India vs Sri Lanka: ಮೊದಲ ಟಿ-20 ಆಟಕ್ಕೆ ಮಳೆ ಅಡ್ಡಿ; ಪಂದ್ಯ ರದ್ದು!

India vs Sri Lanka Live Cricket Score, 1st T20I Match at Guwahati: 12 ವರ್ಷಗಳ ಸರಣಿಯಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ 16-0 ಅಂತರದಿಂದ ಮೇಲುಗೈ ಸಾಧಿಸಿದೆ. ವಿರಾಟ್ ಕೊಹ್ಲಿ ಕಾಲಿಟ್ಟ ಬಳಿಕವಂತು ಭಾರತ ತಂಡ ಶ್ರೀಲಂಕಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.

Vinay Bhat | news18-kannada
Updated:January 5, 2020, 10:13 PM IST
India vs Sri Lanka: ಮೊದಲ ಟಿ-20 ಆಟಕ್ಕೆ ಮಳೆ ಅಡ್ಡಿ; ಪಂದ್ಯ ರದ್ದು!
ಪಿಚ್ ಪರಿಶೀಲಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
  • Share this:
ಗುವಾಹಟಿ (ಜ. 05): ಇಲ್ಲಿನ ಬರ್ಸಾಪಾರ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಶ್ರೀಲಂಕಾ ನಡುವಣ ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಇನ್ನೇನು ಪಂದ್ಯ ಆರಂಭವಾಗಬೇಕು ಎಂಬುವಹೊತ್ತಿಗೆ ಇದ್ದಕ್ಕಿದ್ದಂತೆ ಜೋರಾಗಿ ಭಾರಿ ಮಳೆ ಸುರಿಯಿತು.

 ಸ್ವಲ್ಪ ಹೊತ್ತಿನ ಬಳಿಕ ಮಳೆ ನಿತ್ತಿತಾದರೂ ಸಿಬ್ಬಂದಿಗಳು ಒದ್ದೆಯಾಗಿದ್ದ ಪಿಚ್‌ ಒಣಗಿಸಲು ವ್ಯಾಕ್ಯೂಮ್ ಕ್ಲೀನ್‌ನರ್‌ ಬಳಸಿ ಹರಸಾಹಸ ಪಟ್ಟರು. ಆದರೆ, ಈ ಹೊತ್ತಿಗೆ ಮತ್ತೆ ಮಳೆ ಶುರುವಾದ ಪರಿಣಾಮ ಅಂತಿಮವಾಗಿ ಅಂಪೈರ್​ಗಳು ಪಂದ್ಯವನ್ನು ಸ್ಥಗಿತಗೊಳಿಸುವ ತೀರ್ಮಾನ ಕೈಗೊಂಡರು.

ಗುವಾಹಟಿಯಲ್ಲಿ ಬೆಳಗಿನಿಂದಲೆ ಮೋಡ ಮುಸುಕಿದ ವಾತಾವರಣವಿತ್ತು. ಅಲ್ಲದೆ ಹವಾಮಾನ ಇಲಾಖೆ ಟಿ-20 ಪಂದ್ಯಕ್ಕೆ ವರುಣ ಅಡ್ಡಿ ಪಡಿಸ ಬಹುದೆಂದು ಎಚ್ಚರಿಕೆ ನೀಡಿತ್ತು.

ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾ ಈ 11 ಆಟಗಾರರನ್ನು ಆಯ್ಕೆ ಮಾಡಿತ್ತು.

ಭಾರತ ತಂಡ: ಶಿಖರ್ ಧವನ್, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಐಯರ್, ರಿಷಭ್ ಪಂತ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್​ಪ್ರೀತ್​ ಬುಮ್ರಾ, ನವ್​ದೀಪ್ ಸೈನಿ.

IPL 2020: ಐಪಿಎಲ್​​ನಿಂದ ದೂರ ಸರಿದರೂ ಈ ಆಟಗಾರನ ದಾಖಲೆ ಮುರಿಯುವುದು ಕಷ್ಟಸಾಧ್ಯ!

ಇತ್ತ ಶ್ರೀಲಂಕಾ ಕೂಡ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿತ್ತು.

ಶ್ರೀಲಂಕಾ ತಂಡ: ಲಸಿತ್ ಮಲಿಂಗಾ (ನಾಯಕ), ಧನುಷ್ಕಾ ಗುಣತಿಲಕ, ಆವಿಷ್ಕಾ ಫೆರ್ನಾಂಡೊ, ಕುಶಾಲ್ ಪೆರೇರಾ, ಭಾನುಕ ರಾಜಪಕ್ಷ, ಓಶಾಡ ಫೆರ್ನಾಂಡೊ, ಧನಂಜಯ್ ಡಿ ಸಿಲ್ವಾ, ದಾಸುನ್ ಶನಕಾ, ಇಸುರು ಉದಾನ, ವನಿಂದು ಹಸರಂಗ, ಲಹಿರು ಕುಮಾರ.

ಕಳೆದ 12 ವರ್ಷಗಳಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಒಂದೇ ಒಂದು ಸರಣಿಯಲ್ಲಿ ಸೋಲು ಅನುಭವಿಸಲಿಲ್ಲ. 2008 ಆಗಸ್ಟ್ ಬಳಿಕ ಟೆಸ್ಟ್, ಏಕದಿನ ಹಾಗೂ ಟಿ-20 ಸೇರಿ ಭಾರತ- ಲಂಕಾ ಒಟ್ಟು 59 ಪಂದ್ಯಗಳನ್ನಾಡಿದೆ. ಇದರಲ್ಲಿ ಭಾರತ 44 ಪಂದ್ಯಗಳಲ್ಲಿ ಗೆದ್ದರೆ, ಕೇವಲ 10 ರಲ್ಲಿ ಮಾತ್ರ ಸೋಲುಂಡಿದೆ.

12 ವರ್ಷಗಳ ಸರಣಿಯಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ 16-0 ಅಂತರದಿಂದ ಮೇಲುಗೈ ಸಾಧಿಸಿದೆ. ವಿರಾಟ್ ಕೊಹ್ಲಿ ಕಾಲಿಟ್ಟ ಬಳಿಕವಂತು ಭಾರತ ತಂಡ ಶ್ರೀಲಂಕಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. ಆಡಿದ 7 ಸರಣಿಗಳಲ್ಲಿ ಏಳನ್ನೂ ಗೆದ್ದು ಬೀಗಿದೆ. ಆಡಿದ 6 ಟಿ-20 ಪಂದ್ಯಗಳಲ್ಲಿ 5 ರಲ್ಲಿ ಗೆದ್ದರೆ ಒಂದು ಡ್ರಾ ಆಗಿದೆ.
First published:January 5, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ