IND vs SL: ಇಂದು ಫೈನಲ್ ಟಿ-20; ಗೆದ್ದರೆ ದಾಖಲೆ ಬರೆಯಲಿರುವ ಭಾರತ; ಆದ್ರೆ ಪಂದ್ಯ ನಡೆಯುತ್ತಾ..?

India vs Sri Lanka: ಇನ್ನು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಬೌಲರ್​ಗಳಿಗೆ ಹೆಚ್ಚು ಉಪಯುಕ್ತವಾಗಲಿದೆ. ಅದರಲ್ಲು ಸ್ಪಿನ್ನರ್​​ಗಳಿಗೆ ಇಲ್ಲಿನ ಪಿಚ್ ಹೆಚ್ಚು ಸಹಕರಿಸಲಿದ್ದು, ಭಾರತ ಪರ ಯಜುವೇಂದ್ರ ಚಹಾಲ್ ಕಣಕ್ಕಿಳಿಯುವ ಅಂದಾಜಿದೆ.

news18-kannada
Updated:January 10, 2020, 2:11 PM IST
IND vs SL: ಇಂದು ಫೈನಲ್ ಟಿ-20; ಗೆದ್ದರೆ ದಾಖಲೆ ಬರೆಯಲಿರುವ ಭಾರತ; ಆದ್ರೆ ಪಂದ್ಯ ನಡೆಯುತ್ತಾ..?
ಭಾರತ vs ಶ್ರೀಲಂಕಾ
  • Share this:
ಪುಣೆ (ಜ. 10): ಭಾರತ ಹಾಗೂ ಶ್ರೀಲಂಕಾ ನಡುವೆ ಇಂದು ಅಂತಿಮ ಮೂರನೇ ಟಿ-20 ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಸಜ್ಜಾಗಿದೆ.

ಈಗಾಗಲೇ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯ ಗೆದ್ದರೆ ಭಾರತ ಸರಣಿ ವಶಪಡಿಸಿಕೊಂಡು ದಾಖಲೆ ಬರೆಯಲಿದೆ. ಇತ್ತ ಮಲಿಂಗಾ ಪಡೆ ಕೊನೆಯ ಪಂದ್ಯವನ್ನಾದರು ಗೆದ್ದು ಕನಿಷ್ಠ ಸರಣಿಯನ್ನು ಸಮಬಲ ಸಾಧಿಸಿ ಭಾರತ ಪ್ರವಾಸ ಅಂತ್ಯಗೊಳಿಸುವ ಯೋಜನೆ ಹಾಕಿಕೊಂಡಿದೆ.

ಪಂದ್ಯ ನಡೆಯುತ್ತಾ?, ಪ್ರಮುಖ ಪಂದ್ಯಕ್ಕೆ ವರುಣನ ಅಡ್ಡಿ ಇದೆಯಾ?

MS Dhoni: ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೇ ಧೋನಿಗೆ ಟಿ20 ವಿಶ್ವಕಪ್​ಗೆ ಅವಕಾಶ- ರವಿ ಶಾಸ್ತ್ರಿ

ಮೊದಲ ಟಿ-20 ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದ ರದ್ದಾಗಿತ್ತು. ಟಾಸ್ ಪ್ರಕ್ರಿಯೆ ನಡೆದರೂ ಪಂದ್ಯ ಆರಂಭವಾಗಬೇಕು ಅಷ್ಟರಲ್ಲಿ ವರುಣ ಅಡ್ಡಿಪಡಿಸಿದ ಕಾರಣ ಮೊದಲ ಪಂದ್ಯ ನಡೆಯಲಿಲ್ಲ. ಆದರೆ ಇಂದಿನ ಪಂದ್ಯಕ್ಕೆ ಮಳೆಯ ಅಡೆತಡೆ ಇಲ್ಲವೆಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಬೌಲರ್​ಗಳಿಗೆ ಹೆಚ್ಚು ಉಪಯುಕ್ತವಾಗಲಿದೆ. ಅದರಲ್ಲು ಸ್ಪಿನ್ನರ್​​ಗಳಿಗೆ ಇಲ್ಲಿನ ಪಿಚ್ ಹೆಚ್ಚು ಸಹಕರಿಸಲಿದ್ದು, ಭಾರತ ಪರ ಯಜುವೇಂದ್ರ ಚಹಾಲ್ ಕಣಕ್ಕಿಳಿಯುವ ಅಂದಾಜಿದೆ.

ಇನ್ನು ವೇಗಿ ಜಸ್​ಪ್ರೀತ್​ ಬುಮ್ರಾ ಸುಮಾರು ತಿಂಗಳ ಬಳಿಕ ತಂಡಕ್ಕೆ ಸೇರಿಕೊಂಡಿದ್ದಾರೆ. ಆದರೆ ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸುತ್ತಿಲ್ಲ. ಈ ನಡುವೆ ಹೊಸ ದಾಖಲೆ ಬರೆಯಲು ಬುಮ್ರಾ ಸಜ್ಜಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಬುಮ್ರಾ ಒಂದು ವಿಕೆಟ್‌ ಪಡೆದರೆ ಟಿ-20 ಮಾದರಿಯಲ್ಲಿ ಒಟ್ಟು 53 ವಿಕೆಟ್‌ ಉರುಳಿಸಿದಂತಾಗಲಿದೆ. ಅದು ಟಿ-20 ಮಾದರಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್‌ ಸಾಧನೆ ಎನಿಸಿಕೊಳ್ಳಲಿದೆ.21 ಎಸೆತಗಳಲ್ಲಿ ಶತಕ ಸಿಡಿಸಿದ ಆಟಗಾರನಿಂದ ಮತ್ತೊಂದು ಭರ್ಜರಿ ಸೆಂಚುರಿ

ಬುಮ್ರಾ ಸದ್ಯ ಆರ್‌. ಅಶ್ವಿನ್‌ ಮತ್ತು ಯಜುವೇಂದ್ರ ಚಹಾಲ್‌ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. 52 ವಿಕೆಟ್‌ ಪಡೆಯಲು ಬುಮ್ರಾ 44 ಹಾಗೂ ಅಶ್ವಿನ್‌ 46 ಪಂದ್ಯ ತೆಗೆದುಕೊಂಡಿದ್ದರು. ಆದರೆ, ಚಹಲ್‌ ಕೇವಲ 36 ಪಂದ್ಯಗಳಲ್ಲಿ ಈ ಶ್ರೇಯಸ್ಸಿಗೆ ಭಾಜನರಾಗಿದ್ದಾರೆ.

ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಸರಣಿ ಗೆದ್ದರೆ ತನ್ನ ದಾಖಲೆಯನ್ನು ಮತ್ತಷ್ಟು ಭದ್ರ ಪಡಿಸಿಕೊಂಡು ಮುಂದುವರೆಸಲಿದೆ.  ಕಳೆದ 12 ವರ್ಷಗಳಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ ಒಂದೇ ಒಂದು ಸರಣಿಯಲ್ಲಿ ಸೋಲು ಕಾಣಲಿಲ್ಲ.

2008 ಆಗಸ್ಟ್ ಬಳಿಕ ಟೆಸ್ಟ್, ಏಕದಿನ ಹಾಗೂ ಟಿ-20 ಸೇರಿ ಭಾರತ- ಲಂಕಾ ಒಟ್ಟು 60 ಪಂದ್ಯಗಳನ್ನಾಡಿದೆ. ಇದರಲ್ಲಿ ಭಾರತ 45 ಪಂದ್ಯಗಳಲ್ಲಿ ಗೆದ್ದರೆ, ಕೇವಲ 10 ರಲ್ಲಿ ಮಾತ್ರ ಸೋಲುಂಡಿದೆ. 12 ವರ್ಷಗಳ ಸರಣಿಯಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ 16-0 ಅಂತರದಿಂದ ಮೇಲುಗೈ ಸಾಧಿಸಿದೆ. ವಿರಾಟ್ ಕೊಹ್ಲಿ ಕಾಲಿಟ್ಟ ಬಳಿಕವಂತು ಭಾರತ ತಂಡ ಶ್ರೀಲಂಕಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.

First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ