HOME » NEWS » Sports » CRICKET INDIA VS SRI LANKA 2NF T20 VIRAT KOHLI COPIES HARBHAJAN SINGHS BOWLING ACTION TO PERFECTION IN INDORE VB

IND vs SL: ಥೇಟ್ ಹರ್ಭಜನ್ ಮಾದರಿಯಲ್ಲಿ ಬೌಲಿಂಗ್ ಮಾಡಿದ ಕಿಂಗ್ ಕೊಹ್ಲಿ; ಇಲ್ಲಿದೆ ವೈರಲ್ ವಿಡಿಯೋ

ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಮೊದಲ ಟಿ-20 ಪಂದ್ಯಕ್ಕೆ ಆಯ್ಕೆಯಾದ ಆಟಗಾರರೇ ಇಂದುಕೂಡ ಕಣಕ್ಕಿಳಿದಿದ್ದಾರೆ.

Vinay Bhat | news18-kannada
Updated:January 7, 2020, 8:21 PM IST
IND vs SL: ಥೇಟ್ ಹರ್ಭಜನ್ ಮಾದರಿಯಲ್ಲಿ ಬೌಲಿಂಗ್ ಮಾಡಿದ ಕಿಂಗ್ ಕೊಹ್ಲಿ; ಇಲ್ಲಿದೆ ವೈರಲ್ ವಿಡಿಯೋ
ವಿರಾಟ್ ಕೊಹ್ಲಿ ಬೌಲಿಂಗ್ ಶೈಲಿ
  • Share this:
ಇಂದೋರ್ (ಜ. 07): ಇಲ್ಲಿನ ಹೋಲ್ಕಾರ್ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅದರಂತೆ ಟೀಂ ಇಂಡಿಯಾ ಬೌಲರ್​ಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಈ ನಡುವೆ ಪಂದ್ಯ ಆರಂಭಕ್ಕೂ ಮುನ್ನ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಥೇಟ್ ಹರ್ಭಜನ್ ಸಿಂಗ್ ಬೌಲಿಂಗ್ ಮಾಡುದ ಮಾದರಿಯಲ್ಲೇ ಬಾಲ್ ಎಸೆದು ಅಭ್ಯಾಸ ನಡೆಸಿದರು. ಕೊಹ್ಲಿ ಬೌಲಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

India vs Sri Lanka Live: ಶ್ರೀಲಂಕಾದ 5 ವಿಕೆಟ್ ಪತನ; ಸಂಕಷ್ಟದಲ್ಲಿ ಸಿಂಹಳೀಯರು

ಕೊಹ್ಲಿ ಅವರು ಭಜ್ಜಿ ರೀತಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ವೇಳೆ ಹರ್ಭಜನ್ ಕೂಡ ಅಲ್ಲಿಯೇ ಇದ್ದರು. ತನ್ನ ಮೆಚ್ಚಿನ ಸ್ಪಿನ್ ಬೌಲರ್​​ನ ಹಾಗೆ ಬೌಲಿಂಗ್ ಮಾಡಿ, ಕೊಹ್ಲಿ ಅವರು ಹರ್ಭಜನ್ ಜೊತೆ ಸಂತಸ ಹಂಚಿಕೊಂಡರು.

 ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಮೊದಲ ಟಿ-20 ಪಂದ್ಯಕ್ಕೆ ಆಯ್ಕೆಯಾದ ಆಟಗಾರರೇ ಇಂದುಕೂಡ ಕಣಕ್ಕಿಳಿದಿದ್ದಾರೆ. ಇತ್ತ ಶ್ರೀಲಂಕಾ ಕೂಡ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

RCB ಈ ಆಟಗಾರನನ್ನು ಉಳಿಸಿಕೊಂಡಿದ್ದಕ್ಕೂ ಸಾರ್ಥಕ?; ರಣಜಿಯಲ್ಲಿ ಇವರ ಬೌಲಿಂಗ್ ಬಿರುಗಾಳಿ ನೋಡಿ!

ಭಾರತ ತಂಡ: ಶಿಖರ್ ಧವನ್, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಐಯರ್, ರಿಷಭ್ ಪಂತ್ (ವಿಕೆಟ್-ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ.

ಶ್ರೀಲಂಕಾ ತಂಡ: ಲಸಿತ್ ಮಲಿಂಗಾ (ನಾಯಕ), ಧನುಷ್ಕಾ ಗುಣತಿಲಕ, ಆವಿಷ್ಕಾ ಫೆರ್ನಾಂಡೊ, ಕುಶಾಲ್ ಪೆರೇರಾ, ಭಾನುಕ ರಾಜಪಕ್ಷ, ಓಶಾಡ ಫೆರ್ನಾಂಡೊ, ಧನಂಜಯ್ ಡಿ ಸಿಲ್ವಾ, ದಾಸುನ್ ಶನಕಾ, ಇಸುರು ಉದಾನ, ವನಿಂದು ಹಸರಂಗ, ಲಹಿರು ಕುಮಾರ.

 

Published by: Vinay Bhat
First published: January 7, 2020, 8:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories