143 ರನ್​ಗಳ ಟಾರ್ಗೆಟ್ ನೀಡಿದೆ.

ಸದ್ಯ ಈ ಗುರಿ ಬೆನ್ನಟ್ಟಿರುವ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತಾದರು, ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾದ ರಾಹುಲ್ ಹಾಗೂ ಶಿಖರ್ ಧವನ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 71 ರನ್​ಗಳ ಜೊತೆಯಟ ಆಡಿತು.

ಚೆನ್ನಾಗಿಯೆ ಆಡುತ್ತಿದ್ದ ರಾಹುಲ್ 32 ಎಸೆತಗಳಲ್ಲಿ 45 ರನ್ ಬಾರಿಸಿ ಔಟ್ ಆದರು. ಇದರ ಬೆನ್ನಲ್ಲೆ 32 ರನ್​ಗೆ ಧವನ್ ಎಲ್​ಗೆ ಬಲೆಗೆ ಸಿಲುಕಿದರು.

ಸದ್ಯ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯರ್ ಕ್ರೀಸ್​ನಲ್ಲಿದ್ದಾರೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಶ್ರೀಲಂಕಾ ಬಿರುಸಿನ ಆರಂಭ ಪಡೆದುಕೊಳ್ಳುವ ಜೊತೆ ವಿಕೆಟ್ ಅನ್ನೂ ಕಳೆದುಕೊಂಡಿತು. ವಾಷಿಂಗ್ಟನ್ ಸುಂದರ್ ಬೌಲಿಂಗ್​ನಲ್ಲಿ 22 ರನ್ ಗಳಿಸಿದ್ದ ಆವಿಷ್ಕಾ ಫೆರ್ನಾಂಡೊ ಸೈನಿಗೆ ಕ್ಯಾಚಿತ್ತು ನಿರ್ಗಮಿಸಿದರು.

ಇದರ ಬೆನ್ನಲ್ಲೆ ನವ್​ದೀಪ್ ಸೈನಿ ಯಾರ್ಕರ್ ದಾಳಿಗೆ ಧನುಷ್ಕಾ ಗುಣತಿಲಕ(20) ಕ್ಲೀನ್ ಬೌಲ್ಡ್​ ಆದರು. ಓಶಾಡ ಫೆರ್ನಾಂಡೊ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 10 ರನ್ ಗಳಿಸಿರುವಾಗ ಸ್ಟಂಪ್​ಔಟ್​ಗೆ ಬಲಿಯಾದರು.

IND vs SL: ಥೇಟ್ ಹರ್ಭಜನ್ ಮಾದರಿಯಲ್ಲಿ ಬೌಲಿಂಗ್ ಮಾಡಿದ ಕಿಂಗ್ ಕೊಹ್ಲಿ; ಇಲ್ಲಿದೆ ವೈರಲ್ ವಿಡಿಯೋಈ ನಡುವೆ 3 ಸಿಕ್ಸರ್ ಚಚ್ಚಿದ ಕುಶಾಲ್ ಪೆರೇರಾ ತಂಡದ ರನ್ ಗತಿಯನ್ನು ಏರಿಸುವಲ್ಲಿ ಯಶಸ್ವಿಯಾದರು. ಆದರೆ, 28 ಎಸೆತಗಳಲ್ಲಿ 34 ರನ್ ಬಾರಿಸಿ ಪರೇರಾ ಕೂಡ ಪೆವಿಲಿಯನ್ ಹಾದಿ ಹಿಡಿದರು. ಬಂದ ಬೆನ್ನಲ್ಲೆ ಭಾನುಕ ರಾಜಪಕ್ಷ(9) ಔಟ್ ಆದರು.

ಕೊನೆಯಲ್ಲಿ ಬಂದ ಬ್ಯಾಟ್ಸ್​ಮನ್​ಗಳು ಹೆಚ್ಚು ರನ್ ಕಲೆಹಾಕಲಿಲ್ಲ. ಠಾಕೂರ್ 19ನೇ ಓವರ್​​ನಲ್ಲಿ 3 ವಿಕೆಟ್ ಕಿತ್ತು ಮಿಂಚಿದರು. ಅಂತಿಮವಾಗಿ ಶ್ರೀಲಂಕಾ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿತಷ್ಟೆ. ಭಾರತ ಪರ ಶಾರ್ದೂಲ್ ಠಾಕೂರ್ 3, ನವ್​ದೀಪ್ ಸೈನಿ, ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್ ಹಾಗೂ ಜಸ್​ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಮೊದಲ ಟಿ-20 ಪಂದ್ಯಕ್ಕೆ ಆಯ್ಕೆ ಮಾಡಿದ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ.

ಭಾರತ ತಂಡ: ಶಿಖರ್ ಧವನ್, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಐಯರ್, ರಿಷಭ್ ಪಂತ್ (ವಿಕೆಟ್-ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ.

IND vs SL: ಮೊದಲ ಟಿ-20 ಪಂದ್ಯ ನಡೆಯದಿದ್ದರೂ ಸೃಷ್ಟಿಯಾಯಿತು ಹೊಸ ವಿವಾದ!

ಇತ್ತ ಶ್ರೀಲಂಕಾ ತಂಡ ಕೂಡ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯಕ್ಕೆ ಆಯ್ಕೆ ಮಾಡಿದ ಆಟಗಾರರೆ ಇಂದಿನ ಪಂದ್ಯದಲ್ಲೂ ಆಡುತ್ತಿದ್ದಾರೆ.

ಶ್ರೀಲಂಕಾ ತಂಡ: ಲಸಿತ್ ಮಲಿಂಗಾ (ನಾಯಕ), ಧನುಷ್ಕಾ ಗುಣತಿಲಕ, ಆವಿಷ್ಕಾ ಫೆರ್ನಾಂಡೊ, ಕುಶಾಲ್ ಪೆರೇರಾ, ಭಾನುಕ ರಾಜಪಕ್ಷ, ಓಶಾಡ ಫೆರ್ನಾಂಡೊ, ಧನಂಜಯ್ ಡಿ ಸಿಲ್ವಾ, ದಾಸುನ್ ಶನಕಾ, ಇಸುರು ಉದಾನ, ವನಿಂದು ಹಸರಂಗ, ಲಹಿರು ಕುಮಾರ.

 
First published: January 7, 2020, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading