ವಿಶ್ವಕಪ್​ನಲ್ಲಿಂದು ಶ್ರೀಲಂಕಾಗೆ ಭಾರತ ಸವಾಲು; ಗೆದ್ದರೆ ಕೊಹ್ಲಿ ಪಡೆಗಿದೆ ಮೊದಲ ಸ್ಥಾನಕ್ಕೇರುವ ಅವಕಾಶ

ICC Cricket World cup 2019: ಸದ್ಯ ಆಸ್ಟ್ರೇಲಿಯಾ ರ್ಯಾಂಕಿಂಗ್​ನಲ್ಲಿ 14 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ. ಒಂದೊಮ್ಮೆಆಸ್ಟ್ರೇಲಿಯಾ ವಿರುದ್ಧ ಸೌತ್​ ಆಫ್ರಿಕಾ ಗೆದ್ದು, ಭಾರತ ಶ್ರೀಲಂಕಾ ವಿರುದ್ಧ ಜಯ ಗಳಿಸಿದರೆ ಕೊಹ್ಲಿ ಪಡೆ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.

Rajesh Duggumane | news18
Updated:July 6, 2019, 7:59 AM IST
ವಿಶ್ವಕಪ್​ನಲ್ಲಿಂದು ಶ್ರೀಲಂಕಾಗೆ ಭಾರತ ಸವಾಲು; ಗೆದ್ದರೆ ಕೊಹ್ಲಿ ಪಡೆಗಿದೆ ಮೊದಲ ಸ್ಥಾನಕ್ಕೇರುವ ಅವಕಾಶ
ವಿರಾಟ್​-ಧೋನಿ
  • News18
  • Last Updated: July 6, 2019, 7:59 AM IST
  • Share this:
ವಿಶ್ವಕಪ್​ನಲ್ಲಿಂದು ಲೀಗ್​ ಹಂತದ ಕೊನೆಯ ಎರಡು ಪಂದ್ಯಗಳು ನಡೆಯುತ್ತಿವೆ. ವಿಶ್ವಕಪ್​ನಿಂದಲೇ ಹೊರನಡೆದಿರುವ ಶ್ರೀಲಂಕಾ ತಂಡವನ್ನು ಭಾರತ ಇಂದು ಎದುರಿಸಲಿದೆ. ಶ್ರೀಲಂಕಾಗೆ ಈ ಪಂದ್ಯ ಪ್ರಮುಖವಲ್ಲದಿದ್ದರೂ ಭಾರತದ ಪಾಲಿಗೆ ಬಹಳ ಮಹತ್ವ ಪಡೆದುಕೊಂಡಿದೆ. ಮತ್ತೊಂದೆಡೆ, ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಕಾದಾಡಲಿದೆ.

ಭಾರತ 8 ಪಂದ್ಯಗಳ ಪೈಕಿ 6 ಪಂದ್ಯ ಗೆದ್ದು ಒಂದು ಪಂದ್ಯ ಸೋತಿದೆ. ಮತ್ತೊಂದು ಪಂದ್ಯ ಮಳೆಯಿಂದ ರದ್ದಾಗಿದೆ. ಹಾಗಾಗಿ ಇಂದಿನ ಪಂದ್ಯ ಗೆದ್ದರೆ ಭಾರತ ಅಂಕಪಟ್ಟಿಯಲ್ಲಿ 15 ಪಾಯಿಂಟ್​ ಗಳಿಸಿದಂತಾಗುತ್ತದೆ. ಸದ್ಯ ಆಸ್ಟ್ರೇಲಿಯಾ ರ್ಯಾಂಕಿಂಗ್​ನಲ್ಲಿ 14 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ. ಹಾಗಾಗಿ, ಆಸ್ಟ್ರೇಲಿಯಾ ವಿರುದ್ಧ ಸೌತ್​ ಆಫ್ರಿಕಾ ಗೆದ್ದರೆ ಭಾರತ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.

ಶ್ರೀಲಂಕಾ ಆಡಿದ 8 ಪಂದ್ಯಗಳ ಪೈಕಿ ಗೆದ್ದಿದ್ದು ಕೇವಲ ಮೂರು ಪಂದ್ಯಗಳನ್ನು. ಮೂರು ಪಂದ್ಯಗಳಲ್ಲಿ ಸೋತರೆ ಮತ್ತೆರಡು ಮ್ಯಾಚ್​ಗಳು ಮಳೆಗೆ ಆಹುತಿ ಆಗಿವೆ. ಹಾಗಾಗಿ ಆಡುತ್ತಿರುವ ಕೊನೆಯ ಪಂದ್ಯದಲ್ಲಿ ಗೆಲ್ಲಬೇಕು ಎನ್ನುವ ಹಂಬಲದಲ್ಲಿ ಶ್ರೀಲಂಕಾ ಇದೆ. ಮತ್ತೊಂದೆಡೆ ಶ್ರೀಲಂಕಾ ವೇಗಿ ಲಸಿತ್​ ಮಾಲಿಂಗಾಗೆ ಇದು ಕೊನೆಯ ವಿಶ್ವಕಪ್​. ಹೀಗಾಗಿ ಗೌರವದ ವಿದಾಯ ಹೇಳುವ ಹಂಬಲದಲ್ಲೂ ಶ್ರೀಲಂಕಾ ಇದೆ.

ಇನ್ನು ಭಾರತಕ್ಕೆ ಮಧ್ಯಮ ಕ್ರಮಾಂಕದ ಸಮಸ್ಯೆ ಭಾರತವನ್ನು ತೀವ್ರವಾಗಿ ಕಾಡಿದೆ. ಧೋನಿ, ಕೇದಾರ್​ ಜಾಧವ್​ ನಿಧಾನಗತಿಯ ಆಟ ತಂಡಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಗೆಲುವಿನ ಮೂಲಕ ಈ ಬಾರಿಯ ವಿಶ್ವಕಪ್​ಗೆ ವಿದಾಯ ಹೇಳುವ ತವಕದಲ್ಲಿದೆ.

First published: July 6, 2019, 7:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading